Select Your Language

Notifications

webdunia
webdunia
webdunia
webdunia

ರಜನಿ ಕಾಂತ್ ಹೊಸ ಚಿತ್ರದ ಹೆಸರು ಕಾಳಿ

ರಜನಿ ಕಾಂತ್ ಹೊಸ ಚಿತ್ರದ ಹೆಸರು ಕಾಳಿ
, ಸೋಮವಾರ, 27 ಜುಲೈ 2015 (10:39 IST)
ಕೊಚ್ಚಾಡಿಯನ್ ಮತ್ತು ಲಿಂಗಾ ಸೋಲಿನ ಬಳಿಕ  ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್  ಅವರು ಗೆಲುವಿಗಾಗಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅವರು ಅದಕ್ಕೆಂದು ವಿಶೇಷ ಸಿದ್ಧತೆ ನಡೆಸಿದ್ದಾರೆ. ರಾಧಿಕ ಆಪ್ಟೆ ಹೀರೋಯಿನ್ ಆಗಿ ಆಯ್ಕೆ ಆಗಿರುವ ಚಿತ್ರದಲ್ಲಿ ರಜನಿಕಾಂತ್ ಅವರು ಗ್ಯಾಂಗ್ ಸ್ಟಾರ್ ಪಾತ್ರಧಾರಿಯಾಗಿದ್ದಾರೆ. ಮದ್ರಾಸ್, ಅಟ್ಟಕತ್ತಿಯಂತಹ ಸಿನಿಮಾಗಳನ್ನು ಜನರ ಮುಂದೆ ತಂದಿಟ್ಟ ನಿರ್ದೇಶಕ ರಂಜಿತ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಒಂದು ಒಳ್ಳೆಯ ಗೆಲುವಿಗಾಗಿ ಕಾಯುತ್ತಿರುವ ಸೂಪರ್ ಸ್ಟಾರ್ ಅವರ ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಮಲೇಸಿಯಾ ಮತ್ತು ಸಿಂಗಪೂರ್ ನಲ್ಲಿ ನಡೆಯಲಿದೆ.
 ವಯಸ್ಸಿಗೆ ತಕ್ಕಂತಹ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಜನಿ ಅವರ ಹೊಸ ಚಿತ್ರದ ಹೆಸರಿನ್ನ ಶೀರ್ಷಿಕೆ ನಿಕ್ಕಿಯಾಗಿದೆ. ಕಾಳಿ ಎನ್ನುವ ಹೆಸರಿನ ಈ ಶೀರ್ಷಿಕೆಯು ಈಗ ಸೆಟ್ಟೇರಲು ಸಿದ್ಧತೆ ನಡೆಸಿವೆ. ಮುಖ್ಯವಾಗಿ ಲಿಂಗ ಕೈ ಬಿಟ್ಟ ಬಳಿಕ ಕಾಳಿ ಕೈ ಹಿಡಿಯುತ್ತದೆಯೇ ಎನ್ನುವ ಪ್ರಶ್ನೆ ಎಲ್ಲರನ್ನು  ಕಾಡಿದೆ. ಆದರೆ ಇಷ್ಟು ವರ್ಷಗಳ ತಾರ ಬದುಕಲ್ಲಿ  ಸೋಲುಗೆಲುವು ಸಾಮಾನ್ಯವಾಗಿರುವ ಈ ನಟನಿಗೆ ಈಗ ಅಂತಹ ಆತಂಕ ಇಲ್ಲದೆ ಹೋದರೂ ಅವರ ಅಭಿಮಾನಿಗಳಿಗೆಂದು ಸಾಕಷ್ಟು ಪ್ರಯತ್ನ ಮಾಡಬೇಕಿದೆ. ಅವರ ಪ್ರಯತ್ನ ಸಫಲವಾಗಲಿ ಎನ್ನುವ ಹಾರೈಕೆ ನಮ್ಮದಾಗಿದೆ. 

Share this Story:

Follow Webdunia kannada