Webdunia - Bharat's app for daily news and videos

Install App

ನಮ್ಮ ಅಪ್ಪನನಂತೆ ನಾನು ಇರಲ್ಲ: ಅಲಿಯಾ

Webdunia
ಶುಕ್ರವಾರ, 3 ಜುಲೈ 2015 (10:58 IST)
ಅಲಿಯ ಭಟ್ ಸಾಮಾನ್ಯ ಸದಾ ಗಾಸಿಪ್ ನ ಮೂಲಕ ಗಮನ ಸೆಳೆಯುವ ನಟಿ. ಆಕೆಯ ಬಗ್ಗೆ ಹೇಳುವುದಾದರೆ ಸದಾ ತನ್ನ ಸಹನಟರ ಜೊತೆಯಲ್ಲಿ ಹೆಸರು ಜೋಡಿಸಿ ಮಾಧ್ಯಮಗಳು ಆಕೆಯ ಸುತ್ತ ಸುತ್ತುವಂತೆ ಮಾಡುವ ನಟಿ. ಆಕೆ ಇವೆಲ್ಲ ಪ್ರಚಾರಕ್ಕಾಗಿ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಉದ್ಭವ ಆಗೋದು ಸಹಜ. ಅದಕ್ಕೆ ಆಕೆ ಕಡೆಯಿಂದ ಬರುವ ಉತ್ತರ ಹೌದು. 
ಸಾಮಾನ್ಯವಾಗಿ ಆಕೆ  ಜೊತೆ  ನಟಿಸಿದ ವರುಣ್ ಧವನ್, ಸಿದ್ಧಾರ್ಥ್ ಮಲ್ಹೋತ್ರ ಅಥವಾ ಅರ್ಜುನ್ ಕಪೂರ್ ಅವರ  ಒಡನಾಟವು ಸದಾ ಸುದ್ದಿಯಲ್ಲಿದ್ದರೂ ಸಹಿತ ಆಕೆ ಆ ಸಂಗತಿಯ ಬಗ್ಗೆ ಯಾವುದೇ ರೀತಿಯ ಸ್ಪಷ್ಟನೆ ನೀಡುವುದಿಲ್ಲ. ಅದೂ ಸಹ ಪಬ್ಲಿಸಿಟಿಯ ಗಿಮಿಕ್ .ಇದು ತನ್ನ ವೈಯಕ್ತಿಕ ಬದುಕನ್ನು ಸುರಕ್ಷಿತವಾಗಿಟ್ಟುಕೊಳ್ಳುವ ವಿಧಾನ ಎನ್ನುವ ಮಾತನ್ನು ಹೇಳಿದ್ದಾರೆ ಅಲಿಯ. ಅಲ್ಲದೆ  ಈಗ ವಾತಾವರಣ ಹೇಗಿದೆ ಎಂದರೆ ಮಾಧ್ಯಮಗಳ ಜೊತೆ ಆಟ ಆಡಿದಾಗಲಷ್ಟೇ ಬೆಲೆ. ಆಗ ಜನರು ಹೆಚ್ಚು ನಮ್ಮ ಬಗ್ಗೆ ಮಾತನಾಡುತ್ತಾರೆ. ನಮ್ಮ ಬಗ್ಗೆ  ಕುತೂಹಲ ಹೊಂದುತ್ತಾರೆ. ನಾನು ಅವರ ಕಲ್ಪನೆಗಳಿಗೆ ಯಾವುದೇ ಉತ್ತರ ಹೇಳುವುದಿಲ್ಲ, ಅವರು ತಾವು ಬಯಸಿದಂತೆ ಆಲೋಚಿಸಲಿ ಎಂದು ಮೌನವಾಗಿ ಬಿಡ್ತೀನಿ  ಎನ್ನುವ ಮಾತನ್ನು ಹೇಳಿದ್ದಾರೆ. 
 
ನಾನು ಜನರ ಪ್ರಶ್ನೆಗೆ ಹೌದು ಅಥವಾ ಇಲ್ಲ ಎನ್ನುವ ಉತ್ತರ ನೀಡುವುದಿಲ್ಲ ಎಂದು ಈ ಸಮಯದಲ್ಲಿ ಹೇಳಿದ್ದಾರೆ. ನನಗೆ ದೊರೆಯುವ ಪ್ರತಿಯೊಂದು ಅವಕಾಶದ ಸಮಯದಲ್ಲೂ ನಮ್ಮ ಅಪ್ಪ ಕೆಲವೊಂದು ಬುದ್ಧಿ ಮಾತು ಹೇಳುತ್ತಾರೆ. ನಾನು ನಮ್ಮ ಅಪ್ಪನಂತೆ ಅಲ್ಲ. ಅವರಂತೆ ಬದುಕಲ್ಲಿ ಅತ್ಯುತ್ತಮ ಅಂಶಗಳಿಗೆ ಆದ್ಯತೆ ನೀಡಲ್ಲ ಹಾಗೂ ನಮ್ಮ ಅಪ್ಪನಂತೆ ಉತ್ತಮ ವೈಯಕ್ತಿಕ ಬದುಕನ್ನು ಜನರು ನಿರೀಕ್ಷಿಸುವುದು ಸರಿಯಲ್ಲ ಎಂದಿದ್ದಾರೆ ಮಹೇಶ್ ಭಟ್ ಪುತ್ರಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments