Webdunia - Bharat's app for daily news and videos

Install App

2016ಕ್ಕೆ ಸಪ್ತಪದಿ ತುಳಿಯುವೆ: ಪ್ರಿಯಾಮಣಿ

Webdunia
ಮಂಗಳವಾರ, 28 ಏಪ್ರಿಲ್ 2015 (10:50 IST)
ಪ್ರಿಯಾಮಣಿ ಕಾಲಿವುಡ್ ಚಿತ್ರಗಳ ಮೂಲಕ ಬಣ್ಣ ಹಚ್ಚಿದರೂ ಸಹಿತ ಆಕೆ ಕ್ರಮೇಣ ತೆಲುಗು, ಕನ್ನಡ ಮಲೆಯಾಳಂ ಭಾಷೆಗಳಲ್ಲೂ ಸ್ಥಾನ ಪಡೆದವಳು. ಜೊತೆಗೆ 'ರಾವಣ್' ಚಿತ್ರದಲ್ಲಿ ನಟಿಸಿ ಬಾಲಿವುಡ್‌ನಲ್ಲೂ ಪರಿಚಿತಳಾದಳು. ಪ್ರಸ್ತುತ ರಿಯಾಲಿಟಿ ಶೋಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪ್ರಿಯಾ, ತನ್ನ ಬಾಳ ಸಂಗಾತಿಯನ್ನು ವರಿಸುವ ಯತ್ನದಲ್ಲಿದ್ದಾರೆ. 
ಪ್ರಸ್ತುತ ಪ್ರಿಯಾಮಣಿ ಸಿನಿಮಾಗಳು ಕೈಲಿ ಇಲ್ಲದ ಸಮಯವಾಗಿದ್ದು, ಇದೇ ಕಾರಣದಿಂದ ಆಕೆಯ ಚಿತ್ತ ಈಗ ಮದುವೆಯತ್ತ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ ಎಂಬುದು ಕೆಲವರ ಅಭಿಪ್ರಾಯ. ಆದರೆ ಇತ್ತೀಚೆಗೆ ಆಕೆ ತಿರುಚ್ಚಿಗೆ ಬಂದು ಪತ್ರಕರ್ತರೊಂದಿಗೆ ಮಾತನಾಡಿದ್ದು, ತನಗೆ ಈಗ ಒಂದು ಕನ್ನಡ ಹಾಗೂ ಒಂದು ಮಲೆಯಾಳಂ ಚಿತ್ರ ಕೈಯ್ಯಲ್ಲಿದ್ದು, ಮಲೆಯಾಳಂ ಚಿತ್ರದ ಚಿತ್ರೀಕರಣ  ಬರುವ ಜೂನ್‌ ತಿಂಗಳಿನಲ್ಲಿ ಆರಂಭವಾಗಲಿದೆ ಎಂದಿದ್ದಾಳೆ.  
 
ತಮಿಳಿನಲ್ಲಿ ತಾನು ನಟಿಸದೆ ಇರಲು ಮುಖ್ಯ ಕಾರಣ ಅಲ್ಲಿನ ನಿರ್ಮಾಪಕ, ನಿರ್ದೇಶಕರೇ ಆಗಿದ್ದಾರೆ ಎಂದಿರುವ ಪ್ರಿಯಾ, ಪರುತ್ತಿವೀರನ್ ನಂತಹ ಸಿನಿಮಾಗಳಲ್ಲಿ ನಟಿಸಲು ತನಗೆ ಅವಕಾಶ ಸಿಕ್ಕಿಲ್ಲ ಎಂಬ ಕೊರಗನ್ನೂ ಹೊರ ಹಾಕಿದ್ದಾಳೆ. ಒಳ್ಳೆಯ ಅವಕಾಶಗಳು ದೊರೆತರೆ ತಾನೂ ಖಂಡಿತವಾಗಿಯೂ ತಮಿಳಿನಲ್ಲಿ ನಟಿಸುವುದಾಗಿ ಹೇಳಿದ್ದಾಳೆ. ಅಲ್ಲದೆ ರಾಜಕೀಯದಲ್ಲಿ ಪ್ರವೇಶಿಸುವಂತೆ ತನಗೆ ಆಫರ್ ಬರುತ್ತಿದೆ, ಆದರೆ ತನಗೆ ಅದರತ್ತ ಇಷ್ಟವಿಲ್ಲ ಎಂದೂ ಪ್ರತಿಕ್ರಿಯಿಸಿ ಅಚ್ಚರಿ ಮೂಡಿಸಿದ್ದಾಳೆ. ಇದೇ ವೇಳೆ, ಮುಂದಿನ ವರ್ಷ ತಾನು ಮದುವೆ ಆಗುತ್ತಿದ್ದೇನೆ. ಅದು ಹಿರಿಯರು ನಿರ್ಧರಿಸಿದ ಪ್ರೇಮ ವಿವಾಹವಾಗಿದೆ. ವರ ಯಾರು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಎಂಬ ಸುದ್ದಿಯನ್ನೂ ತಿಳಿಸಿದ್ದಾಳೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments