Select Your Language

Notifications

webdunia
webdunia
webdunia
webdunia

ಕಾಜಲ್ ಅಗರ್ವಾಲ್ ಈಗ ಬ್ಯುಸಿ ಬ್ಯುಸಿ..

ಕಾಜಲ್ ಅಗರ್ವಾಲ್ ಈಗ ಬ್ಯುಸಿ ಬ್ಯುಸಿ..
, ಮಂಗಳವಾರ, 27 ಜನವರಿ 2015 (10:49 IST)
ಜೂನಿಯರ್ ಎನ್ಟಿಆರ್ ಅವರ ಜೊತೆ ದಕ್ಷಿಣ ಭಾರತದ ಹೆಸರುವಾಸಿ ನಟಿ ಕಾಜಲ್ ಅಗರ್ ವಾಲ್ ಅಭಿನಯಿಸುತ್ತಿದ್ದಾಳೆ. ಆ ಚಿತ್ರದ ಹೆಸರು ಟೆಂಪರ್. ಈ ಚಿತ್ರದಲ್ಲಿ ತಾವು ಕಾಜಲ್ ನ್ನು  ಭಿನ್ನವಾಗಿ ಕಾಣುವಂತೆ ಮಾಡಿದ್ದೀವಿ  ಎಂದು ನಿರ್ದೇಶಕರು ಹೆಮ್ಮೆಯಿಂದ ಹಾಗೂ ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಈಗ  ತನ್ನ ಪಾಲಿನ ಕೆಲಸ ಮುಗಿಸಿ ಕಾಜಲ್  ತಮಿಳು ಚಿತ್ರರಂಗದ ಕಡೆಗೆ ಹೊರಟಿದ್ದಾಳೆ. ಈಗ ಆ ಚಿತ್ರದ ಶೂಟಿಂಗ್ ನಲ್ಲೂ ಸಹಿತ ಭಾಗಿಯಾಗಿದ್ದಾಳೆ ಈ ಚೆಲುವೆ. 
ವಿಶಾಲ್ ಹೀರೋ ಆಗಿರುವ ಈ ಚಿತ್ರವನ್ನು ಸುಶೀಂದ್ರನ್   ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿದ್ದಾಳೆ ಈ  ಚೆಲುವೆ. ಈ ಚಿತ್ರಕ್ಕೆ ಸಂಬಂಧಪಟ್ಟ ಶೂಟಿಂಗ್ ನಿನ್ನೆಯಿಂದ ಆರಂಭವಾಗಿದೆ. ಸುಮಾರು ಒಂದು ವಾರಗಳ ಕಾಲ ಈ ಚಿತ್ರದ ಶೂಟಿಂಗ್ ಕಾರ್ಯ ನೆರವೇರಲಿದೆ. ಹೈದರಾಬಾದ್ ಮುಂತಾದ ಸ್ಥಳಗಳಲ್ಲಿ ಈ ಚಿತ್ರದ ಶೂಟಿಂಗ್ ಕಾರ್ಯಕ್ರಮ ನಡೆಯಲಿದೆ. ಈ ಹೇಳುವ ಸಂಗತಿ ಏನೆಂದರೆ ಕಳೆದ ಕೆಲವು ವರ್ಷಗಳಿಂದ ಹೇಳಿಕೊಳ್ಳುವಂತಹ ಯಶಸ್ಸು ದೊರಕದೆ ಹೈರಾಣಾಗಿದ್ದ ಕಾಜಲ್ ಒಂದರ ಹಿಂದೆ ಒಂದರಂತೆ ಸಿನಿಮಾಗಳಲ್ಲಿ ನಟಿಸಲು ಆದ್ಯತೆ ನೀಡುತ್ತಿದ್ದಾಳಂತೆ . ಅಂದರೆ ತನ್ನ  ಕೆರಿಯರ್ ನ್ನು  ಹೆಚ್ಚು ಹೆಚ್ಚು ಉಜ್ವಲ ಮಾಡಿಕೊಳ್ಳು ವುದಕ್ಕೆ ಆದ್ಯತೆ ನೀಡುತ್ತಿದ್ದಾಳೆ. ಬೇಸಿಗೆಯಲ್ಲಿ ಬಿಡುಗಡೆ ಆಗುತ್ತಿರುವ ಟೆಂಪರ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು  ಹೊಂದಿದ್ದಾಳೆ ಈ ಚೆಲುವೆ. ಇದು ಜೂನಿಯರ್ ಗೂ ಸಹಿತ ಪ್ರತಿಷ್ಠೆಯ ಚಿತ್ರವಾಗಿದೆ.
 

Share this Story:

Follow Webdunia kannada