Select Your Language

Notifications

webdunia
webdunia
webdunia
webdunia

ನಾನಂತೂ ಬಿಗ್ ಬಾಸ್ ಮನೆಗೆ ಹೋಗಲ್ಲ- ಹುಚ್ಚ ವೆಂಕಟ್

ನಾನಂತೂ ಬಿಗ್ ಬಾಸ್ ಮನೆಗೆ ಹೋಗಲ್ಲ- ಹುಚ್ಚ ವೆಂಕಟ್
, ಮಂಗಳವಾರ, 17 ನವೆಂಬರ್ 2015 (10:48 IST)
ಬಿಗ್ ಬಾಸ್ ಮನೆಯಿಂದ ಹುಚ್ಚ ವೆಂಕಟ್ ಹೊರ ಬಿದ್ದಿದ್ದೆ ತಡ ವೆಂಕಟ್ ಅವರನ್ನು ಮತ್ತೆ ಮನೆಗೆ ಕರೆ ತರಬೇಕು ಅಂತಾ ಅಭಿಮಾನಿಗಳ  ಕೂಗು ಜೋರಾಗುತ್ತಲೇ ಇದೆ. ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ರವ್ ಗುಂಡ್ಕಲ್ ಅವರು ಈಗಾಗಲೇ ವೆಂಕಟ್ ಅವರನ್ನು ಮನೆಗೆ ಕರೆ ತರೋದಿಲ್ಲ ಅಂತಾ ಸ್ಪಷ್ಟನೆ ನೀಡಿದ್ರೂ, ಅವರು ವಾಪಸ್ ಬರ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿದ್ದವು. ಆದ್ರೆ ಇದೀಗ ಈ ಬಗ್ಗೆ ಹುಚ್ಚ ವೆಂಕಟ್ ಅವರೇ ಬಾಯ್ಬಿಟ್ಟಿದ್ದಾರೆ.
 
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹುಚ್ಚ ವೆಂಕಟ್ ಯಾವುದೇ ಕಾರಣಕ್ಕೂ ನಾನು ಆ ಮನೆಗೆ ಹೋಗೋದಿಲ್ಲ. ಅಲ್ಲಿ ನಾನು ನಾನೀಗಿರೋದಕ್ಕೆ ಅವಕಾಶ ಇರೋದಿಲ್ಲ. ನಾಟಕ ಮಾಡಿಕೊಂಡು ಅಲ್ಲಿ ಇರಲು ನನಗೆ ಬರೋದಿಲ್ಲ. ಹಾಗಾಗಿ ನಾನು ಯಾವುದೇ ಕಾರಣಕ್ಕೆ ಬಿಗ್ ಬಾಸ್ ಮನೆಗೆ ಹೋಗೋದಿಲ್ಲ ಅಂತಾ ಹುಚ್ಚ ವೆಂಕಟ್ ಹೇಳಿದ್ದಾರೆ. ಆ ಮೂಲಕ ಹುಚ್ಚ ವೆಂಕಟ್ ಮತ್ತೆ ಮನೆಗೆ ಬರ್ತಾರೋ ಅಂತಾ  ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳ ಆಸೆಗೆ ವೆಂಕಟ್ ತಣ್ಣೀರೆರಚಿದ್ದಾರೆ.
 
ಇನ್ನು ವೆಂಕಟ್ ಮನೆಯಿಂದ ಹೊರ ಬಿದ್ದಿದ್ದರಿಂದ ಬಿಗ್ ಬಾಸ್ ಮನೆಗೆ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಜೊತೆಗೆ ಹುಚ್ಚ ವೆಂಕಟ್ ಇಲ್ಲದ ಮೇಲೆ ನಾವಿನ್ನು ಈ ಕಾರ್ಯಕ್ರಮವನ್ನೇ ನೋಡಲ್ಲ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಜೊತೆಗೆ ಮನೆಯಿಂದ ಹೊರ ಬಂದ ವೆಂಕಟ್ ಮುಂದೇನ್ ಮಾಡ್ತಾರೆ ಅನ್ನೋ ಪ್ರಶ್ನೆಗಳು ಕೂಡ ಅಭಿಮಾನಿಗಳನ್ನು ಕಾಡುತ್ತಿದೆ.

Share this Story:

Follow Webdunia kannada