ರಜಿನಿಕಾಂತ್ ರಾಜಕೀಯ ಎಂಟ್ರಿ ಬಗ್ಗೆ ಕಮಲ್ ಕೊಟ್ಟ ಶಾಕಿಂಗ್ ರಿಯಾಕ್ಷನ್

Webdunia
ಶುಕ್ರವಾರ, 26 ಮೇ 2017 (22:07 IST)

ತಮಿಳಿನ ಸೂಪರ್ ಸ್ಟಾರ್ ರಜಿನಿಕಾಂತ್ ರಾಜಕೀಯ ಪ್ರವೇಶ ಬಹುತೇಕ ಖಚಿತವಾಗಿದೆ. ಇತ್ತೀಚೆಗೆ ಅಭಿಮಾನಿಗಳ ಸಭೆ ಬಳಿಕ ಮಾತನಾಡಿದ ರಜಿನಿ ನಾನು ತಮಿಳಿಗ, ಸಂಪೂರ್ಣ ರಾಜಕೀಯ ವ್ಯವಸ್ಥೆ ಬದಲಿಸಬೇಕಿದೆ. ಯುದ್ಧಕ್ಕೆ ಸಿದ್ಧರಾಗಿ ಎನ್ನುವ ಮೂಲಕ ರಾಜಕೀಯ ಕಹಳೆ ಮೊಳಗಿಸಿದ್ದಾರೆ.

 

ಆದರೆ, ರಜಿನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಮಿತ್ರ ಕಮಲ್ ಹಾಸನ್ ಅಷ್ಟಾಗಿ ತೃಪ್ತಿ ಇಲ್ಲ. ತಮಿಳಿನ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವ ಕಮಲ್ ಹಾಸನ್ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

ರಜಿನಿ ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಮಲ್ ಹಾಸನ್, ಇದು ತಮಿಳುನಾಡಿನ ರಾಜಕೀಯ ಪ್ರವೇಶಕ್ಕೆ ಸೂಕ್ತ ಸಮಯವಲ್ಲ. ರಜಿನಿ ಅಥವಾ ಯಾರೇ ಆಗಿರಲಿ. ಯಾವೊಬ್ಬ ವೈಚಾರಿಕ ವ್ಯಕ್ತಿಯೂ ಅಂಥದ್ದೊಂದು ನಿರ್ಧಾರ ಕೈಗೊಳ್ಳುವುದಿಲ್ಲ ಎಂದಿದ್ದಾರೆ.

 
ಇದೇವೇಳೆ, ರಾಜಕೀಯ ಪ್ರವೇಶಿಸದಂತೆ ತಮ್ಮ ಮಿತ್ರ ರಜಿನಿಕಾಂತ್`ಗೆ ಸಲಹೆ ನೀಡುತ್ತೀರಾ ಎಂದು ಪತ್ರಕರ್ತರು ಕೇಳಿದ ಮರುಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಮಲ್ ಹಾಸನ್, ಈ ಪ್ರಶ್ನೆಗೆ ಉತ್ತರಿಸಲು ಇದು ಸೂಕ್ತ ವೇದಿಕೆಯಲ್ಲ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಊಹಿಸಲಾಗದ್ದನ್ನು ಸಾಧಿಸಿದ ರಿಷಭ್‌ ಶೆಟ್ಟಿ: ಕಾಂತಾರ 1 ಸಿನಿಮಾವನ್ನು ಕೊಂಡಾಡಿದ ಜ್ಯೂ.ಎನ್‌ಟಿಆರ್‌, ಶಿವಣ್ಣ

ಕಾಂತಾರ ಚಾಪ್ಟರ್‌ 1ಗೆ ಪ್ರೇಕ್ಷಕರು ಫಿದಾ: ರಿಷಭ್‌ ಶೆಟ್ಟಿ ಅಪ್ಪಿಕೊಂಡು ಪತ್ನಿ ಪ್ರಗತಿ ಭಾವುಕ

ಹಾಡು ನಿಲ್ಲಿಸಿದ ಶಾಸ್ತ್ರೀಯ ಸಂಗೀತದ ದಿಗ್ಗಜ ಪಂಡಿತ್ ಛನ್ನುಲಾಲ್ ಮಿಶ್ರಾ: ಮೋದಿ ಕಂಬನಿ

Kantara chapter 1: ಮೈ ರೋಮಾಂಚನಗೊಳಿಸುವ ಕಾಂತಾರ ಚಾಪ್ಟರ್ 1 ವಿಮರ್ಶೆ ಇಲ್ಲಿದೆ

BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

ಮುಂದಿನ ಸುದ್ದಿ
Show comments