Select Your Language

Notifications

webdunia
webdunia
webdunia
webdunia

ಜಾನ್ ಜೋಡಿಯಾಗಿ ಕಿಕ್ ಜಾಕ್ವಲಿನ್

ಜಾನ್ ಜೋಡಿಯಾಗಿ ಕಿಕ್ ಜಾಕ್ವಲಿನ್
mumbai , ಗುರುವಾರ, 27 ನವೆಂಬರ್ 2014 (12:20 IST)
ಸಲ್ಮಾನ್ ಖಾನ್  ಜೊತೆ ನಟಿಸಿದ ಬಳಿಕ ಶ್ರೀಲಂಕ ಚೆಲುವೆ ಕಿಕ್ ಸುಂದರಿ ಜಾಕ್ವಲಿನ್ ಫರ್ನಾಂಡೀಸ್ ಗೆ ಸಾಕಷ್ಟು   ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಬಾಲಿವುಡ್ ನ  ದಿಗ್ಗಜರಲ್ಲಿ ಒಬ್ಬರಾಗಿರುವ  ನಿರ್ದೇಶಕ ಡೇವಿಡ್ ಧವನ್ ಅವ್ರ ಪುತ್ರ ರೋಹಿತ್ ಧವನ್ ದೇಸಿ ಬಾಯ್ಸ್  ಚಿತ್ರದ ಮುಖಾಂತರ ತಮ್ಮ ವಿಶೇಷತೆ ತೋರಿದ್ದರು. 
 
ಅಕ್ಷಯ್  ಕುಮಾರ್, ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಯಂತಹ   ಬಾಲಿವುಡ್ ಸ್ಟಾರ್ ಗಳನ್ನು ಹಾಕಿಕೊಂಡು  ರೋಹಿತ್  ಧವನ್  ಬಾಲಿವುಡ್ ಸಿನಿ ರಂಗಕ್ಕೆ ಎಂಟ್ರಿ ಆಗಿದ್ದರು. ಆ ಚಿತ್ರ ಸಕತ್ ಯಶಸ್ಸು ಗಳಿಸಿತು. ಅದಾದ ಬಳಿಕ ರೋಹಿತ್ ಯಾವ ಚಿತ್ರ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು ಬಾಲಿವುಡ್ ಮಂದಿಗೆ. 
 
ಈಗ ಅವರ ಕುತೂಹಲ ತಣಿಸಿದ್ದಾರೆ  ಎರಡನೇ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ.ಎರಡನೇ ಚಿತ್ರದಲ್ಲಿ ಜಾಕ್ವೆಲಿನ್ ಆಯ್ಕೆ ಆಗಿದ್ದಾಳೆ.  ಜೊತೆ ಜಾನ್ ಅಬ್ರಹಂ ಸಹ ನಿಕ್ಕಿ ಆಗಿದ್ದಾರೆ. ಅಂದರೆ ಅವರು  ಪುನಃ ರೋಹಿತ್ ಚಿತ್ರದಲ್ಲಿ ನಟಿಸುವ ಅವಕಾಶ  ಗಳಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವರುಣ್ ಧವನ್ ಸಹಿತ ಅಭಿನಯಿಸುತ್ತಿದ್ದು ಸಾಜಿದ್ ನದಿಯಾವಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. 
 
ಸದ್ಯಕ್ಕೆ ಚಿತ್ರಕಥೆಯತ್ತ ತಮ್ಮ ಗಮನ ಕೇಂದ್ರೀಕರಿಸಿದ್ದಾರೆ ರೋಹಿತ್. ಈ ಚಿತ್ರದ ಮುಖ್ಯ ಭೂಕೆಯಲ್ಲಿ ಒಬ್ಬರಾದ ಜಾನ್ ಗೆ ಕೈ ತುಂಬಾ ಚಿತ್ರಗಳು ಇರುವ ಕಾರಣ ಅವರು ಸುಲಭವಾಗಿ ಸಿಗುವ ಸಾಧ್ಯತೆ ಇಲ್ಲ. ಇನ್ನು ವರುಣ್ ಸಹ ಎಬಿಸಿಡಿ2 ಚಿತ್ರದಲ್ಲಿ ಬ್ಯುಸಿ. ಜೊತೆ ಜಾಕಿ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಈ ಎಲ್ಲಾ ಕಾರಣದಿಂದ ಚಿತ್ರ ಸೆಟ್ಟೆರುವುದು  ಮುಂದಿನ ವರ್ಷ.   
 

Share this Story:

Follow Webdunia kannada