Select Your Language

Notifications

webdunia
webdunia
webdunia
webdunia

ದಿಲ್ವಾಲೆಯಲ್ಲಿ ನಾನು ನಟಿಸಲ್ಲ.. ಸುಳ್ಳು ಸುದ್ದಿಯನ್ನು ನಂಬದಿರಿ : ಅಜಯ್ ದೇವಗನ್

ದಿಲ್ವಾಲೆಯಲ್ಲಿ ನಾನು ನಟಿಸಲ್ಲ.. ಸುಳ್ಳು ಸುದ್ದಿಯನ್ನು ನಂಬದಿರಿ : ಅಜಯ್ ದೇವಗನ್
, ಬುಧವಾರ, 29 ಜುಲೈ 2015 (10:25 IST)
ಶಾರೂಖ್ ಖಾನ್ ಮತ್ತು ಕಾಜೋಲ್ ಅಭಿನಯದ ರೋಹಿತ್ ಶೆಟ್ಟಿ ಅವರ ನಿರ್ದೇಶನದ ಚಿತ್ರ ದಿಲ್ವಾಲೆ. ಈ ಚಿತ್ರದ ಬಗ್ಗೆ ಸಾಕಷ್ಟು ಗಾಸಿಪ್ ಗಳು ಹರಡಿದ್ದರೂ ಸಹಿತ ಅತಿಯಾದ ಪ್ರಮಾಣದಲ್ಲಿ ಬಾಲಿವುಡ್ ಮಂದಿಯನ್ನು ಕಾಡಿದ್ದು ಮಾತ್ರ ಈಗ ನಾವು ಹೇಳುತ್ತಿರುವ ಸಂಗತಿ ಆಗಿದೆ.
ಇತ್ತೀಚಿಗೆ ಬಲ್ಗೇರಿಯಾದಲ್ಲಿ ಅಜಯ್ ದೇವಗನ್ ಹಾಗೂ ಶಾರುಖ್ ಅವರು ಒಟ್ಟಿಗೆ ಒಂದೇ ಟೇಬಲ್ ಹಂಚಿಕೊಂಡಿದ್ದರು. ಈ ಬಗ್ಗೆ ಅನೇಕ ಸುದ್ದಿಗಳು ಹರಡಿತ್ತು. ಶಾರುಖ್ ಮತ್ತು ಅಜಯ್ ಜಗಳ ಮರೆತು ಒಂದಾಗಿದ್ದಾರೆ ಅದೂ ಇದೂ. ಆ ಸಮಯದಲ್ಲಿ ಅಜಯ್ ಅವರು ತಾವು ಶಾರುಖ್ ಸಹೋದ್ಯೋಗಿಗಳು ಸ್ನೇಹಿತರಲ್ಲ ಎಂದು ಹೇಳಿದ್ದರು. ಆದರೆ ಅದರ ಬೆನ್ನಲ್ಲೇ ದಿಲ್ವಾಲೆ ಚಿತ್ರದಲ್ಲಿ ಅಜಯ್ ಅವರು ನಟಿಸುತ್ತಿದ್ದಾರೆ ಎನ್ನುವ  ಸುದ್ದಿ ಸಹ ಹೆಚ್ಚು ಪ್ರಾಮುಖ್ಯತೆ ಪಡೆದಿತ್ತು. ಅದರ ಬಗ್ಗೆಯೂ ಅಲ್ಲಗಳೆಯುತ್ತಾ ಹಾಗೇನೂ ಇಲ್ಲ ಎಂದಿರುವ ಅಜಯ್ ಪ್ರಸ್ತುತ ತಾವು ಶಿವಾಯ್ ಚಿತ್ರದ   ಬಗ್ಗೆ ಹೆಚ್ಚು ಗಮನ ನೀಡಿರುವುದಾಗಿ ಹೇಳಿದ್ದಾರೆ. ಹೋಂ ಬ್ಯಾನರ್ ನಲ್ಲಿ ಸಿದ್ಧವಾಗುತ್ತಿರುವ ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ ಈತಾರೆ. 
 
ನಾನು ಶಿವಾಯ್ ಲೋಕೇಶನ್  ನೋಡಲೆಂದು  ಬಲ್ಗೇರಿಯಾಗೆ ಹೋಗಿದ್ದು. ಅಲ್ಲಿ ಶಾರುಖ್ ಸಿನಿಮಾ ತಂಡ ಕಂಡುಮಾತನಾಡಿಸಲು ಹೋಗಿದ್ದೆ ವಿನಃ ಮತ್ಯಾವುದೇ ಉದ್ದೇಶವಿಲ್ಲ. ತನಗೆ ಈಗ ಸಂಪೂರ್ಣವಾಗಿ ಶಿವಾಯ್ ಕಡೆಗೆ ಗಮನ ಎಂದಿದ್ದಾರೆ ನಟ ಅಜಯ್. ಪ್ರಸ್ತುತ ಮಲೆಯಾಳಂ ಮೂಲದ ಚಿತ್ರ ದೃಶ್ಯ ನಲ್ಲಿ ನಟಿಸಿದ್ದಾರೆ ಅಜಯ್. ಶ್ರೀಯಾ ಶರಣ್ ಹಾಗೂ ತಬು ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸಹಿತ ಪ್ರದರ್ಶಿತವಾದ ಈ ಚಿತ್ರ ಯಶಸ್ವಿ ಆಗಿತ್ತು. ಈಗ ಹಿಂದಿ ಕಡೆಗೆ ಕಾಲಿಟ್ಟಿದೆ. ಅದು ಅಲ್ಲಿಯೂ ಗೆಲ್ಲುತ್ತಾ ಇಲ್ಲವಾ ಎನ್ನುವುದು ಇನ್ನೆರಡು ದಿನಗಳಲ್ಲಿ ನಿರ್ಧಾರವಾಗುತ್ತದೆ. 

Share this Story:

Follow Webdunia kannada