Select Your Language

Notifications

webdunia
webdunia
webdunia
webdunia

ಕಮಲ್ ಅಭಿನಯದ ಉತ್ತಮ ವಿಲನ್ ಟ್ರೈಲರ್ ಬಿಡುಗಡೆ

ಕಮಲ್ ಅಭಿನಯದ ಉತ್ತಮ ವಿಲನ್ ಟ್ರೈಲರ್ ಬಿಡುಗಡೆ
, ಬುಧವಾರ, 4 ಮಾರ್ಚ್ 2015 (10:02 IST)
ಕನ್ನಡದ ನಟ ನಿರ್ದೇಶಕ ರಮೇಶ್ ಅರವಿಂದ್ ಅವರ ಬಹು ನಿರೀಕ್ಷಿತ ಚಿತ್ರ ಉತ್ತಮ ವಿಲನ್. ತಿರುಪತಿ ಬ್ರದರ್ಸ್ ಅವರು ನಿರ್ಮಿಸಿರುವ ಆ ಚಿತ್ರವನ್ನು ರಮೇಶ್ ಅರವಿಂದ್ ಅವರು ನಿರ್ದೇಶನ ಮಾಡಿದ್ದಾರೆ. ಕಮಲ್ ಹಾಸನ್ ಅವರ ಅಭಿನಯ ಇರುವ ಈ ಚಿತ್ರದ ಬಗ್ಗೆ ಭಾರತೀಯ ಚಿತ್ರರಂಗದಲ್ ಸಾಕಷ್ಟು ನಿರೀಕ್ಷೆಗಳಿವೆ. ಏಕೆಂದರೆ ಈ ಚಿತ್ರದಲ್ಲಿ ವಿಶಿಷ್ಟ ನಟ ಕಮಲ್ ಹಾಸನ್ ಅವರು ಅಭಿನಯಿಸಿದ್ದಾರೆ. ಈ ಚಿತ್ರ ಎಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡ ಚಿತ್ರಗಳನ್ನು ನಿರ್ದೇಶನ ಮಾಡಿ ಗೆದ್ದಿರುವ ನಟ ನಿರ್ದೇಶಕ ರಮೇಶ್ ಮೊಟ್ಟ ಮೊದಲ ಬಾರಿಗೆ ತಮಿಳು ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಟ್ರೈಲರ್ ಚನ್ನೈ ಟ್ರೇಡ್ ಸೆಂಟರ್ ನಲ್ಲಿ ಬಿಡುಗಡೆ ಆಯ್ತು.  
ಚಿತ್ರಕ್ಕೆ ಗಿಬ್ರಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮುಂಬೈನಲ್ಲಿ ಶೂಟಿಂಗ್‌ನಲ್ಲಿ ಇದ್ದ ಕಮಲ್ ಮಗಳು ಶೃತಿಗೆ ಹಾಡುಗಳನ್ನು ಕಳುಹಿಸಿ ಆ ಬಳಿಕ ಅಧಿಕೃತವಾಗಿ ಈ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಚಿತ್ರದ ನಿರ್ದೇಶಕ ರಮೇಶ್ ಅರವಿಂದ್, ನಿರ್ಮಾಪಕರಾದ ತಿರುಪತಿ ಬ್ರದರ್ಸ್, ಗೌತಮಿ, ಪ್ರತಿಭಾನ್, ನಿಸಾರ್, ಊರ್ವಶಿ, ಪಾರ್ವತಿ ಮೆನನ್ ಮುಂತಾದವರು ಈ  ಕಾರ್ಯಕ್ರಮದ ಭಾಗವಾಗಿದ್ದರು. 

Share this Story:

Follow Webdunia kannada