Select Your Language

Notifications

webdunia
webdunia
webdunia
webdunia

ಅಪ್ಪನ ಪ್ರೊಡಕ್ಷನ್ ಚಿತ್ರದಲ್ಲಿ ನಟಿಸಲ್ಲ: ಆಲಿಯಾ

ಅಪ್ಪನ ಪ್ರೊಡಕ್ಷನ್ ಚಿತ್ರದಲ್ಲಿ ನಟಿಸಲ್ಲ: ಆಲಿಯಾ
, ಸೋಮವಾರ, 6 ಏಪ್ರಿಲ್ 2015 (09:52 IST)
ಬಾಲಿವುಡ್ ಸೂಪರ್ ನಿರ್ದೇಶಕ ಮಹೇಶ್ ಭಟ್. ಅವರ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ ಭಾರತೀಯ ಚಿತ್ರರಂಗದಲ್ಲಿ ಅವರು ಮಾಡಿರುವ ಸಾಧನೆ ಅಪಾರ ಹಾಗೂ ಅಪರೂಪವಾದದ್ದು. ಈ ಮಹಾನ್ ನಿರ್ದೇಶಕರ ಮಗಳು ಆಲಿಯ ಭಟ್ ಅಭಿಜಾತ ಕಲಾವಿದೆ. ತನ್ನ ತಂದೆಯ ನೆರಳಿಲ್ಲದೆ ತಾನೇ ಸ್ವಂತ ಇಮೇಜ್ ಬೆಳೆಸಿಕೊಂಡ ಪ್ರತಿಭಾವಂತೆ ಈಕೆ. 
ಕಳೆದ ವರ್ಷ ಅನೇಕ ಸಿನಿಮಾಗಳಲ್ಲಿ ನಟಿಸಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾಳೆ. ತಾನು ಅಧಿಕ ಸಂಖ್ಯೆಯ ಚಿತ್ರಗಳಲ್ಲಿ ನಟಿಸುವುದಕ್ಕಿಂತ, ಕಡಿಮೆ ಇದ್ದರೂ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಮಾಡಬೇಕು ಎನ್ನುವ ಆಶಯ ಹೊಂದಿದ್ದಾಳೆ. ಅವಕಾಶಗಳು ಸಿಕ್ಕಿವೆ ಎಂದು ಇದ್ದಬದ್ದ ಸಿನಿಮಾಗಳಲ್ಲಿ ನಟಿಸುವುತ್ತಾ ಸಾಗಿದರೆ ತನ್ನ ಅಭಿಮಾನಿಗಳು ಇಷ್ಟಪಡುವುದಿಲ್ಲ ಎನ್ನುವ ಸಂಗತಿಯನ್ನು ಮಾಧ್ಯಮಗಳ ಮುಂದೆ ಹೇಳಿದ್ದಾಳೆ ಈ ಚೆಲುವೆ. 
 
ತನ್ನ ಸಿನಿಮಾಗಳ ರಿಲೀಜ್‌ಗಾಗಿ ಸ್ವಲ್ಪ ಅಂತರ ನೀಡಬೇಕು ಎನ್ನುವ ಅಂಶಕ್ಕೆ ಆಕೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿದ್ದಾಳೆ. ಇನ್ನು ತನ್ನ ತಂದೆ ಮಹೇಶ್ ಭಟ್ ಅವರ ಪ್ರೊಡಕ್ಷನ್‌ನಲ್ಲಿ ತಯಾರಾಗುವ ಚಿತ್ರದಲ್ಲಿ ನಟಿಸುವ ಬಗ್ಗೆ ಸಧ್ಯಕ್ಕೆ ಯೋಚನೆ ಇಲ್ಲ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ.
 
ಇತ್ತೀಚೆಗೆ ನಡೆದ ಫಿಲಿಂ ಫೇರ್ ಅವಾರ್ಡ್‌ಗಳ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಈ ಮುದ್ದು ಮುದ್ದಾದ ಚೆಲುವೆ ತನ್ನ ಆಕರ್ಷಕ ರೂಪಿನಿಂದ ಮಾತ್ರವಲ್ಲದೆ ನಟನೆಯ ಮೂಲಕವೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾಳೆ. ಒಟ್ಟಾರೆ ಈಕೆ ನಿರ್ಧಾರಗಳು ಬಾಲಿವುಡ್ ಸಿನಿರಂಗದಲ್ಲಿ ಶಾಶ್ವತವಾಗಿ ಉತ್ತಮ ಸ್ಥಾನ ಗಳಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.

Share this Story:

Follow Webdunia kannada