Webdunia - Bharat's app for daily news and videos

Install App

ಈ ಚಿತ್ರದ ಹೆಸರೇ ’ಪಾರ್ಟ್ 2’ ತೆರೆಗೆ ಬರ್ತಿದೆ ನೋಡಿ

Webdunia
ಮಂಗಳವಾರ, 6 ಡಿಸೆಂಬರ್ 2016 (10:31 IST)
ಅದೇನು ವಿಚಿತ್ರವೋ ಏನೋ ಕನ್ನಡದಲ್ಲಿ ಅದೆಂತೆಂಹ ಚಿತ್ರಗಳು ಬರುತ್ತವೋ ಆ ಭಗವಂತನೇ ಬಲ್ಲ. ಇದೀಗ ಚಿತ್ರವೊಂದಕ್ಕೆ ಪಾರ್ಟ್ 2 ಅಂತ ಹೆಸರಿಟ್ಟಿದ್ದಾರೆ. ಈ ಚಿತ್ರ ಸಂಪೂರ್ಣ ಸಿದ್ಧವಾಗಿದ್ದು ಇನ್ನೇನು ಬಿಡುಗಡೆಯಾಗಲಿದೆ. ಸ್ನೇಹಸ್ಪರ್ಶ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಜೆ.ವಿ.ಎಸ್. ಶ್ರೀನಿವಾಸ್ ರಘುರಾಮಕೃಷ್ಣ ನಿರ್ಮಿಸಿರುವ “ಪಾರ್ಟ್-2” ಹಾರರ್ ಚಿತ್ರವು ಯಾವುದೇ ಸದ್ದುಗದ್ದಲವಿಲ್ಲದೆ ತೆರೆಗೆ ಸಿದ್ಧವಾಗಿದೆ. ಚಿತ್ರವನ್ನು ಸೆನ್ಸಾರ್ ನವರು ವೀಕ್ಷಿಸಿ ಚಿತ್ರಕ್ಕೆ  ’A' ಸರ್ಟಿಫಿಕೇಟ್ ನೀಡಿದ್ದಾರೆ. 
 
ಚಿತ್ರವು ಈ ತಿಂಗಳಲ್ಲಿ ರಾಜ್ಯಾದ್ಯಂತ ತೆರೆಕಾಣಲಿದ್ದು, ಚಿತ್ರವನ್ನು ತೆರೆಗೆ ಸಿದ್ಧಮಾಡಿ ಬಿಡುಗಡೆ ಮುನ್ನವೇ ಅಕಾಲ ಮೃತ್ಯುವಿಗೆ ಒಳಗಾದ ನಿರ್ದೇಶಕ ಬುದ್ಧದೇವ್‍ಗೆ ಈ ಚಿತ್ರವನ್ನು ಅರ್ಪಿಸುತ್ತಿದ್ದೇವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.  
 
ಚಿತ್ರಕ್ಕೆ ಎಲ್.ಆರ್. ಜೀವಾ ಸಂಭಾಷಣೆ, ಜೀವಾ ಆ್ಯಂಟನಿ ಛಾಯಾಗ್ರಹಣ, ರಾಜ್ ಕಿಶೋರ್ ರಾವ್ ಸಂಗೀತ, ಮಹೇಶ್ ಕಲೆ, ಅಲ್ಟಿಮೇಟ್ ಶಿವು ಸಾಹಸ ಎಸ್.ಎಂ. ಕೃಷ್ಣ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನ ಬುದ್ಧದೇವ್. ತಾರಾಗಣದಲ್ಲಿ ಗೋವಿಂದು, ಪಲ್ಲವಿ, ವೆಂಕಟೇಶ್, ಲೋಹಿತ್, ಜೀವನ್ ಶ್ರೀಧರ್ ಮುಂತಾದವರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments