Webdunia - Bharat's app for daily news and videos

Install App

ಅಭಿಮಾನಿಗಳೇ ಎಲ್ಲೂ ಹೋಗಲ್ಲ ನಿಮ್ಮ ಬಿಟ್ಟು ಎಲ್ಲೂ ಹೋಗಲ್ಲ ಎಂದ ಜೆಕೆ

Webdunia
ಶನಿವಾರ, 25 ಜುಲೈ 2015 (10:08 IST)
ಒಬ್ಬ ವ್ಯಕ್ತಿ ತನ್ನ ಬಗ್ಗೆ ತಾನು ತಿಳಿಯಲು ಹಲವಾರು ಸಂಗತಿಗಳು ಕಾರಣವಾಗುತ್ತದೆ. ಹಾಗೇ ಆಗಿದೆ ಕನ್ನಡ ಕಿರಿ ಹಾಗೂ ಹಿರಿತೆರೆಯ ನಟ ಜೆ ಕಾರ್ತಿಕ್ ಅವರ ವಿಷಯದಲ್ಲೂ ಸಹಿತ. ವರದನಾಯಕ,  ಈಗ ,ಕೆಂಪೇಗೌಡ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಜಯರಾಂ ಕಾರ್ತಿಕ್ ಅವರನ್ನು ಪ್ರೀತಿಯಿಂದ ಕರೆಯುವುದು ಜೆಕೆ. ಅವರ  ಅಶ್ವಿನಿ ನಕ್ಷತ್ರ ಎನ್ನುವ ಹೆಸರಿನ ಧಾರವಾಹಿಯಲ್ಲಿ ಸಹಿತ ಹೆಸರು ಗಳಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅಶ್ವಿನಿ ನಕ್ಷತ್ರ  ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲೇ ಅವರಿಗೆ  ಒಳ್ಳೊಳ್ಳೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಅವರ ಪ್ರತಿಭೆಗೆ ದೊರತ ಗೌರವವಾಗಿದೆ ಎಂದೇ ಹೇಳಬಹುದಾಗಿದೆ. 
ಅಂತಹ ಜೆಕೆ ಇದ್ದಕ್ಕಿದ್ದ ಹಾಗೆ ತಾವು ವಿದೇಶವಾಸಿ ಆಗುತ್ತಾರೆ ಎಂದು ಸುದ್ದಿ ಹರಡಿದರೆ ಅವರ ಅಭಿಮಾನಿಗಳ ಕಥೆ ಏನಾಗ ಬೇಡ ? ಹಾಗೆ ಆಯ್ತು, ಏಕೆಂದರೆ ಜೆಕೆ ಅವರು ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಫೋಟೋ ಒಂದನ್ನು ಹಾಕಿ ಇಲ್ಲಿಗೆ ಮುಕ್ತಾಯವಾಯಿತು ಎಂದು ಹೇಳಿದರು. ಅದನ್ನು ನೋಡಿದ ಅಭಿಮಾನಿಗಳು  ಅವರ ತಾರ ಬದುಕು ಇಲ್ಲಿಗೆ ಮುಕ್ತಯವಾಯ್ತು, ಅವರು ವಿದೇಶಕ್ಕೆ ಹೋಗಿ ನೆಲೆಸುತ್ತಾರೆ ಎಂದು ಭಾವಿಸಿದರು. ತಮ್ಮ ನೆಚ್ಚಿನ ನಟ ವಿದೇಶವಾಸಿ ಆಗುವುದು ಬೇಡವೆಂದು ಅವರ ಮನೆಯ ಮುಂದೆ ಹೋಗಿ ಹಾಗೆ ಮಾಡದಿರಿ ಎನ್ನುವ ಕಳಕಳಿಯಿಂದ ಕೇಳಿದರು.ಇದನ್ನು ಕಂಡಾಗ ಭಾವಕರಾಗುವ ಸ್ಥಿತಿ ಜೆಕೆ ಅವರದ್ದು. ತಾವು ಹಾಕಿದ ಚಿತ್ರವನ್ನು ತಪ್ಪಾಗಿ ಅರ್ಥೈಸಿದ್ದು ತಿಳಿದ ಅವರು ತಾವು ಎಲ್ಲಿಗೋ ಹೋಗಲ್ಲ ಇಲ್ಲೇ ಇರುತ್ತೇನೆ ಎಂದು ಭಾವುಕರಾಗಿ ಹೇಳಿದ್ದಾರೆ. ಈಗ ಅವರ ದ್ವಿಭಾಷ ಚಿತ್ರ ಚಂದ್ರಿಕಾ ಹಾಡುಗಳು ಬಿಡುಗಡೆ ಆಗಿದೆ. ಜೆಕೆ ಜೊತೆ ಕಾಮನಾ ಜೇಟ್ಮಲಾನಿ ಮತ್ತು ಶ್ರೀಮುಖಿ ನಟಿಸಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments