Select Your Language

Notifications

webdunia
webdunia
webdunia
webdunia

ತಮನ್ನಾ ಗೆ ಮಹೇಶ್ ಬಾಬು ಕಂಡ್ರೆ ಅದ್ಯಾಕೆ ಅಷ್ಟಿಷ್ಟ ?

ತಮನ್ನಾ ಗೆ ಮಹೇಶ್ ಬಾಬು ಕಂಡ್ರೆ ಅದ್ಯಾಕೆ ಅಷ್ಟಿಷ್ಟ ?
chennai , ಗುರುವಾರ, 27 ನವೆಂಬರ್ 2014 (12:14 IST)
ತಮನ್ನ ಭಾಟಿಯಾ ಟಾಲಿವುಡ್ , ಕಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡ ನಟಿ. ಕಾಲಿವುಡ್ ಮತ್ತು ಟಾಲಿವುಡ್ ಜನರು ಕೈ ಹಿಡಿದಂತೆ ಬಾಲಿವುಡ್ ನವರು ಆಕೆಗೆ ಮಣೆ ಹಾಕಲಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. 
 
ಒಟ್ಟಾರೆ ಈಕೆಯ ಐರನ್ ಲೆಗ್ ನಿಂದ ನಟಿಸಿ ಚಿತ್ರಗಳು ತೋಪಾಗಿ ಹೋಯ್ತು ಎಂದು ಆಕೆಯ ವಿರೋಧಿಗಳು ಕಿಸ ಕಿಸ ಎಂದು ನಗುತ್ತ ಮಾತನಾಡಿಕೊಳ್ಳು ತ್ತಿದ್ದಾರಂತೆ. ಹಾಗಂತ  ಸುದ್ದಿ ಇದೆ. ಬಿಡಿ ಆ ವಿಷಯವಲ್ಲ ಈಗ ನಾವು ಹೇಳೋಕೆ ಹೊರಟಿರುವುದು. ತಮನ್ನ ನಟನೆಯ ಇತ್ತೀಚಿನ ಫ್ಲಾಪ್ ಚಿತ್ರ ಆಗಡು. 
 
ಆ ಚಿತ್ರದಲ್ಲಿ ಆಕೆ ಟಾಲಿವುಡ್ ಸ್ಟಾರ್ ನಟ ಪ್ರಿನ್ಸ್ ಮಹೇಶ್ ಬಾಬು ಅವರ ಜೊತೆ ಅಭಿನಯಿಸಿದ್ದಳು. ಆದರೆ ಆ ಚಿತ್ರ ಹೇಳ ಹೆಸರಿಲ್ಲದೆ ಸೋತು ನೆಲ ಕಚ್ಚಿತು. ಈಗಾಗಲೇ ಹಿಂದಿಯಲ್ಲಿ ಸಾಜಿದ್  ಖಾನ್ ಅವರ ನಿರ್ದೇಶನದ ಹಮ್ಷಕಲ್ ಚಿತ್ರದಲ್ಲಿ ಸೋಲು ಕಂಡಿದ್ದ ತಮ್ಮುಗೆ ಈ ಚಿತ್ರದ ಸೋಲು ಬೇಸರ ಉಂಟು ಮಾಡಿತ್ತು. ಆದರೆ ಇವೆಲ್ಲ ಪಕ್ಕಕ್ಕೆ ಇಟ್ಟು ಆಕೆ ಮಹೇಶ್ ಬಾಬು ಅವರನ್ನು ಹೊಗಳೋಕೆ ಆರಂಭ ಮಾಡಿದ್ದಾಳೆ. 
 
ಅಂದರೆ ಈಕೆಗೆ ಮಹೇಶ್ ಬಾಬುರಂತಹ ಗಂಡ ಬೇಕಂತೆ. ಆ ರೀತಿಯ ಅಂಶಗಳನ್ನು  ಹೊಂದಿರುವ  ಹುಡುಗ ಬೇಕಂತೆ ಆಕೆಗೆ ಮದುವೆಯಾಗಲು. ಆದರೆ ಈ ಸಂಗತಿಯನ್ನು ಕೇಳಿ ಸಿನಿಮಾ ಮಂದಿ ಸುಮ್ಮನೆ ಸುದ್ದಿ ಹರಡುತ್ತಿದ್ದಾರಂತೆ ಏನೇನೋ? ಛೆ! ಏನ್ರಿ ತಮ್ಮು ಮತ್ತು ಮಹೇಶ್ ಕಥೆ ? 
 

Share this Story:

Follow Webdunia kannada