Select Your Language

Notifications

webdunia
webdunia
webdunia
webdunia

ಸೈಫ್ ಹಾಗೂ ಶಾಹೀದ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ ಕಂಗನಾ

ಸೈಫ್ ಹಾಗೂ ಶಾಹೀದ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾರೆ ಕಂಗನಾ
, ಮಂಗಳವಾರ, 1 ಸೆಪ್ಟಂಬರ್ 2015 (09:36 IST)
ಕಂಗನಾ ಇತ್ತೀಚೆಗೆ ನಟಿಸಿದ ಸಿನಿಮಾಗಳೆಲ್ಲಾ ಆಕೆಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿವೆ. ಆಕೆ ನಟಿಸಿದ ಸಿನಿಮಾಗಳೆಲ್ಲಾ ಆಕೆಗೆ ಅಪಾರ ಹೆಸರು ತಂದು ಕೊಟ್ಟಿದೆ. ಈ ಬೆನ್ನಲ್ಲೇ ಆಕೆಯ ಕಾಲ್ ಶೀಟ್ ಗಾಗಿ ಮುಗಿ ಬೀಳುವ ನಿರ್ದೇಶಕರು, ನಿರ್ಮಾಪಕರ ಸಂಖ್ಯೆಯೂ ಹೆಚ್ಚಿದೆ.
ಸದ್ಯ ಕಟ್ಟಿ ಬಟ್ಟಿ ಸಿನಿಮಾದ ಪ್ರ ಮೋಷನ್ ನಲ್ಲಿ ಕಂಗನಾ ಬ್ಯುಸಿಯಾಗಿದ್ದರೂ ಅವರು ರಂಗೂನ್ ಅನ್ನೋ ಸಿನಿಮಾದಲ್ಲೂ ತೊಡಗಿಸಿ ಕೊಂಡಿದ್ದಾರೆ. ಸಿನಿಮಾದಲ್ಲಿ ಸೈಫ್ ಆಲಿಖಾನ್ ಹಾಗೂ ಶಾಹೀದ್ ಕಪೂರ್ ಅವರ ಜೊತೆ ಕಂಗನಾ ಡ್ಯುಯೆಟ್ ಹಾಡಲಿದ್ದಾರೆ. ಕಂಗನಾ ಕೂಡ ಇಬ್ಬರ ಜೊತೆ ನಟಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
 
ಇನ್ನು ಸದ್ಯ ಕಂಗನಾ ಕೈಯಲ್ಲಿ ಕೈ ತುಂಬಾ ಆಫರ್ ಗಳಿವೆ. ಒಂದು ಕಡೆ ಕಂಗನಾ ಹಾಗೂ ಇಮ್ರಾನ್ ಖಾನ್ ಅಭಿನಯದ ಕಟ್ಟಿ ಬಟ್ಟಿ ಸಿನಿಮಾ ಇದೇ ತಿಂಗಳ18 ರಂದು ರಿಲೀಸ್ ಆಗಲಿದೆ. ಇದರ ಜೊತೆಗೆ ಕಂಗನಾ ಕೈಯಲ್ಲಿ ಸಿಮ್ರಾನ್ , ರಾಣಿ ಲಕ್ಷ್ಮಿ ಬಾಯಿ ಸಿನಿಮಾಗಳಿವೆ. ಇದು ಕಂಗನಾಗೆ ಖುಷಿ ನೀಡಿದೆ.

Share this Story:

Follow Webdunia kannada