Select Your Language

Notifications

webdunia
webdunia
webdunia
webdunia

ತುಂಬಾ ದಿನ ಕಾಯೋ ತಾಳ್ಮೆ ನನಗಿಲ್ಲ: ಕೃತಿ ಸನೋನ್

ತುಂಬಾ ದಿನ ಕಾಯೋ ತಾಳ್ಮೆ ನನಗಿಲ್ಲ: ಕೃತಿ ಸನೋನ್
, ಸೋಮವಾರ, 3 ಆಗಸ್ಟ್ 2015 (10:39 IST)
ಶಾರುಖ್ ಹಾಗೂ ಕಾಜಲ್ ಅಭಿನಯಿಸುತ್ತಿರುವ ದಿಲ್ ವಾಲೇ ಸಿನಿಮಾದಲ್ಲಿ ನಟಿ ಕೃತಿ ಸನೋನ್ ಅಭಿನಯಿಸುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದ್ರೀಗ ಕೃತಿ ಸಿನಿಮಾದಲ್ಲಿ ತಾನು ಅಭಿನಯಿಸಲು ಕಾತರಳಾಗಿದ್ದೇನೆ ಅನ್ನೋದನ್ನು ಹೇಳಿದ್ದಾರೆ.
ಅಂದ್ಹಾಗೆ ಕೃತಿ ಶಾರುಖ್ ಹಾಗೂ ಕಾಜಲ್ ಜೊತೆ ಶೂಟಿಂಗ್ ಯಾವಾಗ ಆರಂಭವಾಗುತ್ತೆ ಅಂತಾ ಕಾದು ಕುಳಿತಿದ್ದಾರಂತೆ.  ಅಲ್ಲದೇ ಆ ಕ್ಷಣ ಯಾವಾಗ ಬರುತ್ತೆ ಅಂತಾ ದಿನ ಲೆಕ್ಕ ಹಾಕುತ್ತಿದ್ದಾರಂತೆ. ಇನ್ನು ಸಿನಿಮಾದ ಶೂಟಿಂಗ್ ಬಲ್ಗೇರಿಯಾದಲ್ಲಿ ನಡೆದಿದ್ದು, ಸಿನಿಮಾದಲ್ಲಿ ವರುಣ್ ಧವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈಗಾಗಲೇ ಶಾರುಖ್ ಹಾಗೂ ಕಾಜಲ್ ಅವರ ಪಾತ್ರದ ಶೂಟಿಂಗ್ ಸುಮಾರಾಗಿ ಮುಕ್ತಾಯವಾಗಿದೆಯಂತೆ.
 
ಇನ್ನು ಇತ್ತೀಚೆಗೆ ಸಿನಿಮಾದ ಹಾಡೊಂದರ ಚಿತ್ರೀಕರಣಕ್ಕಾಗಿ ಕೃತಿ ಹಾಗೂ ವರುಣ್ ಬಲ್ಗೇರಿಯಾಕ್ಕೆ ತೆರಳಿದ್ದರಂತೆ. ಆದ್ರೆ ಅಷ್ಟರಲ್ಲಿ ಶಾರುಖ್ ಹಾಗೂ ಕಾಜಲ್ ತಮ್ಮ ಭಾಗದ ಶೂಟಿಂಗ್ ಮುಗಿಸಿ ವಾಪಾಸ್ಸಾಗಿದ್ದರಂತೆ ಹಾಗಾಗಿ ಅವರನ್ನು ಭೇಟಿಯಾಗೋ ಅವಕಾಶ ಕೃತಿಗೆ ಮಿಸ್ ಆಯಿತಂತೆ. ಹಾಗಾಗಿ ಮತ್ತೆ ಅವರನ್ನು ಭೇಟಿ ಮಾಡೋ ಅವಕಾಶ ಯಾವಾಗ ಬರುತ್ತೆ ಅಂತಾ ಕೃತಿ ಲೆಕ್ಕಾಚಾರ ಹಾಕುತ್ತಿದ್ದಾರಂತೆ.

Share this Story:

Follow Webdunia kannada