Webdunia - Bharat's app for daily news and videos

Install App

ಆಂಧ್ರದಲ್ಲೂ ಹವಾ ಎಬ್ಬಿಸಲಿರುವ ’ಬಳ್ಳಾರಿ ದರ್ಬಾರ್’

Webdunia
ಬುಧವಾರ, 28 ಡಿಸೆಂಬರ್ 2016 (09:35 IST)
ಸತ್ಯ ಘಟನೆ ಆಧಾರಿತವೆಂಬುದೂ ಸೇರಿದಂತೆ ಹಲವಾರು ಕಾರಣಗಳಿಂದ ಸುದ್ದಿಯಲ್ಲಿರುವ `ಬಳ್ಳಾರಿ ದರ್ಬಾರ್’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸ್ಮೈಲ್ ಶ್ರೀನು ತಮ್ಮ ಸ್ನೇಹಿತರೊಡಗೂಡಿ ನಿರ್ಮಾಣದ ಹೊಣೆಯನ್ನೂ ಹೊತ್ತುಕೊಂಡು, ನಿರ್ದೇಶನ ಮಾಡಿರುವ ಚಿತ್ರ ಬಳ್ಳಾರಿ ದರ್ಬಾರ್. 
 
ಈ ಚಿತ್ರ ಆಂಧ್ರಪ್ರದೇಶದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ವಿಶೇಷ. ಇನ್ನುಳಿದಂತೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿಯೂ ಹೆಚ್ಚಿನ ಚಿತ್ರ ಮಂದಿರಗಳಲ್ಲಿ ಬಳ್ಳಾರಿ ದರ್ಬಾರ್ ಬಿಡುಗಡೆಯಾಗುತ್ತಿದೆ. ಬಳ್ಳಾರಿಯಲ್ಲಿ ಈ ಹಿಂದೆ ನಡೆದಿದ್ದ ಅಕ್ರಮ ಗಣಿಗಾರಿಕೆಯ ವಿವರಗಳನ್ನಿಟ್ಟುಕೊಂಡು ಮಾಡಿದ್ದಾರೆಂದು ಹೇಳಲಾಗುತ್ತಿರುವ ಈ ಚಿತ್ರ ಆ ಕಾರಣದಿಂದಲೇ ಸುದ್ದಿ ಮಾಡುತ್ತಿದೆ. 
 
ಆದರೆ ನಿರ್ದೇಶಕ ಸ್ಮೈಲ್ ಶ್ರೀನು ಅವರು ಈ ಚಿತ್ರದಲ್ಲಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ, ಅಂಥಾ ಯಾವ ಉದ್ದೇಶವೂ ಚಿತ್ರ ತಂಡಕ್ಕಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮತ್ತು ಅದರ ಪರಿಣಾಮಗಳು ಹಾಗೂ ಈ ವ್ಯೂಹದೊಳಗೆ ಸಿಕ್ಕ ಯುವ ಸಮುದಾಯದ ಕಥೆ ಹೇಳುತ್ತಲೇ ಸಮಾಜಕ್ಕೊಂದು ಉತ್ತಮ ಸಂದೇಶ ಕೊಡುವ ಚಿತ್ರ 
ಮಾಡಿದ್ದೇವೆಂಬುದು ಚಿತ್ರ ತಂಡದ ಮಾತು. 
 
ಇದಕ್ಕೂ ಮುಂಚೆ `ತೂಫಾನ್’ ಎಂಬ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಹೇಳಿದ್ದ ಶ್ರೀನು, ಬಳಿಕ ಹೈದರಾಬಾದ್‍ನತ್ತ ಹೊರಳಿದ್ದರು. ಅಲ್ಲಿನ ಕೆಲ ನಿರ್ದೇಶಕರ ಬಳಿ ನಿರ್ದೇಶನದ ಮತ್ತಷ್ಟು ವರಸೆಗಳನ್ನು ಕಲಿತು ಬಂದಿರುವ ಅವರೀಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 
 
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ಮಾಣವೂ ಶ್ರೀನು ಅವರದ್ದೇ ಎಂಬುದು ವಿಶೇಷ.  ಈ ಗಣಿ ಮಾಫಿಯಾದ ಸುತ್ತಲಿನ ದ್ವೇಷದ ಜೊತೆಗೇ ನವಿರಾದ ಪ್ರೀತಿ, ಚೆಂದದ ಹಾಡುಗಳೂ ಇರುವ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ. 
 
ಈಗಾಗಲೇ ತೆಲುಗು ಚಿತ್ರ ರಂಗದಲ್ಲಿ ಒಂದಷ್ಟು ಹೆಸರು ಮಾಡಿರುವ ಚರಣ್ ಅರ್ಜುನ್ ಅವರ ಸಂಗೀತ ನಿರ್ದೇಶನ ಇರುವ ಈ ಚಿತ್ರಕ್ಕೆ ಕಾರ್ತಿಕ್ ಸುಬ್ರಮಣಿ ಛಾಯಾಗ್ರಹಣವಿದೆ. ಪೋಲಾ ಶ್ರೀನಿವಾಸ ಬಾಬು, ಮಮತಾ ರಾವುತ್, ಶುಭ ರಕ್ಷಾ ಮುಂತಾದವರ ತಾರಾಗಣವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣ: ಇಡಿ ಮುಂದೇ ಹಾಜರಾದ ವಿಜಯ್ ದೇವರಕೊಂಡ ಹೀಗಂದ್ರು

ದರ್ಶನ್‌ಗಾಗಿ ದೇವರಲ್ಲಿ ನನ್ನದೊಂದು ಪ್ರಾರ್ಥನೆ ಇದ್ದೇ ಇರುತ್ತದೆ: ವಿಜಯ್ ರಾಘವೇಂದ್ರ

ಉಪೇಂದ್ರಗೆ ಜೋಡಿಯಾದ ಮಾಲಾಶ್ರೀ ಮಗಳು ಆರಾಧನಾ, ವಯಸ್ಸಿನ ಅಂತರ ಬಗ್ಗೆ ಚಿತ್ರತಂಡ ಹೀಗೇ ಹೇಳಿದ್ದು

ಈ ಒಬ್ಬ ವ್ಯಕ್ತಿಯನ್ನು ನೆಪ ಮಾಡಿ ಜಾಮೀನು ರದ್ದು ಮಾಡಬೇಡಿ ಎನ್ನುತ್ತಿರುವ ಪವಿತ್ರಾ ಗೌಡ

ಅಬ್ಬಬ್ಬಾ ಏನಿದೂ ದೀಪಿಕಾ ಪಡುಕೋಣೆ ಹವಾ: ಇನ್‌ಸ್ಟಾಗ್ರಾಂನಲ್ಲಿ ರೊನಾಲ್ಡೊ, ಪಾಂಡ್ಯರನ್ನೇ ಮೀರಿಸಿದ ಕನ್ನಡತಿ

ಮುಂದಿನ ಸುದ್ದಿ
Show comments