Select Your Language

Notifications

webdunia
webdunia
webdunia
webdunia

ವಿಜಯ್,ನಯನತಾರ, ಸಮಂತಾ ನಿವಾಸಗಳ ಮೇಲೆ ರೈಡ್

ವಿಜಯ್,ನಯನತಾರ, ಸಮಂತಾ ನಿವಾಸಗಳ ಮೇಲೆ ರೈಡ್
ಚೆನ್ನೈ , ಬುಧವಾರ, 30 ಸೆಪ್ಟಂಬರ್ 2015 (12:19 IST)
ತಮಿಳಿನ ಪ್ರಖ್ಯಾತ ಚಿತ್ರನಟ-ನಟಿಯರ ಮೇಲೆ ಐಟಿ ಅಧಿಕಾರಿಗಳು ಕೆಂಗಣ್ಣು ಬೀರಿದ್ದಾರೆ. ಸೂಪರ್ ಸ್ಟಾರ್ ನಟ ವಿಜಯ್, ಬಹುಭಾಷಾ ನಟಿಯರಾದ ನಯನತಾರ, ಸಮಂತಾ ಅವರ ನಿವಾಸಗಳ ಮೇಲೆ ಇಂದು ಬೆಳಿಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳ ಜತೆ ಸೇರಿ ಏಕ ಕಾಲದಲ್ಲಿ ದಾಳಿ ನಡೆಸಿದ್ದು ಹಲವು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. 

ನಾಳೆ ಬಿಡುಗಡೆಯಾಗುತ್ತಿರುವ ವಿಜಯ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪುಲಿ ನಿರ್ದೇಶಕ ಚಿಂಬು ದೇವನ್ ಮತ್ತು ನಿರ್ಮಾಪಕರಾದ ಶಿಬು ತಮಿನ್ಸ್ ಮತ್ತು ಸೆಲ್ವ ಕುಮಾರ್ ಅವರ ನಿವಾಸದ ಮೇಲೆ ಸಹ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 
 
ಹೈದರಾಬಾದ್, ತಮಿಳುನಾಡು, ಕೇರಳ ಸೇರಿದಂತೆ 32 ಕಡೆ ಏಕಕಾಲಕ್ಕೆ ರೈಡ್ ನಡೆದಿದೆ. 
 
ವಿಜಯ್‌, ಕಿಚ್ಚ ಸುದೀಪ್, ಹಿಂದಿಯ ಪ್ರಖ್ಯಾತ ನಟಿ ಶ್ರೀದೇವಿ ಅಭಿಯನದ 'ಪುಲಿ' ಚಿತ್ರನಾಳೆ ತೆರೆಗೆ ಬರಲಿದ್ದು, ಈ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ಹೂಡಿಕೆಗಳ ಬಗ್ಗೆ ಸಂಪೂರ್ಣ ವಿವರಣೆ ನೀಡದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. 

Share this Story:

Follow Webdunia kannada