Select Your Language

Notifications

webdunia
webdunia
webdunia
webdunia

ಆಪ್ತಮಿತ್ರ ರಜನಿಕಾಂತ್‌ಗೆ ವಿಲನ್ ಆದ ಕಮಲ್ ಹಾಸನ್ ?

ಆಪ್ತಮಿತ್ರ ರಜನಿಕಾಂತ್‌ಗೆ ವಿಲನ್ ಆದ ಕಮಲ್ ಹಾಸನ್ ?
, ಶನಿವಾರ, 18 ಏಪ್ರಿಲ್ 2015 (10:25 IST)
ಕಾಲಿವುಡ್ ಚಿತ್ರರಂಗದಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡುವತ್ತ ಸಿದ್ಧತೆ ನಡೆಯುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಆ ಮೂಲಕ ಹೊಸದೊಂದು  ಪರಂಪರೆ ಆರಂಭಿಸುವ ಬಗ್ಗೆ ಯೋಜನೆ ಸಿದ್ಧವಾಗಿದೆ. ಭಾರತೀಯ ಚಿತ್ರರರಂಗದ ಎರಡು ಧ್ರುವತಾರೆಗಳನ್ನು ಒಟ್ಟಿಗೆ ಒಂದೇ ಚಿತ್ರದಲ್ಲಿ ಹೀರೋ ಹಾಗೂ ವಿಲನ್ ಮಾಡುವ ಸಿದ್ಧತೆಯನ್ನು ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಕಾಲಿವುಡ್‌ನಿಂದ ಹೊರ ಬಂದಿದೆ . 

ವಿಶ್ವನಾಯಕ ಕಮಲ್ ಹಾಸನ್ ಮತ್ತು ಸೂಪರ್ ಸ್ಟಾರ್ ರಜನಿ ಕಾಂತ್ ಅವರೇ ಆ ತಾರೆಗಳು. ಆದರೆ ಯಾರು ಹೀರೋ ಮತ್ತು ಯಾರು ವಿಲನ್ ಆಗುತ್ತಾರೆ ಎನ್ನುವ ಪ್ರಶ್ನೆ ಕಾಡುವುದು ಸಹಜ. ಈ ಸುದ್ದಿ ಕೇವಲ ಬಾಯ್ ಚಪಲದ ವದಂತಿಯೋ  ಎನ್ನುವುದು ಸಹಿತ ಇನ್ನು ಸ್ಪಷ್ಟವಾಗಿಲ್ಲ.
 
ಆದರೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಕಮಲ್ ಹಾಸನ್ ವಿಲನ್ ಆಗುತ್ತಿದ್ದಾರಂತೆ. ಸೊ ಸೂಪರ್ ಸ್ಟಾರ್ ರಜನಿ ಸೂಪರ್ ಸ್ಟಾರ್ ಆಗಿ ಮುಂದುವರೆಯುತ್ತಾರೆ ಎಂದಾಯ್ತು. ಆದರೆ ಈ ಒಂದು ಪ್ರಯತ್ನ ಮಾಡುತ್ತಿರುವವರು ಬೇರೆ ಯಾರೂ ಅಲ್ಲ ನಿರ್ದೇಶಕ ಶಂಕರ್. ತನ್ನ ಲಿಂಗಾ ಚಿತ್ರ ಸೋಲು, ಅದರಿಂದ ಎದುರಾದ ಸಮಸ್ಯೆಗಳಿಂದ ಮುಕ್ತಿ ಕಾಣಲು ಉತ್ತಮ ಸಿನಿಮಾ ಮಾಡುವಂತೆ ಕೇಳಿದರಂತೆ ರಜನಿ.
 
ರಜನಿಕಾಂತ್ ಆಶಯದಂತೆ  ಶಂಕರ್ ಒಂದು ಅದ್ಭುತವಾದ ಕಥೆ ಹೇಳಿದ್ದಾರೆ. ಅದರಲ್ಲಿ ವಿಲನ್ ಪಾತ್ರಕ್ಕೆ ಕಮಲ್ ಸೂಕ್ತ ಅಂದಿದ್ದಾರಂತೆ.ಒಂದುವೇಳೆ ಶಂಕರ್ ನೆನೆಸಿದಂತೆ ಆದರೆ ಭಾರತೀಯ ಚಿತ್ರರಂಗದಲ್ಲಿ ಒಂದು ಸಂಚಲನ ಉಂಟಾಗುತ್ತದೆ. ರಜನಿ ಹಾಗೂ ಕಮಲ್ 36  ವರ್ಷಗಳ ಬಳಿಕ ಒಟ್ಟಿಗೆ ನಟಿಸಿದಂತಾಗುತ್ತದೆ. 

Share this Story:

Follow Webdunia kannada