Select Your Language

Notifications

webdunia
webdunia
webdunia
webdunia

ಬರೋಬ್ಬರಿ ಒಂದೂವರೆ ಕೋಟಿ ಡಿಮ್ಯಾಂಡ್ ಮಾಡಿದ ಇಲಿಯಾನಾ

ಬರೋಬ್ಬರಿ ಒಂದೂವರೆ ಕೋಟಿ ಡಿಮ್ಯಾಂಡ್ ಮಾಡಿದ ಇಲಿಯಾನಾ
, ಮಂಗಳವಾರ, 1 ಸೆಪ್ಟಂಬರ್ 2015 (09:38 IST)
ಸಿನಿಮಾ ತಾರೆಯರು ಅಂದ್ರೆ ಹಾಗೇನೇ. ಒಂದೆರೆಡು ಹಿಟ್ ಸಿನಿಮಾಗಳನ್ನು ನೀಡಿದ್ರಂತೂ ಮುಗೀತು ಕಥೆ. ಅವರ ಡಿಮ್ಯಾಂಡ್ ಕೂಡ ಹೆಚ್ಚಾಗುತ್ತೆ. ನಟಿ ಇಲಿಯಾನಾ ಡಿಸೋಜಾ ಕೂಡ ಅದೇ ಸರದಿಗೆ ಸೇರಿದ್ದಾರೆ. ಇನ್ಮೇಲೆ ಇಲಿಯಾನಾ ಅವರನ್ನು ತಮ್ಮ ಸಿನಿಮಾಗೆ ಕರೆಯಬೇಕು ಅಂತಾ ಪ್ಲಾನ್ ಮಾಡಿಕೊಂಡಿರುವ ನಿರ್ಮಾಪಕರು ಸ್ಪಲ್ಪ ಜೇಬು ಗಟ್ಟಿ ಮಾಡಿಕೊಳ್ಳೋದು ಸೂಕ್ತ.
ಯಾಕಂದ್ರೆ  ರಾಮ್ ಚರಣ್ ತೇಜಾ ಅಭಿನಯಿಸುತ್ತಿರಕುವ ಬ್ರೂಸ್ ಲೀ ತೆಲುಗು ಸಿನಿಮಾದಲ್ಲಿ ನಟಿಸಲು ಇಲಿಯಾನಾ ಬರೋಬ್ಬರಿ ಒಂದೂವರೆ ಕೋಟಿ ಡಿಮ್ಯಾಂಡ್ ಮಾಡಿದ್ದಾರಂತೆ. ಹಾಗಂತ ಇಲಿಯಾನಾ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿಲ್ಲ. ಸಿನಿಮಾದಲ್ಲಿನ ಕೇವಲ ಐಟಂ ಸಾಂಗ್ ಒಂದಕ್ಕೆ ಹೆಜ್ಜೆ ಹಾಕಲು ಇಲಿಯಾನಾ ಇಷ್ಟು ಹಣದ ಬೇಡಿಕೆಯಿಟ್ಟಿದ್ದಾರೆ.
 
ಬ್ರೂಸ್ ಲೀ ಸಿನಿಮಾ ಈಗಾಗಲೇ ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಚಿತ್ರವನ್ನು ಶ್ರೀನು ವೈಟ್ಲಾ ನಿರ್ದೇಶನ ಮಾಡುತ್ತಿದ್ದಾರೆ. ದನಯ್ಯ ಅನ್ನುವವರು ನಿರ್ಮಿಸುತ್ತಿದ್ದಾರೆ. ಇಲ್ಲಿ ರಾಮ್ ಚರಣ್ ತೇಜಾಗೆ ನಾಯಕಿಯಾಗಿ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ.  ಅಕ್ಟೋಬರ್ ತಿಂಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

Share this Story:

Follow Webdunia kannada