Select Your Language

Notifications

webdunia
webdunia
webdunia
webdunia

'ಪುಲಿ' ಬಿಡುಗಡೆ ಸಂಭ್ರಮದಲ್ಲಿದ್ದ ತಮಿಳು ನಟ ವಿಜಯ್‌ಗೆ ಶಾಕ್: ಮೂವರ ಮನೆ ಮೇಲೆ ಐಟಿ ದಾಳಿ

'ಪುಲಿ' ಬಿಡುಗಡೆ ಸಂಭ್ರಮದಲ್ಲಿದ್ದ ತಮಿಳು ನಟ ವಿಜಯ್‌ಗೆ ಶಾಕ್: ಮೂವರ ಮನೆ ಮೇಲೆ ಐಟಿ ದಾಳಿ
, ಗುರುವಾರ, 1 ಅಕ್ಟೋಬರ್ 2015 (11:03 IST)
ತಮಿಳು ಚಿತ್ರರಂಗ ನಿನ್ನೆ ಒಮ್ಮೆ ಕಂಪಿಸಿತ್ತು. ಬೆಳ್ಳಂಬೆಳಗ್ಗೆಯೇ ಶಾಕ್ ಗೆ ಒಳಗಾಗಿತ್ತು. ಯಾಕಂದ್ರೆ ಚಿತ್ರರಂಗದ ಸೆಲೆಬ್ರಿಟಿಗಳ ಮನೆಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಾಏಕಿ ದಾಳಿನಡೆಸಿದ್ರು. ದಾಳಿಯ ಸುದ್ದಿ ಇಡೀ ಚಿತ್ರರಂಗವನ್ನ ಗರಬಡಿಸಿತ್ತು. ಯಾರ ಮನೆ ಮೇಲೆ ದಾಳಿಯಾಯ್ತು, ಎಲ್ಲಿದಾಳಿ ಆಯ್ತು ಅನ್ನೋ ಉತ್ತರ ಸಿಗದೆ ಗುಸುಗುಸು ಶುರುವಾಗಿತ್ತು. 
ತಮಿಳು ಖ್ಯಾತ ನಟ ವಿಜಯ್‌, ನಯನತಾರಾ ಮತ್ತು ಸಮಂತಾ ಅವರ ಮನೆಗಳ ಮೇಲೆ  ಇನ್ ಕಮ್ ಟ್ಯಾಕ್ಸ್ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ರು. ತಮಿಳುನಾಡು, ಕೇರಳ ಮತ್ತು ತೆಲಂಗಾಣದ 32 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ರು. ದಾಳಿಯ ವೇಳೆ ನಟನಟಿಯರ ಮನೆಯಲ್ಲಿದ್ದ ಲೆಕ್ಕಪತ್ರಗಳು ಮತ್ತು ಬ್ಯಾಂಕ್ ಗೆ ಸಂಬಂಧಿಸಿದ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. 
 
ವಿಜಯ್‌, ನಯನತಾರಾ ಮತ್ತು ಸಮಂತಾ ಅವರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ. ಇನ್ನು ಗುರುವಾರ ಬಿಡುಗಡೆಯಾಗಲಿರುವ ವಿಜಯ್‌ ಅಭಿನಯದ ಪುಲಿ ಚಿತ್ರದ ನಿರ್ಮಾಪಕರ ಮನೆಗಳ ಮೇಲೂ ಐಟಿ ದಾಳಿ ನಡೆದಿದೆ. ಆದಾಯ ತೆರಿಗೆಯನ್ನ ಸರಿಯಾದ ರೀತಿಯಲ್ಲಿ ಪಾವತಿ ಮಾಡದೆ ಇರೋ ಕಾರಣಕ್ಕಾಗಿ ದಾಳಿ ನಡೆಸಲಾಗಿದೆ ಅಂತ ಮೂಲಗಳು ತಿಳಿಸಿವೆ. 

Share this Story:

Follow Webdunia kannada