Select Your Language

Notifications

webdunia
webdunia
webdunia
webdunia

'ತೂಂಗಾವನಂ'ನಲ್ಲಿ ಲಿಪ್ ಲಾಕ್ ಮಾಡಿದ ಕಮಲ್ ಹಾಸನ್

'ತೂಂಗಾವನಂ'ನಲ್ಲಿ ಲಿಪ್ ಲಾಕ್ ಮಾಡಿದ ಕಮಲ್ ಹಾಸನ್
, ಮಂಗಳವಾರ, 26 ಮೇ 2015 (10:23 IST)
ಉತ್ತಮ ವಿಲನ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು ಕಮಲ್ ಹಾಸನ್. ಆದರೆ ಅದು ಅತ್ಯಂತ ಕೆಟ್ಟದಾಗಿ ಸೋತ ಕಾರಣ ಕಮಲ್ ಈಗ ಮತ್ತಷ್ಟು ಉತ್ಸಾಹದಿಂದ ತಮ್ಮ ಚಿತ್ರಗಳಲ್ಲಿ ತಮ್ಮನ್ನು ತೋರಿಸಬೇಕಿದೆ.  ತಮ್ಮ ಮುಂದಿನ ಚಿತ್ರ ಚೀಕಟಿರಾಜ್ಯಂ ಚಿತ್ರದಲ್ಲಿ ಮತ್ತೆ ತಾವು ಸೋಲಿಗೆ ಹೆದರಲ್ಲ ಎನ್ನುವಂತೆ ಸಿದ್ಧತೆ ಮಾಡಿದ್ದಾರೆ. ಆ ಚಿತ್ರದ ಮೊದಲ ಪೋಸ್ಟರ್ ಹೊರ ಬಂದಿದೆ. 
ಆ ಪೋಸ್ಟರ್ ನಲ್ಲಿ ಕಮಲ್ ಒಬ್ಬ ಹುಡುಗಿಗೆ ಮುತ್ತಿಡುತ್ತಿರುವ ಘಟನೆ ಕಂಡು ಬರುತ್ತಿದ್ದೆ. ಆದರೆ ಈ ಲಿಪ್ ಲಾಕ್ ಸನ್ನಿವೇಶ ತ್ರಿಷ ಮತ್ತು ಕಮಲ್ ನಡೆದಿದೆ ಎಂದು ಹೇಳುತ್ತಿದ್ದಾರೆ ಸಿನಿಮಂದಿ.ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಲಿಪ್ ಲಾಕ್  ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. 
 
ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ತಮ್ಮ ಸ್ವಂತ  ಬ್ಯಾನರ್ ರಾಜ್ ಕಮಲ್ ಇಂಟರ್ ನ್ಯಾಷನಲ್  ಪತಾಕೆಯ ಅಡಿಯಲ್ಲಿ ಈ ಚಿತ್ರದ ಸಿದ್ಧ  ಆಗುತ್ತಿದೆ. ಈ ಚಿತ್ರದಲ್ಲಿ ತ್ರಿಷ ಹೀರೋಯಿನ್ ಆಗಿ ಅಭಿನಯಿಸುತ್ತಿದ್ದಾರೆ. ಆ ಚಿತ್ರದ ಮತ್ತೊಂದು ಬಹುಮುಖ್ಯ ಪಾತ್ರದಲ್ಲಿ ಪ್ರಕಾಶ್ ರಾಜ್ ಅವರು ನಟಿಸಿದ್ದಾರೆ. ತಮಿಳಿನಲ್ಲಿ ಈ ಚಿತ್ರಕ್ಕೆ ತೂಂಗಾವನಂ ಎನ್ನುವ ಶೀರ್ಷಿಕೆಯನ್ನು ನೀಡಲಾಗಿದೆ.  
 
ಒಂದು ಥ್ರಿಲ್ಲರ್ ಕಥೆಯ ಹಂದರ ಹೊಂದಿರುವ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿದ್ದಾರೆ ಕಮಲ್. ಅವರ ಪತ್ನಿ ಪಾತ್ರಧಾರಿಯಾಗಿದ್ದಾರೆ ಮನಿಷ ಕೊಯಿರಾಲ. ಕ್ಯಾನ್ಸರ್ ಕಾಯಿಲೆ ಬಲೆಯಿಂದ ಹೊರ ಬಂದ ಬಳಿಕ ಮನಿಷ ನಟಿಸುತ್ತಿರುವ ಮೊದಲ ಚಿತ್ರವಾಗಿದೆ. ಯುವ ಹೀರೋಗಳಂತೆ ಲಿಪ್ ಲಾಕ್ ಸನ್ನಿವೇಶದಲ್ಲಿ ಭಾಗವಹಿಸಿರುವ ಕಮಲ್ ಅವರ ಸ್ಪೀಡ್ ಪ್ರತಿಯೊಬ್ಬರನ್ನು ಆಕರ್ಷಿಸಿದೆ. ಅಭಿಮಾನಿಗಳು ಆ ದೃಶ್ಯವನ್ನು ಹಿರಿತೆರೆಯಲ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. 

Share this Story:

Follow Webdunia kannada