Select Your Language

Notifications

webdunia
webdunia
webdunia
webdunia

ಜಝ್ಬಾ ಆಕ್ಷನ್ ಸಿನಿಮಾ ಅಲ್ಲ: ಐಶ್ವರ್ಯಾ ರೈ

ಜಝ್ಬಾ ಆಕ್ಷನ್ ಸಿನಿಮಾ ಅಲ್ಲ: ಐಶ್ವರ್ಯಾ ರೈ
, ಗುರುವಾರ, 8 ಅಕ್ಟೋಬರ್ 2015 (12:51 IST)
ಐದು ವರ್ಷಗಳ ಬಳಿಕ ಐಶ್ವರ್ಯಾ ರೈ ಮತ್ತೆ ಬಣ್ಣ ಹಚ್ಚಿರುವ ಸಿನಿಮಾ ಜಝ್ಬಾ. ಸಿನಿಮಾ ಅಕ್ಟೋಬರ್ 9 ರಂದು ರಿಲೀಸ್ ಆಗಲಿದೆ.ಅಭಿಮಾನಿಗಳಿಗೂ ಕೂಡ ಸಿನಿಮಾದ ಬಗ್ಗೆ ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಐಶ್ ಸಿನಿಮಾದ ಬಗ್ಗೆ ಕೆಲ ಮಾಹಿತಿಗಳನ್ನು ಹೊರ ಹಾಕಿದ್ದಾರೆ.
ಜಝ್ಬಾ ಸಿನಿಮಾ ಒಂದು ಆಕ್ಷನ್ ಸಿನಿಮಾ ಅನ್ನೋ ಕಲ್ಪನೆ ಹೆಚ್ಚಿನ ಜನರಲ್ಲಿತ್ತು. ಆದ್ರೆ ಐಶ್ವರ್ಯಾ ಇದು ಆಕ್ಷನ್ ಸಿನಿಮಾವಲ್ಲ ಎಂದಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟಿಸಲು ಯಾವ ರೀತಿ ತಯಾರಿ ಮಾಡಿಕೊಂಡಿದ್ರಿ ಅನ್ನೋ ಪ್ರಶ್ನೆಗೆ ಉತ್ತರಿಸಿದ ಐಶ್, ಸಿನಿಮಾಕ್ಕಾಗಿ ನಾನು ಯಾವುದೇ ರೀತಿ ತಯಾರ ಮಾಡಿಕೊಂಡಿರಲಿಲ್ಲ. ಅಷ್ಟೊಂದು ಸಮಯವಿರಲಿಲ್ಲ. ಸೆಟ್ ಗೆ ಹೋಗಿ ನೇರವಾಗಿ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದೆ ಎಂದಿದ್ದಾರೆ.
 
ಸಿನಿಮಾದಲ್ಲಿ ಐಶ್ ನ್ಯಾಯವಾದಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಸಂಜಯ್ ಗುಪ್ತಾ ನಿರ್ದೇಶಿಸಿದ್ದಾರೆ. ಶಬನಾ ಆಜ್ಮಿ ಹಾಗೂ ಅನುಪಮ್ ಖೇರ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಅಕ್ಟೋಬರ್ 9 ರಂದು ರಿಲೀಸ್ ಆಗಲಿದೆ.

Share this Story:

Follow Webdunia kannada