Select Your Language

Notifications

webdunia
webdunia
webdunia
webdunia

ಹಣದ ಆಸೆಗಾಗಿ ಜಾಹೀರಾತುಗಳಲ್ಲಿ ನಟಿಸಲ್ಲ: ಕರೀನಾ

ಹಣದ ಆಸೆಗಾಗಿ ಜಾಹೀರಾತುಗಳಲ್ಲಿ ನಟಿಸಲ್ಲ: ಕರೀನಾ
, ಶುಕ್ರವಾರ, 27 ಮಾರ್ಚ್ 2015 (10:05 IST)
ಜಾಹೀರಾತುಗಳಲ್ಲಿ ಕಲಾವಿದರು ಅಭಿನಯಿಸುವುದು ಸರ್ವೇ ಸಾಧಾರಣ ಸಂಗತಿ. ಕೆಲವರು ದುಡ್ಡಿಗಾಗಿ ಎಂತಹ ಜಾಹೀರಾತಿನಲ್ಲಿ ಬೇಕಾದ್ರೂ ಸಹಿತ ನಟಿಸಲು ಸಿದ್ಧ. ಆದರೆ ಕರೀನಾ ಕಪೂರ್ ಇದಕ್ಕೆ ವಿರುದ್ಧವಾದ ಮನೋಭಾವ ಹೊಂದಿದ್ದಾಳೆ.  
ಸಮಾಜಕ್ಕೆ ಒಳಿತನ್ನು ಮಾಡದೆ ಇದ್ದರೂ ತೊಂದರೆ ಇಲ್ಲ, ಆದರೆ ಹಾಳು ಮಾಡಬಾರದು ಎನ್ನುವ ಅಂಶಕ್ಕೆ ತಾನು ಹೆಚ್ಚಿನ ಆದ್ಯತೆ ನೀಡುತ್ತೇನೆ ಎನ್ನುವ ಮಾತನ್ನು ಹೇಳಿದ್ದಾಳೆ ಈ ಭಾಮೆ. ನಾನು ಈವರೆಗೂ ಪ್ರಚಾರ ಮಾಡಿರುವ ಹ್ಯಾಂಡ್ ಬ್ಯಾಗ್, ತಂಪು ಪಾನೀಯಗಳು, ಸೌಂದರ್ಯ ಸಾಧನಗಳು ಸಮಾಜಕ್ಕೆ ಯಾವುದೇ ರೀತಿಯಲ್ಲೂ ದುಷ್ಪರಿಣಾಮ ಬೀರಿಲ್ಲ. 
 
ಆದರೆ ನಾನು ಈವರೆಗೂ ಧೂಮಪಾನ, ಮದ್ಯಪಾನ, ಮಾಂಸಾಹಾರದಂತಹ ಜಾಹೀರಾತುಗಳಲ್ಲಿ ನಟಿಸಿಲ್ಲ. ಶಾಕಾಹಾರವು ಮಾಂಸಾಹಾರಕ್ಕಿಂತ ಒಳ್ಳೆಯದು. ಸಮಾಜದ ಬಗ್ಗೆ ನನಗೆ  ಹೊಣೆ ಇದೆ. ಎಷ್ಟೇ ಕೋಟಿಗಳನ್ನು ನೀಡಿದರು ಸಹಿತ ನಾನು ಇಂತಹ ಜಾಹೀರಾತುಗಳಲ್ಲಿ ಅಭಿನಯಿಸುವುದಿಲ್ಲ  ಎಂದು ಹೇಳಿದ್ದಾಳೆ. ಸಿನಿಮಾದವರ ಬಗ್ಗೆ ಬೇರೆಯದಾಗಿ ಕಂಡಿರುವವರಿಗೆ ಅವರ ಈ ರೀತಿಯ ಸಂಗತಿಗಳು ಗೊತ್ತಾಗಬೇಕು. ಆ ಕೆಲಸ ನಾವೇ ಮಾಡ್ತಿವಿ ಬಿಡಿ! 

Share this Story:

Follow Webdunia kannada