Webdunia - Bharat's app for daily news and videos

Install App

ಕಮಲ್ ಚಿತ್ರಕ್ಕೆ ಸೌಂದರ್ಯ ರಜನಿಕಾಂತ್ ಅಶ್ವಿನ್ ನಿಂದ ಹಾಡುಗಳ ಮಾರಾಟ

Webdunia
ಬುಧವಾರ, 1 ಅಕ್ಟೋಬರ್ 2014 (12:05 IST)
ಪ್ರಸಿದ್ಧ ಚಿತ್ರ ನಟನ ಆಡಿಯೋವನ್ನು ನಟನ ವಾರಸುದಾರಿಣಿ ಬಿಡುಗಡೆ ಮಾಡುತ್ತಿರುವ ಸಂಗತಿ ಈಗ ಕಾಲಿವುಡ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಪದ್ಮಶ್ರೀ ಕಮಲ್ ಹಾಸನ್ ಅವರ ಹೊಚ್ಚ ಹೊಸ ಚಿತ್ರವನ್ನು ಸೌಂದರ್ಯ ರಜನಿಕಾಂತ್ ಅಶ್ವಿನ್ ಅವರು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ.

ಸೌಂದರ್ಯ ರಜನಿಕಾಂತ್ ಅಶ್ವಿನ್ ಈರೋಸ್ ಇಂಟರ್ ನ್ಯಾಷನಲ್  ಸಂಸ್ಥೆಯ ಕ್ರಿಯೇಟಿವ್ ಹಾಗು ಡಿಜಿಟಲ್ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 
 
ಈ ಸಂಸ್ಥೆ ಈಗ ಆಡಿಯೋ ಕ್ಷೇತ್ರಕ್ಕೂ ಸಹಿತ ಪಾದಾಪರ್ಪಣೆ ಮಾಡಿದೆ. ಇತ್ತೀಚಿಗೆ ವಿಜಯ್ ನಟಿಸಿದ್ದ ಕಟ್ಟಿ ಚಿತ್ರದ ಆಡಿಯೋ ಹಕ್ಕನ್ನು ತಮ್ಮದಾಗಿ ಮಾಡಿಕೊಂಡಿದ್ದ ಈರೋಸ್ ಇಂಟರ್ ನ್ಯಾಷನಲ್ ಈಗ ಕಮಲ್ ಹಾಸನ್ ನಟನೆಯ ಉತ್ತಮ ವಿಲನ್ ಎನ್ನುವ ಚಿತ್ರವನ್ನು ಸಹಿತ ತನ್ನದನ್ನಾಗಿ ಮಾಡಿಕೊಂಡಿದೆ. ಕನ್ನಡದ ಹೆಮ್ಮೆಯ ನಟ ನಿರ್ದೇಶಕ ರಮೇಶ್ ಅರವಿಂದ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.  
 
ಕಮಲ್ ಹಾಸನ್ ದ್ವಿಪಾತ್ರ ಮಾಡಿರುವ ಈ ಚಿತ್ರದಲ್ಲಿ ಆಂಡ್ರಿಯಾ, ಪೂಜಾಕುಮಾರ್, ಪಾರ್ವತಿ ಮೆನನ್ ಹೀರೋಯಿನ್ ಗಳಾಗಿದ್ದಾರೆ. ಮುಖ್ಯ ಪಾತ್ರದಲ್ಲಿ ಪ್ರಸಿದ್ಧ ನಿರ್ದೇಶಕ ಕೆ. ವಿಶ್ವನಾಥ್, ಕೆ ಬಾಲಚಂದರ್ ನಟಿಸಿರುವುದು ಮತ್ತೊಂದು ವಿಶೇಷ.

ಚಿತ್ರದ ಬಗ್ಗೆ ಬಾರಿ ನಿರೀಕ್ಷೆಯನ್ನು ಈ ಎಲ್ಲ ಸಂಗತಿಗಳು ಉಂಟು ಮಾಡಿದೆ. ಈ ಚಿತ್ರದ ಬಿಡುಗಡೆಗೆ ಕಮಲ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಅದರ ಆಡಿಯೋ ಬಿಡುಗಡೆ ಕಾರ್ಯಕ್ರಮ ಸಧ್ಯದಲ್ಲೇ ಇದೆ ಎಂದಿದ್ದಾರೆ ಚಿತ್ರತಂಡ !
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments