Webdunia - Bharat's app for daily news and videos

Install App

ಹರ್ಭಜನ್-ಗೀತಾ ಮದುವೆ ಆಮಂತ್ರಣ ಪತ್ರಿಕೆ ರೆಡಿ

Webdunia
ಮಂಗಳವಾರ, 6 ಅಕ್ಟೋಬರ್ 2015 (11:07 IST)
ಬಾಲಿವುಡ್ ನ ಬಹು ನಿರೀಕ್ಷಿತ ಮದುವೆಯೊಂದಕ್ಕೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ಕ್ರಿಕೆಟಿಗ ಹರ್ಬಜನ್ ಸಿಂಗ್ ಹಾಗೂ ಗೀತಾ ಬಾಸ್ರಾ ಇದೇ ತಿಂಗಳ 29 ರಂದು ಹಸೆಮಣೆ ಏರಲಿದ್ದಾರೆ. ಈಗಾಗಲೇ ವಿವಾಹದ ಆಮಂತ್ರಣ ರೆಡಿಯಾಗಿದ್ದು, ವಿವಾಹಕ್ಕೆ ಆಹ್ವಾನಿಸುವ ಕಾರ್ಯದಲ್ಲಿ ಇಬ್ಬರು ತೊಡಗಿದ್ದಾರೆ.
ಡಿಸೈನರ್ ಆದಿ ಸಿಂಗ್ ಅನ್ನೋರು ಈ ಆಮಂತ್ರಣ ಪತ್ರಿಕೆಯನ್ನು ರೆಡಿ ಮಾಡಿದ್ದಾರೆ. ಇತ್ತ ವಧು ವರರ ವಿವಾಹ ಉಡುಪುಗಳು ಕೂಡ ರೆಡಿಯಾಗುತ್ತಿವೆ. ವಿವಾಹದ ದಿನ ಹರ್ಭಜನ್ ಸಿಂಗ್ ಶೇರ್ವಾನಿ ಧರಿಸಲಿದ್ದಾರಂತೆ.  ರಾಘವೇಂದ್ರ ರಾಥೋಡ್ ಎಂಬವರು ಹರ್ಭಜನ್ ಗೆ ಕ್ಯಾಸ್ಟ್ಯೂಮ್ ರೆಡಿ ಮಾಡುತ್ತಿದ್ದಾರಂತೆ. ಇನ್ನು ವಿವಾಹದ ದಿನ ಗೀತಾ ಗಾಗ್ರಾದಲ್ಲಿ ಮಿಂಚಲಿದ್ದಾರಂತೆ. ಇನ್ನು ವಿವಾಹ 5 ದಿನಗಳ ಕಾಲ ಭರ್ಜರಿಯಾಗಿ ನಡೆಯಲಿದೆ.
 
ಇನ್ನು ವಿವಾಹ ಹರ್ಭಜನ್ ತವರುನಗರ ಜಲಂಧರ್‌ನಿಂದ 20 ಕಿಮೀ ದೂರದ ಪಾಗ್ವಾರಾದ ಹೊಟೆಲ್ ಕ್ಲಬ್ ಕಬಾನಾದಲ್ಲಿ ನಡೆಯಲಿದೆ. ಬಳಿ ಮುಂಬೈನಲ್ಲಿ ಆರಕ್ಷತೆ ನಡೆಯುವ ಸಾಧ್ಯತೆಯಿದೆ. ಇನ್ನು ವಿವಾಹಕ್ಕೆ ಬಾಲಿವುಡ್ ಹಾಗೂ ಕ್ರಿಕೆಟ್ ತಾರೆಯರು ಆಗಮಿಸಲಿದ್ದಾರೆ. ಹಾಗಾಗಿ ವಿವಾಹ ತಾರೆಯರ ಸಮಾಗಮಕ್ಕೆ ಸಾಕ್ಷಿಯಾಗಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments