Select Your Language

Notifications

webdunia
webdunia
webdunia
webdunia

ನನ್ನ ಸೌಂದರ್ಯದ ಬಗ್ಗೆ ನನಗೇ ಹೆಮ್ಮೆ: ಹನ್ಸಿಕಾ

ನನ್ನ ಸೌಂದರ್ಯದ ಬಗ್ಗೆ ನನಗೇ ಹೆಮ್ಮೆ: ಹನ್ಸಿಕಾ
, ಮಂಗಳವಾರ, 28 ಏಪ್ರಿಲ್ 2015 (10:39 IST)
ಹನ್ಸಿಕಾ ಮೋಟ್ವಾನಿ  ಅತ್ಯಂತ ಸುಂದರವಾದ ನಟಿ. ಆಕೆ ತನ್ನ ರೂಪ, ಮಾದಕತೆ ಹಾಗೂ ಪ್ರತಿಭೆಯ ಕಾರಣದಿಂದ ಟಾಲಿವುಡ್‌ನಲ್ಲಿ ಉತ್ತಮ ಸ್ಥಾನ ಪಡೆದಿದ್ದಾಳೆ. ಆಗಾಗ ಟಾಲಿವುಡ್ ಕಡೆಗೂ ತನ್ನ ಹೆಜ್ಜೆ ಹಾಕಿ ಅಲ್ಲಿಯೂ ಸಹಿತ ಸೈ ಎನ್ನಿಸಿಕೊಂಡಿದ್ದಾಳೆ. 
ಈಕೆ ಸೌಂದರ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾಳೆ. ಆಕೆಯ ಅಭಿಮಾನಿಗಳು ಬಯಸುವುದು ಸಹ ಅದೇ ಅಂಶವನ್ನಂತೆ! ಸೌಂದರ್ಯ ಉಜ್ವಲ ಮಾಡಿಕೊಳ್ಳುವುದು ಸಹ ಒಂದು ಕಲೆ ಎಂದು ಹೇಳಿರುವ ಆಕೆ,  ತಾನು ಅಳುವ ದೃಶ್ಯಗಳಲ್ಲಿ ಭಾಗವಹಿಸುವುದು ತನ್ನ ಅಭಿಮಾನಿಗಳಿಗೆ ಇಷ್ಟವಾಗದು ಎನ್ನುವ ಮಾತನ್ನು ಸಹಿತ ಆಕೆ ಹೇಳಿದ್ದಾಳೆ. ಆ ಕಾರಣದಿಂದ ತಾನು ತನ್ನ ರೂಪದ ಉಜ್ವಲತೆಗೆ ಸದಾ ಗಮನ ನೆಟ್ಟಿರುವುದಾಗಿ ಸಹಿತ ಆಕೆ ಹೇಳಿದ್ದಾಳೆ. 
 
ತನ್ನ ರೂಪದ ಬಗ್ಗೆ ಅಭಿಮಾನಿಗಳು ಹೊಗಳಿದರೆ ತನಗೆ ಸಕತ್ ಖುಷಿಯಾಗುತ್ತದೆ ಎನ್ನುವ ಮಾತನ್ನು ಆಕೆ ಹೇಳಿದ್ದಾಳೆ. ಚಿಕ್ಕಂದಿನಿಂದ ತನ್ನ ಮನೆಯವರು ತನ್ನನ್ನು ಮಹಾರಾಣಿ ಥರ ನೋಡಿಕೊಂಡಿದ್ದಾರೆ, ಶೂಟಿಂಗ್ ಸಮಯದಲ್ಲೂ ಸಹಿತ ತನಗೆ ಅದೇರೀತಿಯ ಗೌರವ ದೊರಕಿರುವ ಬಗ್ಗೆ ಹೇಳಿದ್ದಾಳೆ. ಈಗ ಆಕೆ ವಿಜಯ್ ಜೊತೆ ಪುಲಿ ಚಿತ್ರದಲ್ಲಿ ನಟಿಸುತ್ತಿದ್ದಾಳೆ.

Share this Story:

Follow Webdunia kannada