Select Your Language

Notifications

webdunia
webdunia
webdunia
webdunia

ಸುಜೋಯ್ ಘೋಷ್ ಮುಂದಿನ ಸಿನಿಮಾದಲ್ಲಿ ಐಶ್ವರ್ಯಾ ರೈ

ಸುಜೋಯ್ ಘೋಷ್ ಮುಂದಿನ ಸಿನಿಮಾದಲ್ಲಿ ಐಶ್ವರ್ಯಾ ರೈ
, ಸೋಮವಾರ, 3 ಆಗಸ್ಟ್ 2015 (10:26 IST)
ಈಗಾಗಲೇ ಜಝ್ಬಾ ಸಿನಿಮಾದಲ್ಲಿ ಬ್ಯುಸಿಯಾಗಿರುವ ಐಶ್ವರ್ಯಾ ರೈ ಇದೀಗ ಮತ್ತೊಂದು ಸಿನಿಮಾಕ್ಕೆ ಓಕೆ ಎಂದಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತೆ ಮತ್ತೆ ತನ್ನನ್ನು ತೆರೆ ಮೇಲೆ ನೋಡೋ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅಂದ್ಹಾಗೆ ಐಶ್ ಬೇಬಿ ಓಕೆ ಅಂದಿರೋದು ಸುಜೋಷ್ ಘೋಷ್ ಅವರ ಮುಂದಿನ ಸಿನಿಮಾಕ್ಕೆ.
ಜಪಾನಿ ಕಾದಂಬರಿ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ನ್ನು ಸುಜೋಯ್ ಸಿನಿಮಾ ಮಾಡುತ್ತಿದ್ದು ಅದಕ್ಕೆ ಈಗಾಗಲೇ ಐಶ್ವರ್ಯಾ ಅವರನ್ನು ಅಪ್ರೋಚ್ ಮಾಡಲಾಗಿದೆಯಂತೆ. ಅಲ್ಲದೇ ಐಶ್ ಬೇಬಿ ನಟಿಸಲು ಗ್ರೀನ್ ಸಿಗ್ನಲ್ ಕೂಡ ಕೊಟ್ಟಿದ್ದಾರಂತೆ. ಅಂದ್ಹಾಗೆ ಐಶ್ವರ್. ಮಗಳು ಆರಾಧ್ಯ ಹುಟ್ಟುವ ಮೊದಲು ಗುಜಾರಿಶ್ ಸಿನಿಮಾದಲ್ಲಿ ನಟಿಸಿದ್ದರು. ಆ ಬಳಿಕ ಮೂರು ವರ್ಷದ ಗ್ಯಾಂಪ್ ನಂತ್ರ ಜಝ್ಬಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
 
ಇನ್ನು ಸುಜೋಯ್ ಸಿನಿಮಾದಲ್ಲಿ ಐಶ್ ಗೆ ನಾಯಕನಾಗಿ ಸೈಫ್ ಆಲಿಖಾನ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಕರಣ್ ಜೋಹರ್ ನಿರ್ದೇಶನದ ಯೇ ದಿಲ್ ಹೇ ಮುಷ್ಕಿಲ್ ಸಿನಿಮಾದಲ್ಲೂ ಐಶ್ವರ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಐಶ್ ಬೇಬಿ ಮತ್ತೆ ಮತ್ತೆ ಸಿನಿಮಾ ಮಾಡ್ತಿರೋದು ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದೆ.

Share this Story:

Follow Webdunia kannada