Select Your Language

Notifications

webdunia
webdunia
webdunia
webdunia

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಮಿಸ್ಟರ್ ಐರಾವತ ಸಿನಿಮಾ

ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಮಿಸ್ಟರ್ ಐರಾವತ ಸಿನಿಮಾ
, ಸೋಮವಾರ, 31 ಆಗಸ್ಟ್ 2015 (11:18 IST)
ದರ್ಶನ್ ಅಭಿನಯದ ಮಿಸ್ಟರ್ ಐರಾವತ ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಮಾಡುತ್ತಾನೇ ಇದೆ. ಇದೀಗ ಸಿನಿಮಾ ಮತ್ತೆ ಸುದ್ದಿಯಾಗಿದೆ. ಜೊತೆಗೆ ಹೊಸ ದಾಖಲೆಯೊಂದಕ್ಕೆ ಸಾಕ್ಷಿಯಾಗಿದೆ.

ಮಿಸ್ಟರ್ ಐರಾವತ ಸಿನಿಮಾದ ವಿತರಣೆ ಹಕ್ಕು ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾಗುವ ಮೂಲಕ ದಾಖಲೆ ಬರೆದಿದೆ. ಇದರಿಂದ ರಿಲೀಸ್ ಗೂ ಮುನ್ನವೇ ಸಿನಿಮಾದ ನಿರ್ಮಾಪಕರಿಗೆ ಸಿನಿಮಾಕ್ಕೆ ಹಾಕಿದ ಬಂಡವಾಳ ಬಂದಿದೆ. ಹಾಗಾಗಿ ಸಿನಿಮಾ ಬಾಕ್ಸಾಫೀಸ್ ನಲ್ಲಿ ಕಮಾಲ್ ಮಾಡುತ್ತೆ ಅಂತಾ ಸ್ಯಾಂಡಲ್ ವುಡ್ ಮಂದಿ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
 
ಈ ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಿಸಿದ್ದಾರೆ. ಅರ್ಜುನ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಂಗಿತ ನಿರ್ದೇಶಕ ವಿ.ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನು ಸಿನಿಮಾದಲ್ಲಿ ಪರಭಾಷಾ ನಟಿ ಊರ್ವಶಿ ರೌಟೇಲ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ  ಪ್ರಕಾಶ್, ಅನಂತ್ ನಾಗ್ ಮುಂತಾದ ಕಲಾವಿದರ ದಂಡೇ ಸಿನಿಮಾದಲ್ಲಿದೆ. ಈ ಸಿನಿಮಾ ಸಪ್ಟಂಬರ್ 11 ರಂದು ರಿಲೀಸ್ ಆಗಲಿದೆ.

Share this Story:

Follow Webdunia kannada