Select Your Language

Notifications

webdunia
webdunia
webdunia
webdunia

ಐಶ್ವರ್ಯಗೆ ಧನುಷ್ ಜೊತೆ ಕೆಲಸ ಮಾಡುವುದು ಹೆಚ್ಚು ಖುಷಿ ಕೊಡುತ್ತದೆಯಂತೆ...!

ಐಶ್ವರ್ಯಗೆ ಧನುಷ್ ಜೊತೆ ಕೆಲಸ ಮಾಡುವುದು ಹೆಚ್ಚು ಖುಷಿ ಕೊಡುತ್ತದೆಯಂತೆ...!
jayashree , ಶನಿವಾರ, 20 ಡಿಸೆಂಬರ್ 2014 (14:55 IST)
ಸೂಪರ್ ಸ್ಟಾರ್ ರಜನಿಕಾಂತ್   ಅವರ ಹಿರಿಯ ಮಗಳು ಐಶ್ವರ್ಯ ತನ್ನ ಮೊದಲ ಚಿತ್ರ 3  ನ್ನು ನಿರ್ದೇಶಿಸಿದಾಗ ಪಡೆದ  ಖುಷಿಗಿಂತ ಹೊಸ ಚಿತ್ರದ ನಿರ್ದೇಶನದಿಂದ ಹೊಂದಿದ್ದಾರಂತೆ. ಅದಕ್ಕೆ ಕಾರಣ ತಮ್ಮ ಪತಿ ಧನುಷ್ ಜೊತೆ ಕೆಲಸ ಮಾಡುತ್ತಿರುವುದು ಆಗಿದೆ. 
ಐಶ್ ನಿರ್ದೇಶನದ ಮೊದಲ ಚಿತ್ರದಲ್ಲಿ ಧನುಷ್ ಜೊತೆಯಾಗಿದ್ದಳು ಶ್ರುತಿ ಹಾಸನ್. ಆ ಚಿತ್ರ ಹೇಳಿಕೊಳ್ಳುವಷ್ಟು ಯಶಸ್ಸು ಪಡೆಯದೇ ಇದ್ದರು ಸಹಿತ ಸಂಗೀತ ನಿರ್ದೇಶಕ ಅನಿರುದ್ಧ್ ಬೆಳಕಿಗೆ ಬಂದರು. ಅವರ ರಚನೆಯ ವೈ ದಿಸ್ ಕೊಲವರಿ ಡಿ ಹಾಡು ತುಂಬಾ ಜನಪ್ರಿಯತೆ ಗಳಿಸಿತ್ತು. 
 
ಈಗ ಐಶ್ವರ್ಯ ಮತ್ತು ಧನುಷ್ ಮತ್ತೊಂದು ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೈ ರಾಜ್ ವೈ ಆ ಚಿತ್ರದ ಹೆಸರು. ಆ ಚಿತ್ರದಲ್ಲಿ ಯುವ ನಟ ಗೌತಂ ಕಾರ್ತಿಕ್  ಮತ್ತು ಪ್ರಿಯಾ ಆನಂದ್ ಈ ಚಿತ್ರದ ಹೀರೋ ಹೀರೋಯಿನ್ ಗಳಾಗಿದ್ದಾರೆ. ಯುವನ್ ಕಲ್ಯಾಣ್ ಅವರ ಸಂಗೀತ ನಿರ್ದೇಶನ ಹೊಂದಿರುವ ಆ ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ. 
 
ಈ ಚಿತ್ರದ ಪ್ರಮೋಶನ್ ಸಮಯದಲ್ಲಿ ಮಾತನಾಡಿದ  ನಿರ್ದೇಶಕಿ ಐಶ್ವರ್ಯ ಧನುಷ್ ತಮ್ಮ ಮೊದಲ ಚಿತ್ರದ ನಿರ್ದೇಶನದಲ್ಲಿ ಹೆಚ್ಚಿನ ಶ್ರದ್ಧೆ ತೋರಿಸಿರಲಿಲ್ಲವಂತೆ. ಆದರೆ ಈಗ ನಿರ್ದೇಶನ ಮಾಡಿರುವ ಹೊಸ ಚಿತ್ರದ ಬಗ್ಗೆ ಹೆಚ್ಚು ಗಮನ ನೀಡಿದ್ದಾರಂತೆ.  ತನ್ನ ಪತಿ ಸದಾ ಬ್ಯುಸಿಯಾಗಿದ್ದರು ಸಹಿತ ಆಕೆ ತನ್ನ ಹೊಸ ಕಥೆಯನ್ನು ಅವರ ಪತಿ ಮುಂದೆ ಮುಂದೆ ಹೇಳಿದಾಗ ಅವರು ಮಾರ್ಗದರ್ಶನ ಮಾಡಿದರು ಎಂದು ಹೇಳಿದ್ದಾರೆ ಐಶ್ವರ್ಯ. ತನಗೆ ಆತ ತುಂಬಾ   ಸಹಾಯ ಮಾಡಿದ್ದು, ರಾಜ ವೈ ರಾಜ್ ಚಿತ್ರದಲ್ಲಿ ಅತಿಥಿ ಪಾತ್ರಧಾರಿಯಾಗಿದ್ದಾರೆ ಎನ್ನುವುದನ್ನು ಸಹಿತ ತಿಳಿಸಿದ್ದಾರೆ. 

Share this Story:

Follow Webdunia kannada