Select Your Language

Notifications

webdunia
webdunia
webdunia
webdunia

ಹಣದ ಲೆಕ್ಕಾಚಾರದಲ್ಲಿ ನಾನು ಯಾವಾಗಲೂ ಹಿಂದೆ: ದೀಪಿಕಾ

ಹಣದ ಲೆಕ್ಕಾಚಾರದಲ್ಲಿ ನಾನು ಯಾವಾಗಲೂ ಹಿಂದೆ: ದೀಪಿಕಾ
, ಬುಧವಾರ, 5 ಆಗಸ್ಟ್ 2015 (10:06 IST)
ಸಿನಿಮಾ ತಾರೆಯರು ನಿರ್ಮಾಪಕರಾಗೋದು ಈಗ ಸಾಮಾನ್ಯ. ಕೆಲವರು ತಮಗೆ ಅವಕಾಶಗಳು ಕಡಿಮೆಯಾದಾಗ ನಿರ್ಮಾಣದತ್ತ ಗಮನ ಹರಿಸಿದ್ರೆ ಇನ್ನೂ ಕೆಲವರು ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ನಿರ್ಮಾಣಕ್ಕಿಳಿಯುತ್ತಾರೆ. ಆದ್ರೆ ಬಾಲಿವುಡ್ ನ ಗುಳಿ ಕಂಗಳ ಚೆಲುವೆ ದೀಪಿಕಾಪಡುಕೋಣೆ ಮಾತ್ರ ತಾನು ನಿರ್ಮಾಪಕಿಯಾಗಲ್ಲ ಎಂದಿದ್ದಾರೆ.
ಹೌದು.. ಇತ್ತೀಚೆಗಷ್ಟೇ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಎನ್ ಹೆಚ್ 10 ಅನ್ನೋ ಸಿನಿಮಾವನ್ನು ನಿರ್ಮಿಸಿದ್ದರು. ಇದೀಗ ಪ್ರಿಯಾಂಕಾ ಚೋಪ್ರಾ ಕೂಡ ತಮ್ಮ ಬ್ಯಾನರ್ ಬಗ್ಗೆ ಘೋಷಣೆ ಮಾಡಿದ್ದರು. ಆದ್ರೆ ಎಲ್ಲರೂ ನಿರ್ಮಾಣದತ್ತ ತಮ್ಮ ಒಲವು ತೋರಿಸುತ್ತಿದ್ರೆ ದಿಪ್ಪಿ ಮಾತ್ರ ನಾನು ಮಾತ್ರ ನಿರ್ಮಾಣಕ್ಕಿಯಲ್ಲ ಎಂದಿದ್ದಾರೆ.
 
ನಿರ್ಮಾಪಕರಾಗುವ ಬಗ್ಗೆ ಮಾತನಾಡಿರುವ ದೀಪಿಕಾ ಸಿನಿಮಾ ನಿರ್ಮಾಣ ಮಾಡೋದು ನನಗೆ ತುಂಬಾ ಕಷ್ಟದ ಕೆಲಸ. ಹಣದ ಲೆಕ್ಕಾಚಾರದಲ್ಲಿ ನಾನು ತುಂಬಾ ಹಿಂದೆ. ಆದ್ರೆ ಯಾವುದೇ ರೀತಿಯ ದಾಖಲೆಗಳನ್ನು ನಿರ್ವಹಣೆ ಮಾಡೋದು, ಇಲ್ಲಾ ಪ್ರೊಡಕ್ಷನ್ ಕೆಲಸ ಬೇಕಾದ್ರೆ ಮಾಡುತ್ತೇನೆ. ಇನ್ನೂ ಯಾರಾದ್ರೂ ನಿರ್ಮಾಪಕರಿಗೆ ಅಸಿಸ್ಟೆಂಟ್ ಆಗುತ್ತೇನೆ. ಆದ್ರೆ ನಿರ್ಮಾಣದ ಜವಬ್ದಾರಿ ಹೊತ್ತುಕೊಳ್ಳೋದು ನನಗೆ ತುಂಬಾ ಕಷ್ಟ ಎಂದಿದ್ದಾರೆ ದೀಪಿಕಾ ಪಡುಕೋಣೆ.

Share this Story:

Follow Webdunia kannada