Select Your Language

Notifications

webdunia
webdunia
webdunia
webdunia

ಬಮ್ ಬಮ್ ಭೋಲೆನಾಥ್ ಚಿತ್ರದಲ್ಲಿ ಜೋಗಿ ಪ್ರೇಂ ಸಿಕ್ಸ್ ಪ್ಯಾಕ್‌ನಲ್ಲಿ...?!

ಬಮ್ ಬಮ್ ಭೋಲೆನಾಥ್ ಚಿತ್ರದಲ್ಲಿ ಜೋಗಿ ಪ್ರೇಂ ಸಿಕ್ಸ್ ಪ್ಯಾಕ್‌ನಲ್ಲಿ...?!
, ಶನಿವಾರ, 28 ಫೆಬ್ರವರಿ 2015 (10:32 IST)
ನೆನಪಿರಲಿ ಪ್ರೇಂ ಅವರು ತಮ್ಮನ್ನು ಸಿಕ್ಸ್ ಪ್ಯಾಕ್ ಮೂಲಕ ದಂಡಿಸಿ ತೆರೆಯ ಮೇಲೆ ತೋರಿಸಿ ಆಗಿದೆ. ಈಗ ಜೋಗಿ ಪ್ರೇಂ ಅವರು ಅದೇ ದಾರಿಯಲ್ಲಿ ನಡೆಯುತ್ತಿದ್ದಾರೆ. ಅವರ ನಟನೆಯ ಬಮ್ ಬಮ್ ಭೋಲೆನಾಥ್ ಚಿತ್ರದಲ್ಲಿ ಈಗ ತಮ್ಮ ದೇಹದ ಮೇಲೆ ಮೂಡಿರುವ ಸಿಕ್ಸ್ ಪ್ಯಾಕ್‌ನ್ನು ತೋರಿಸುವ ಸಾಹಸದಲ್ಲಿ ಇದ್ದಾರೆ. ಇತ್ತೀಚಿಗೆ ಡಿಕೆ ಚಿತ್ರದಲ್ಲಿ ನಟಿಸಿ, ಅದರಲ್ಲಿ ಸನ್ನಿ ಲಿಯೋನ್ ಕರಿಸಿ ಕುಣಿದಿದ್ದ ನಟ ನಿರ್ದೇಶಕ ಪ್ರೇಂ ಈಗ ಸಿಕ್ಸ್ ಪ್ಯಾಕ್ ಅಬ್ಸ್ ಮೂಲಕ ತಮ್ಮ ದೇಹ ಸೌಂದರ್ಯವನ್ನು ಅವರ ಅಭಿಮಾನಿಗಳ ಮುಂದಿಡುತ್ತಿದ್ದಾರೆ. 
ಈ ಚಿತ್ರವನ್ನು ನಾಗಿರೆಡ್ಡಿ ನಿರ್ದೇಶನ ಮಾಡುವ ಸಾಧ್ಯತೆ ಇದ್ದು, ಇದು ಫೆಬ್ರವರಿ 25 ರಂದು ಲಾಂಚ್ ಆಯಿತು. ಆದರೆ ಅನೇಕ ಕಾರಣಗಳಿಂದ ಚಿತ್ರದ ಕೆಲಸ ತಡವಾಗಿದೆ. ಮುಖ್ಯವಾಗಿ ಹೇಳ ಬೇಕೆಂದರೆ ಈ ಚಿತ್ರದ ಕೆಲಸದ ವೇಳೆಗೆ ಸರಿಯಾಗಿ ಸಿನಿಮಾ ಕಾರ್ಮಿಕರು ಮುಷ್ಕರ ಮಾಡಿದ್ದರು. ಇದರಿಂದ ಚಿತ್ರದ ಮುಂದೂಡಿದೆ ಎಂದು ನಿರ್ಮಾಪಕ ಸುರೇಶ ಹೇಳಿದ್ದಾರೆ. ಆದರೆ ಅದಕ್ಕಿಂತ ಮುಖ್ಯ ಸಂಗತಿ ಏನೆಂದರೆ ನಟ ನಿರ್ದೇಶಕ ಪ್ರೇಂ ಅವರು ತಮ್ಮ ಚಿತ್ರದಲ್ಲಿ ಸಿಕ್ಸ್ ಪ್ಯಾಕ್ ಅಬ್ಸ್ ತೋರಿಸುವುದಕ್ಕೆ ಬೇಕಾದ ಕೆಲಸಗಳನ್ನು ಮಾಡುತ್ತಿದ್ದಾರೆ. ತಮಗೆ ಒಂದು ತಿಂಗಳ ಸಮಯ ನೀಡಿ ಎಂದು ನಿರ್ಮಾಪಕರ ಬಳಿ ಕೇಳಿದ್ದಾರಂತೆ ಪ್ರೇಂ. ಈ ಕಾರಣದಿಂದ ಭೋಲೆನಾಥ ಬಮ್ ಬಮ್ ಅನ್ನದೆ ಸೈಲೆಂಟಾಗಿ ಹಾಗೆ ನಿಂತಿದೆ. ಆದರೆ ಇದರ ಟ್ರೈಲರ್, ಹಾಡುಗಳ ಕಂಪೋಸ್ ಎಲ್ಲವೂ ಆಗಿದೆಯಂತೆ ಇನ್ನೇನು ನಟ ನಟಿಸೋದಷ್ಟೇ ಈಗ ಬಾಕಿ ಉಳಿದಿರುವ ಕೆಲಸ. ಇದರಲ್ಲಿ ಪ್ರೇಂ ಪೊಲೀಸ್ ಅಧಿಕಾರಿ ಪಾತ್ರಧಾರಿಯಾಗಿದ್ದಾರೆ.

Share this Story:

Follow Webdunia kannada