Select Your Language

Notifications

webdunia
webdunia
webdunia
webdunia

ಮೂರು ಕೋಟಿಗಿಂತ ಕಡಿಮೆ ಮುಟ್ಟಲಾರೆ: ನಯನತಾರ

ಮೂರು ಕೋಟಿಗಿಂತ ಕಡಿಮೆ ಮುಟ್ಟಲಾರೆ: ನಯನತಾರ
, ಸೋಮವಾರ, 23 ಮಾರ್ಚ್ 2015 (10:23 IST)
ಸೂಪರೋ ರಂಗಾ ಎಂದು ಉಪೇಂದ್ರ ಅವರನ್ನು ಆಕರ್ಷಿಸುತ್ತಾ ಕನ್ನಡಿಗರ ಮನಗೆದ್ದ ನಟಿ ನಯನತಾರ. ಈಕೆ ಬಗ್ಗೆ ಹೇಳುವುದಾದರೆ ತನ್ನ ನಟನೆಯ, ರೂಪ, ವಿವಾದ ಹೀಗೆ ಎಲ್ಲ ಸಂಗತಿಗಳಿಂದಲೂ ಸದಾ ಚರ್ಚೆಯ ಕೇಂದ್ರ ಬಿಂದುವಾಗಿದ್ದಾಳೆ. 
ಈ ಕೇರಳ ಕುಟ್ಟಿ ಎಂದಿಗೂ ತನ್ನ  ತಾರ ಬದುಕು ಮತ್ತು ವೈಯಕ್ತಿಕ ಬದುಕನ್ನು ಒಂದು ಮಾಡಿಲ್ಲ. ನಟರಾದ ಪ್ರಭುದೇವ ಮತ್ತು ಶಿಂಬು ಅವರ ಜೊತೆಗೆ ಪ್ರೀತಿ ವಿಫ್ಲಾವಾದರೂ ಸಹಿತ ಆಕೆ ನಟನೆಯತ್ತ ಮತ್ತೆ ಆದ್ಯತೆ ನೀಡಿದರೂ ಸಹಿತ ಅಲ್ಲಿ ವಿಫಲವಾಗದೆ ನಂಬರ್ ಒನ್ ಸ್ಥಾನದಲ್ಲಿ ಗಟ್ಟಿಯಾಗಿದ್ದಾಳೆ. ಇವೆಲ್ಲದರ ನಡುವೆ ಸಿನಿಮಾರಂಗದಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಸಂಗತಿ ಎಂದರೆ ನಯನ್ ತೆಗೆದುಕೊಳ್ಳುವ ಸಂಭಾವನೆ. ಈ ಮುದ್ದು ನಟಿ ಎಷ್ಟು ಹಣ ಸಂಭಾವನೆ ಪಡೆಯುತ್ತಾಳೆ ಗೊತ್ತೇ? ಒಂದು ಅಥವಾ ಎರಡಲ್ಲ ಬರೋಬ್ಬರಿ ಮೂರು ಕೋಟಿ ರೂಪಾಯಿಗಳು. ಹಣ ಕೊಡಿ ನಾನು ನಟಿಸಲು ಸಿದ್ಧ ಎನ್ನುವ ಈಕೆಯ ಬೇಡಿಕೆ  ಕೇಳಿ ಚಿತ್ರರಂಗದವರು ವಾರೆವ್ವಾ ನಯನ್ ಎನ್ನುತ್ತಿದ್ದಾರೆ.
 
ವಿಜಯ್, ಸೂರ್ಯ, ವಿಜಯ್ ಸೇತುಪತಿ, ಆದಿ ಸೇರಿದಂತೆ ಆಕೆಯ ಜೊತೆ ಸ್ಟಾರ್ ನಟರು ನಟಿಸಿದ್ದಾರೆ, ನಟಿಸುತ್ತಿದ್ದಾರೆ. ಯಾವ ನಟರಾದರೂ ನನಗೆ ಚಿಂತೆ ಇಲ್ಲ, ಆದರೆ ಹಣದ ವಿಷಯದಲ್ಲಿ ಮಾತ್ರ ನಾ ಸುಮ್ಮನಿರಲ್ಲ ಎನ್ನುವುದು ನಯನತಾರ ಹೇಳಿರುವ ಸಂಗತಿ.   
 
ಕಾಲಿವುಡ್ ಚಿತ್ರಗಳ ವಿಷಯದಲ್ಲಿ ಈ ಪರಿ ದುಡ್ಡು ಪಡೆಯುವ ಈಕೆ ತನ್ನ ಮಾತೃಭಾಷೆ ವಿಷಯದಲ್ಲಿ ಸ್ವಲ್ಪ ಸಡಲಿಕೆ ಹೊಂದಿದ್ದಾಳಂತೆ. ಇತ್ತೀಚಿಗೆ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರ ಜೊತೆ ಭಾಸ್ಕರ್ ದಿ ರಾಸ್ಕಲ್ ಎನ್ನುವ ಚಿತ್ರದಲ್ಲಿ ನಟಿಸಲು ಅತ್ಯಂತ ಕಡಿಮೆ ಮೊತ್ತ ಪಡೆದಿದ್ದಳಂತೆ. 
ಈಗ ಆ ಚಿತ್ರ ತಮಿಳಿನಲ್ಲೂ ರೀಮೇಕ್ ಆಗುತ್ತಿದ್ದು, ಅಲ್ಲೂ ನಯನತಾರ ನಟಿಸುತ್ತಾಳ ಸಧ್ಯಕ್ಕೆ ನಮಗೆ ಅದರ ಬಗ್ಗೆ ಅರಿವಿಲ್ಲ.

Share this Story:

Follow Webdunia kannada