Select Your Language

Notifications

webdunia
webdunia
webdunia
webdunia

ನಾನು ಕ್ಷಮಿಸಿದ್ದೇನೆ ಅಂದಳು ಸೆಕ್ಸಿ ಸಂಜನಾ !

ನಾನು ಕ್ಷಮಿಸಿದ್ದೇನೆ ಅಂದಳು   ಸೆಕ್ಸಿ ಸಂಜನಾ !
, ಬುಧವಾರ, 23 ಏಪ್ರಿಲ್ 2014 (10:16 IST)
ಅಂದು ಅಂದ್ರೆ ಕಳೆದ ಶುಕ್ರವಾರ ಜಗ್ಗೇಶ್ ಕಾಮನ  ಜೇಠ್ಮಲಾನಿ ಮತ್ತು ಸಂಜನಾ ನಟನೆಯ ಅಗ್ರಜ ಬಿಡುಗಡೆ ಆಯಿತು. ಅಂದು ಮೊದಲ ಷೋ ವೀಕ್ಷಿಸಿದ ಬಳಿಕ ಆಕೆ ಈ ಚಿತ್ರತಂಡ   ಕೆಟ್ಟದಾಗಿ ಬಳಸಿಕೊಂಡಿದ್ದಾರೆ, ನನಗೆ ಮೊದಲು ಹೇಳಿದಂತೆ ಇಲ್ಲ ಈ ಚಿತ್ರ. ಹಾಗೆ ಹೀಗೆ ಎಂದು ಎಗರಾಡಿದ್ದಳು . ಅದಾದ ಬಳಿಕ ಹಿರಿಯ ನಟ ಜಗ್ಗೇಶ್ ಮೇಲು ಸಹ ಕೆಂಡ ಕಾರಿದ್ದಳು 
 
ನನ್ನ ಈ ಪಾತ್ರವನ್ನು ಹೀಗೆ ಬೇರೆ ರೀತಿ ಬಳಕೆ ಮಾಡಿದ್ದಕ್ಕೆ ನನಗೆ ಬೇಸರ ಆಗಿದೆ, ನನ್ನ ತಾರ ಬದುಕಿನ ಮೇಲೆ ಇದು ಕಪ್ಪು ಚುಕ್ಕೆ ಎಂದೆಲ್ಲ ಹೇಳಿದ್ದಳು . ಅದಾದ ಬಳಿಕ ಕೋಪದಿಂದ ಎಲ್ಲರ ಬಳಿ ತನ್ನ ದುಖ ಹೇಳಿಕೊಂಡಿದ್ದಳು. ಆದರೆ ಈಗ ಆಕೆಗೆ ಅದ್ಯಾಕೋ ಈ ಚಿತ್ರತಂಡವನ್ನು ಕ್ಷಮಿಸುವ ಮನಸ್ಸು ಬಂದಿದೆ. ತಾನು ಈ ಚಿತ್ರತಂಡವನ್ನು ಕ್ಷಮಿಸಿದ್ದೇನೆ ಎಂದು ಉದಾರವಾಗಿ ಹೇಳಿದ್ದಾಳೆ. ಅಲ್ಲದೆ ತನ್ನಂತಹ ಒಳ್ಳೆಯ ಗುಣದವಳೇ ಈ ಪ್ರಪಂಚದಲ್ಲಿ ಇಲ್ಲ ಎನ್ನುವ ಮಾತನ್ನು ಸಹ ಹೇಳಿದ್ದಾಳೆ. ಯಾಕೆ ಇಂತಹ ಬದಲಾವಣೆ ಎಂದು ಆಶ್ಚರ್ಯ ಪಡಬೇಕಿಲ್ಲ.. ಅಗ್ರಜ ಚಿತ್ರವೂ ತಕ್ಕಮಟ್ಟಿಗೆ ಜನರ ಮನಸೆಳೆಯುತ್ತಿದೆ.. ಒಂದರ್ಥದಲ್ಲಿ ಚಿತ್ರತಂಡ ಉಸಿರಾಡುವಂತೆ ಮಾಡಿದೆ.. ಚಿತ್ರ ಸೋತಿದ್ದರೆ ಜಗಳ ಮುಂದುವರೆಯುತ್ತಿತ್ತು, ಗೆದ್ದಾಗ ? 

Share this Story:

Follow Webdunia kannada