Select Your Language

Notifications

webdunia
webdunia
webdunia
webdunia

ಹಿಂದಿ ಕಡೆಗೆ ಹೊರಟ ಕನ್ನಡದ ಅತಿಥಿ

ಹಿಂದಿ ಕಡೆಗೆ ಹೊರಟ ಕನ್ನಡದ ಅತಿಥಿ
, ಶನಿವಾರ, 24 ಜನವರಿ 2015 (10:16 IST)
ಚಂದನವನದ ಅಗ್ರಮಾನ್ಯ ನಿರ್ದೇಶಕ ಪಿ ಶೇಷಾದ್ರಿ ಅವರ ನಿರ್ದೇಶನದ ಅತಿಥಿ  ಚಿತ್ರಬಿಡುಗಡೆ ಆಗಿ ಸುಮಾರು ಹತ್ತು ವರ್ಷಗಳೇ ಕಳೆದಿವೆ. ಈಗ ಆ ಚಿತ್ರವನ್ನು ಹಿಂದಿ  ಭಾಷೆಗೆ  ರೀಮೇಕ್ ಮಾಡಲು ಸಿದ್ಧ ಆಗುತ್ತಿದ್ದಾರೆ ಹಿಂದಿ ಮಂದಿ. ಆ ಚಿತ್ರದ ಹೆಸರು  ದಿ  ರೆಡ್  ಕಾರ್ನರ್ . ಹಿಂದಿ ಅತಿಥಿಯಲ್ಲಿ ನಟಿಸುತ್ತಿದ್ದಾರೆ  ಸುಶಾಂತ್ ಸಿಂಗ್ ಮತ್ತು ದ್ರಿತಿಮಾನ್ ಚಟರ್ಜಿ. ಈ ಕಲಾವಿದರು ಈ ಚಿತ್ರದ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಕನ್ನಡದಲ್ಲಿ ಪ್ರಕಾಶ್ ರಾಜ್ ಮುಖ್ಯ ಪಾತ್ರಧಾರಿಯಾಗಿದ್ದರು. 
ಈ ಚಿತ್ರವನ್ನು ಹಿಂದಿ ಭಾಷೆಯಲ್ಲಿ ರೀಮೇಕ್ ಮಾಡುವ ಬಗ್ಗೆ ಕೇಳಿ ಸಾಕಷ್ಟು ವರ್ಷಗಳು ಕಳೆದಿವೆ, ಆದರೆ ಈಗ ಆ ಚಿತ್ರಕ್ಕೆ ಜೀವ ಬಂದಿದೆ ಎಂದಿದ್ದಾರೆ ಪಿ. ಶೇಷಾದ್ರಿ ಅವರು. ಈ ಚಿತ್ರದಲ್ಲಿ ಎಲ್ಲವೂ ನಿರೀಕ್ಷಿಸಿದಂತೆ ನಡೆದಿದ್ದಿದ್ದರೆ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್  ಬಚ್ಚನ್ ಮುಖ್ಯ ಪಾತ್ರಧಾರಿಗಳಾಗ ಬೇಕಿತ್ತು. ಆದರೆ ಈ ಚಿತ್ರ ತಡ ಆಗುವುದಕ್ಕೆ ಹಲವಾರು ಕಾರಣಗಲಿದ್ದು ಈಗ ಅಂತೂ ಇಂತೂ ಒಂದು ಅಂತಿಮ ಹಂತ ತಲುಪಿದೆ. ದಿ ರೆಡ್ ಕಾರಿಡಾರ್ ಚಿತ್ರವನ್ನು ರಾಘವೇಶ್ ಆಸ್ಥಾನ ನಿರ್ದೇಶಿಸುತ್ತಿದ್ದಾರೆ. 

Share this Story:

Follow Webdunia kannada