Select Your Language

Notifications

webdunia
webdunia
webdunia
webdunia

ತಾಯಿಯ ಬಗ್ಗೆ ಡಾಕ್ಯುಮೆಂಟರಿ ಮಾಡ್ತಾರಂತೆ ಜಾಕಿಶ್ರಾಫ್

ತಾಯಿಯ ಬಗ್ಗೆ ಡಾಕ್ಯುಮೆಂಟರಿ ಮಾಡ್ತಾರಂತೆ ಜಾಕಿಶ್ರಾಫ್
, ಗುರುವಾರ, 26 ನವೆಂಬರ್ 2015 (10:36 IST)
ಜಗತ್ತಿನಲ್ಲಿ ಯಾರನ್ನೇ ಕೇಳಿ ನೀವು ಯಾರನ್ನು ಹೆಚ್ಚು ಪ್ರೀತಿಸುತ್ತೀರಿ ಅಂತಾ ಹೆಚ್ಚಿನವರು ತಟ್ಟನೆ ಹೇಳೋದು ತಾಯಿ ಅಂತಾ. ತಾಯಿ ಅನ್ನೋ ಜೀವದ ಶಕ್ತಿಯೇ ಅಂತಹದ್ದು.ಆಕೆ ನೀಡುವ ಪ್ರೀತಿ ವ್ಯಾತ್ಸಲ್ಯದ ಮುಂದೆ ಯಾವುದಕ್ಕೂ ಬೆಲೆ ಇಲ್ಲ. ಇದೀಗ ಬಾಲಿವುಡ್ ನಟ ಜಾಕಿಶ್ರಾಫ್ ತಮ್ಮ ತಾಯಿಗೆ ಅತ್ಯುತ್ತಮವಾದ ಕೊಡುಗೆಯನ್ನು ನೀಡೋದಕ್ಕೆ ಮುಂದಾಗಿದ್ದಾರೆ.

ಹೌದು... ಜಾಕಿಶ್ರಾಫ್  ಅವರ ತಾಯಿ ಬಗ್ಗೆ ಡ್ಯಾಕುಮೆಂಟರಿ ಒಂದನ್ನು ಮಾಡಲು ನಿರ್ಧರಿಸಿದ್ದಾರಂತೆ. ಆ ಮೂಲಕ ಅಮ್ಮನಿಗೊಂದು ಉಡುಗೊರೆ ನೀಡಲು ಅವರು ಮುಂದಾಗಿದ್ದಾರೆ. ಅದರಲ್ಲಿ ಅವರ ತಾಯಿ ಮಧ್ಯ ಏಷಿಯಾದಿಂದ ಮುಂಬೈಗೆ ಹೇಗೆ ಬಂದ್ರು ಅವರು ಯಾವ ರೀತಿ ಜೀವನ ನಡೆಸಿದ್ರು. ಇನ್ನು ಅವರ ಬಾಲ್ಯದ ಜೀವನ ಹೇಗಿತ್ತು. ಮಕ್ಕಳನ್ನು ಯಾವ ರೀತಿ ಬೆಳೆಸಿದರು. ಇದೆಲ್ಲಾವನ್ನು ತೋರಿಸಲಿದ್ದಾರಂತೆ. ಇದು ಜಾಕಿ ಶ್ರಾಫ್ ಅವರ ಬಹು ದಿನದ ಕನಸು ಕೂಡ ಹೌದಂತೆ.
 
ಇದರ ನಡುವೆಯೇ ಜಾಕಿಶ್ರಾಫ್ ಪಾಲಿಗೆ ಸಿಹಿ ಸುದ್ದಿಯೊಂದು ಕೂಡ ಇದೆ.ಮೊನ್ನೆಯಷ್ಟೇ ಜಾಕಿ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಡಾಕ್ಯುಮೆಂಟರಿ, ಶಾರ್ಟ್ ಹಾಗೂ ಆನಿಮೇಷನ್ ಸಿನಿಮಾಗಳ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಇದು ಅವರಿಗೆ ತುಂಬಾನೇ ಖುಷಿ ನೀಡಿದೆಯಂತೆ. ಡಾಕ್ಯುಮೆಂಟರಿ ಮಾಡೋದು ಅಂದ್ರೆ ಅವರಿಗೆ ಮೊದಲಿನಿಂದಲೂ ತುಂಬಾನೇ ಆಸಕ್ತಿಯಿತ್ತಂತೆ. ಇದೀಗ ಅದನ್ನೇ ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

Share this Story:

Follow Webdunia kannada