ಕುತೂಹಲ ಮೂಡಿಸಿದೆ 'ಉದ್ಘರ್ಷ' ಫಸ್ಟ್ ಲುಕ್

Webdunia
ಬುಧವಾರ, 29 ಆಗಸ್ಟ್ 2018 (14:33 IST)
ಎರಡು ವರ್ಷಗಳ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಇದೀಗ ಉದ್ಘರ್ಷ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ದೇಸಾಯಿ ನಿರ್ದೇಶನದ 'ಉದ್ಘರ್ಷ' ಸಿನಿಮಾ ಪೋಸ್ಟರ್ ಇದೀಗ ಕುತೂಹಲ ಮೂಡಿಸಿದೆ..!!
ಈ ಚಿತ್ರದಲ್ಲಿ ಬಹುಭಾಷಾ ಸ್ಟಾರ್‌ಗಳು ನಟಿಸಿದ್ದಾರೆ. ಠಾಕೂರ್‌ ಅನೂಪ್‌ ಸಿಂಗ್‌, ಧನ್ಸಿಕಾ, ತಾನ್ಯ ಹೋಪ್‌, ಕಬೀರ್‌ ಸಿಂಗ್‌ ದುಹಾನ್‌, ಬಾಹುಬಲಿ ಖ್ಯಾತಿಯ ಪ್ರಭಾಕರ್‌, ಶ್ರದ್ಧಾ ದಾಸ್‌ ಹಾಗೂ ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಸೇರಿದಂತೆ ಇನ್ನೂ ಹಲವರೂ ನಟನಟಿಯರು ಉದ್ಘರ್ಷ ಚಿತ್ರದಲ್ಲಿದ್ದಾರೆ.
 
ಉದ್ಘರ್ಷ ಚಿತ್ರದ ಫಸ್ಟ್ ಲುಕ್ ನಲ್ಲಿ ರಕ್ತ ಸಿಕ್ತ ಹುಡುಗಿಯೊಬ್ಬಳ ಕಾಲುಗಳನ್ನು ತೋರಿಸಿ ಪೋಸ್ಟರ್ ನಲ್ಲೇ ಕುತೂಹಲ ಮೂಡಿಸಿದ್ದಾರೆ. ದೇವರಾಜ್ ಚಿತ್ರದ ನಿರ್ಮಾಣ ಮಾಡುತ್ತಿದ್ದು ಬಾಲಿವುಡ್ ಖ್ಯಾತ ಸಂಗೀತ ನಿರ್ದೇಶಕ ಸಂಜೋಯ್ ಚೌಧರಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
 
'ಉದ್ಘರ್ಷ' ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತೆಲಗು, ತಮಿಳಿನಲ್ಲಿ ರಿಲೀಸ್ ಮಾಡಲಿದ್ದಾರೆ. ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಸಾಹಸ ನಿರ್ದೇಶಕ ರವಿವರ್ಮ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಒಟ್ಟಾರೆ, ಬಾಕಿ ಇರುವ ಕೆಲಸಗಳನ್ನ ಮುಗಿಸಿ ಆದಷ್ಟೂ ಬೇಗ ತೆರೆಮೇಲೆ ಬರಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಲವ್‌ ಜಿಹಾದ್‌ಗೆ ಉತ್ತೇಜನ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೀರ್ ಖಾನ್‌ಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ

ಹಂಸಲೇಖಾರಿಗೆ ಪದ್ಮ ಪ್ರಶಸ್ತಿ ಇಲ್ಲವೇ ಜ್ಞಾನ ಪೀಠ ಕೊಡಬೇಕು ಎಂದು ನೆನಪಿರಲಿ ಪ್ರೇಮ್ ಅಭಿಯಾನ: ನೆಟ್ಟಿಗರು ಏನಂದ್ರು ಗೊತ್ತಾ

3 ಈಡಿಯಟ್ಸ್ ಸಿನಿಮಾ ಸೋನಮ್ ವಾಂಗ್ಚುಕ್ ಕತೆಯಲ್ಲ, ಆಗ ಅವರು ಯಾರೆಂದೇ ಗೊತ್ತಿರಲಿಲ್ಲ: ಅಮೀರ್ ಖಾನ್

ಮೊದಲ ಆಷಾಢ ಶುಕ್ರವಾರ: ಗಂಡ ದರ್ಶನ್ ಮಾಡುತ್ತಿದ್ದ ಕೆಲಸವನ್ನು ತಾನೇ ಮಾಡಿದ ವಿಜಯಲಕ್ಷ್ಮಿ

ಕ್ಯಾನ್ಸರ್‌ ಅನ್ನು ಸಾಮಾನ್ಯ ಜ್ವರದಂತೆ ಎದುರಿಸಿದೆ: ಕ್ಯಾನ್ಸರ್ ಗೆದ್ದು ಬಂದ ಬಗ್ಗೆ ಸಂಜಯ್ ದತ್ ಮಾತು

ಮುಂದಿನ ಸುದ್ದಿ
Show comments