ಈ ವಾರ ಚಿತ್ರಮಂದಿರಗಳಲ್ಲಿ ಸಂಚಾರಿ ವಿಜಯ್ ಹಾರರ್ ಸಿನೆಮಾ

Webdunia
ಬುಧವಾರ, 18 ಜನವರಿ 2017 (10:51 IST)
ನಾನು ಅವನಲ್ಲ ಅವಳು ಚಿತ್ರದ ಅಭಿನಯಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರೋ ಸಂಚಾರಿ ವಿಜಯ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ `ರಿಕ್ತ’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ರಿಕ್ತ ಚಿತ್ರಕ್ಕೆ ಅಮೃತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. 
 
ಚಿತ್ರದ ಟ್ರೇಲರ್ ಪೋಸ್ಟರ್ ಸ್ಯಾಂಡಲ್‍ವುಡ್‍ನಲ್ಲಿ ಭರವಸೆ ಮೂಡಿಸಿದೆ. ಇನ್ನುಳಿದಂತೆ ಚಿತ್ರದ ಸಂಗೀತದ ಜವಾಬ್ದಾರಿ ವಹಿಸಿಕೊಂಡಿರುವುದು ರಿಕ್ಕಿ ಸೋನು. ರಿಕ್ತ ಚಿತ್ರದ ಮೂಲಕ ಸಂಚಾರಿ ವಿಜಯ್ ಗಾಯಕರಾಗಿಯೂ ಹೊರ ಹೊಮ್ಮಿರುವುದು ವಿಶೇಷ. ಅರುಣ್ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 
 
ಸದ್ಯದ ಹಾರರ್ ಟ್ರೆಂಡ್‍ಗೆ ತಕ್ಕಂತೆ ರಿಕ್ತ ಸಿನಿಮಾ ತಯಾರಾಗಿದೆಯಂತೆ. ಒಟ್ಟಾರೆಯಾಗಿ ಯಾವುದೇ ಪಾತ್ರವನ್ನಾದರೂ ಆವಾಹಿಸಿಕೊಂಡು ಮಾಡುವ ಸಂಚಾರಿ ವಿಜಯ್ ದೆವ್ವವಾಗಿ ಕಾಡುವ ಪಾತ್ರವನ್ನು ಹೇಗೆ ನಿಭಾಯಿಸಿದ್ದಾರೆಂದು ನೋಡಲು ಪ್ರೇಕ್ಷಕರು ಕಾತರರಾಗಿದ್ದರು. ಹೀಗೆ ಕುತೂಹಲ ಕೆರಳಿಸಿದ್ದ ರಿಕ್ತ ಈ ವಾರ ತೆರೆ ಕಾಣುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಎಲ್ಲರೆದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಕ್ಕಿದ ವಿಜಯ್ ದೇವರಕೊಂಡ video

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಕಸಿ ಮಾಡಿಸಿದ್ದ ಸ್ತನ ತೆಗೆದ ಶೆರ್ಲಿನ್ ಚೋಪ್ರಾ, ಕಾರಣ ಹೀಗೇ ಬರೆದುಕೊಂಡಿದ್ದಾರೆ

ಹೇಮಾ ಮಾಲಿನಿಯನ್ನು ವರಿಸಲು ಧರ್ಮವನ್ನೇ ಬದಲಾಯಿಸಿದ್ರಾ ಧರ್ಮೇಂದ್ರಾ

ಮುಂದಿನ ಸುದ್ದಿ
Show comments