Webdunia - Bharat's app for daily news and videos

Install App

ಜೂನಿಯರ್ ಎನ್ಟಿಆರ್ ಈಗ ಇನ್ನಷ್ಟು ಹಗುರ ಆಸಾಮಿ

Webdunia
ಶನಿವಾರ, 4 ಫೆಬ್ರವರಿ 2017 (10:32 IST)
ಕಥೆಗಾಗಿ ಮತ್ತು ಅದರಲ್ಲಿನ ಪಾತ್ರಕ್ಕಾಗಿ ಈಗಿನ ಜಮಾನಾ ಹೀರೋಗಳು ತೂಕ ಹೆಚ್ಚಿಸಿಕೊಳ್ಳುವುದು, ಇಳಿಸಿಕೊಳ್ಳುವುದನ್ನು ಮಾಡುತ್ತಲೇ ಬಂದಿದ್ದಾರೆ. ಟಾಲಿವುಡ್ ಯಂಗ್ ಟೈಗರ್ ಎಂದೇ ಕರೆಸಿಕೊಂಡಿರುವ ಜೂ.ಎನ್ಟಿಆರ್‌ಗಾರು ಈಗ ತಮ್ಮ ಮೈ ತೂಕ ಇಳಿಸಿಕೊಂಡಿದ್ದಾರೆ.
 
ಈ ಹಿಂದೆ ಟೆಂಪರ್ ಚಿತ್ರಕ್ಕಾಗಿ ಅವರು ಬಾಡಿ ಲಾಂಗ್ವೇಜ್ ಬದಲಾಯಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಮೊದಲ ಬಾರಿಗೆ ಶರ್ಟ್ ಬಿಚ್ಚಿ ತಮ್ಮ ಅಂಗಸೌಷ್ಠವ ತೋರಿಸಿದ್ದರು. ಇತ್ತೀಚೆಗೆ ತೆರೆಕಂಡ ನಾನ್ನಕು ಪ್ರೇಮತೋ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಆ ಸ್ಟೈಲ್ ಎಲ್ಲರಿಗೂ ಮೆಚ್ಚುಗೆ ಆಗಿತ್ತು, ಮುಖ್ಯವಾಗಿ ಅಭಿಮಾನಿಗಳಿಗೆ. 
 
ಜನತಾ ಗ್ಯಾರೇಜ್ ಚಿತ್ರದಲ್ಲೂ ಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಈಗ ತಮ್ಮ ಮುಂದಿನ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದು ಮೂರು ಭಿನ್ನ ಷೇಡ್‌ಗಳಲ್ಲಿ ಕ್ಯಾಮೆರಾ ಮುಂದೆ ಬರಲಿದ್ದಾರೆ ಎನ್ಟಿಆರ್. ಅದರಲ್ಲಿ ಒಂದು ಪಾತ್ರ ಸಪೂರ ದೇಹವನ್ನು ಬಯಸುತ್ತದಂತೆ. ಆ ಪಾತ್ರಕ್ಕಾಗಿ ಜಿಮ್ ನಲ್ಲಿ ಸಾಕಷ್ಟು ಬೆವರು ಹರಿಸುತ್ತಿದ್ದಾರೆ ಎನ್ಟಿಆರ್. 
 
ಈ ಹಿಂದೊಮ್ಮೆ ಎನ್ಟಿಆರ್ ಲಿಪೋಸಕ್ಸನ್ ಎಂಬ ಬೊಜ್ಜು ತೆಗೆಯುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜ.10 ಚಿತ್ರೀಕರಣಕ್ಕೆ ಚಾಲನೆ ನೀಡಲಾಗುತ್ತಿದೆ. ಈ ಚಿತ್ರಕ್ಕೆ ಜೈ ಲವಕುಶ ಎಂಬ ಶೀರ್ಷಿಕೆ ಇಡಲಾಗಿದೆ. ರಾಶಿ ಖನ್ನಾ, ನಿವೇದಾ ಥಾಮಸ್ ಚಿತ್ರದ ಹೀರೋಯಿನ್‍ಗಳು. ಇನ್ನೊಬ್ಬ ನಾಯಕಿಯಾಗಿ ಹುಡುಕಾಟ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments