Select Your Language

Notifications

webdunia
webdunia
webdunia
webdunia

ಹದಿನಾಲ್ಕು ವರ್ಷಗಳ ನಂತರ ವಿಜಯ್ ಜತೆ ಜ್ಯೋತಿಕಾ

ಹದಿನಾಲ್ಕು ವರ್ಷಗಳ ನಂತರ ವಿಜಯ್ ಜತೆ ಜ್ಯೋತಿಕಾ
Chennai , ಗುರುವಾರ, 29 ಡಿಸೆಂಬರ್ 2016 (13:42 IST)
ತಮಿಳು ನಟ ವಿಜಯ್ ತನ್ನ ಮುಂಬರುವ ಚಿತ್ರ ’ಭೈರವ’ ಬಿಡುಗಡೆಗಾಗಿ ಎದುರುನೋಡುತ್ತಿದ್ದಾರೆ. ಈ ಚಿತ್ರದ ಬಳಿಕ ಅಟ್ಲಿ ನಿರ್ದೇಶನದ ಚಿತ್ರದ ಬಗ್ಗೆ ಸಾಕಷ್ಟು ಗುಸುಗುಸು ಮಾತುಗಳು ಕೋಲಿವುಡ್‍ನಲ್ಲಿ ಕೇಳಿಬರುತ್ತಿದೆ. ವಿಜಯ್ ಅವರ 61ನೇ ಚಿತ್ರ ಇದಾಗಿದ್ದು, ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಜ್ಯೋತಿಕಾ ಅಭಿನಯಿಸಲಿದ್ದಾರೆ ಎಂಬುದು ವಿಶೇಷ.
 
ಒಂದು ವೇಳೆ ಇದೇ ನಿಜವಾದರೆ 14 ವರ್ಷಗಳ ನಂತರ ಇವರಿಬ್ಬರೂ ಮತ್ತೆ ಜತೆಯಾಗಿ ಅಭಿನಯಿಸಲಿರುವ ಚಿತ್ರ ಇದಾಗಲಿದೆ. ಈ ಚಿತ್ರದಲ್ಲಿ ವಿಜಯ್ ಜೊತೆಗೆ ಒಟ್ಟು ಮೂರು ಮಂದಿ ನಾಯಕಿಯರಂತೆ. ಅವರಲ್ಲಿ ಜ್ಯೋತಿಕಾ ಒಬ್ಬರು. ಇನ್ನಿಬ್ಬರು ಕಾಜಲ್ ಅಗರ್ವಾಲ್, ಸಮಂತಾ ಆಗಿರಬಹುದು ಎಂಬ ಊಹೆ ಚಿತ್ರೋದ್ಯಮದಲ್ಲಿ ಹರಿದಾಡುತ್ತಿದೆ.
 
ಇನ್ನೊಂದು ವಿಶೇಷ ಎಂದರೆ ಎ.ಆರ್.ರೆಹಮಾನ್ ಸಂಗೀತ ಚಿತ್ರಕ್ಕಿದೆ. ಇದಕ್ಕೆ ಸಂಬಂಧಿಸಿದ ಅಧಿಕೃತ ಪ್ರಕಟಣೆ ಅಷ್ಟೇ ಹೊರಬೀಳಬೇಕು. ಅಟ್ಲಿ ನಿರ್ದೇಶನದ ವಿಜಯ್, ಸಮಂತಾ ಅಭಿನಯದ ಅಭಿನಯದ ’ತೆರಿ’ ಚಿತ್ರ ಬಾಕ್ಸಾಫೀಸಲ್ಲಿ ಗೆಲುವು ಸಾಧಿಸಿದೆ. ಈ ಚಿತ್ರ ವಿಶ್ವದಾದ್ಯಂತ ರೂ.127 ಕೋಟಿ ಬಾಚಿದೆ. ಹಾಗಾಗಿ ಇವರಿಬ್ಬರ ಕಾಂಬಿನೇಷನ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. 2017ರ ಫೆಬ್ರವರಿಯಿಂದ ಶೂಟಿಂಗ್ ಆರಂಭವಾಗಲಿದೆಯಂತೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾದಕ ವ್ಯಸನಿಯಾಗಿದ್ದ ಸ್ಟಾರ್ ವಾರ್ಸ್ ನಟಿ ಇನ್ನಿಲ್ಲ