Select Your Language

Notifications

webdunia
webdunia
webdunia
webdunia

ನನಗೆ ಆರೇಂಜ್ ಮ್ಯಾರೇಜ್ ಇಷ್ಟ: ಸಲ್ಮಾನ್

ನನಗೆ ಆರೇಂಜ್ ಮ್ಯಾರೇಜ್ ಇಷ್ಟ: ಸಲ್ಮಾನ್
, ಶುಕ್ರವಾರ, 3 ಜುಲೈ 2015 (10:25 IST)
ಸಲ್ಮಾನ್ ಖಾನ್. ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ . ಇದುವರೆಗೆ ಅದೆಷ್ಟೋ ಮಂದಿ ಬಾಲಿವುಡ್ ಬೆಡಗಿಯರ ಜೊತೆ ಸಲ್ಮಾನ್ ಖಾನ್ ಹೆಸರು ಥಳಕು ಹಾಕಿಕೊಂಡಿದೆ. ಆದ್ರೆ  ಮದುವೆ ವಯಸ್ಸು ದಾಟಿ ವರ್ಷಗಳೇ ಕಳೆದ್ರೂ ಸಲ್ಲು ಮಿಯಾಗೆ ಮದುವೆ ಯೋಗ ಮಾತ್ರ ಇನ್ನು ಕೂಡಿ ಬಂದಿಲ್ಲ. ಇನ್ನು ಮದುವೆ ಬಗ್ಗೆ ಸಲ್ಮಾನ್ ಖಾನ್ ಕೂಡ ಎಲ್ಲೂ ಕೂಡ ಹೆಚ್ಚೇನು ಹೇಳಿಕೊಂಡಿಲ್ಲ. ಆದ್ರೀಗ ಮೊದಲ ಬಾರಿಗೆ ಸಲ್ಮಾನ್ ಖಾನ್ ತಮ್ಮ ಮದುವೆಯ ಬಗ್ಗೆ ಕಲ್ಪನೆಯನ್ನು ಹೊರ ಹಾಕಿದ್ದಾರೆ.
ಅಂದ್ಹಾಗೆ, ಸಲ್ಲು ಹೇಳಿರುವ ಮಾತು  ಅದೆಷ್ಟೋ ಸಲ್ಲು ಮಹಿಳಾ ಅಭಿಮಾನಿಗಳಿಗೆ ಸಖತ್ ಸಂಪ್ರೈಸ್ ನೀಡಿದೆ. ಸಲ್ಲು ಇಷ್ಟು ದಿನ ಅದೆಷ್ಟೋ ನಟಿಮಣಿಯರೊಂದಿಗೆ ಪ್ರೇಮಪಾಶದಲ್ಲಿ ಬಿದ್ದಿದ್ದಾರೆ. ಆದ್ರೆ ಇದೀಗ ಸಲ್ಮಾನ್ ತನಗೆ ಆರೇಜ್ ಮ್ಯಾರೇಜ್ ನಲ್ಲಿ ಹೆಚ್ಚಿನ ನಂಬಿಕೆ ಎಂದಿದ್ದಾರೆ. ಆದ್ರೆ ಇದುವರೆಗೂ ನನಗೆ ಯಾರೂ ಕೂಡ ಈ ರೀತಿಯ ಪ್ರೊಪೋಸಲ್ ನೀಡಿಲ್ಲ, ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ. ಇನ್ನು ಸಲ್ಮಾನ್ ನೀಡಿರುವ ಹೇಳಿಕೆ ಹಲವರಿಗೆ ಆಶ್ಚರ್ಯ ಮೂಡಿಸಿದೆ.
 
ಇನ್ನು ಸಲ್ಲು ಈ ರೀತಿ ಹೇಳೋದಕ್ಕೂ ಕಾರಣವಿದೆ. ಶಾಹೀದ್ ಕಪೂರ್  ಆರೇಜ್ ಮ್ಯಾರೇಜ್ ಆಗುತ್ತಿರುವ ಬಗ್ಗೆ ಮಾತನಾಡಿರುವ ಸಲ್ಲು ತನ್ನ ವೋಟು ಆರೇಜ್ ಮ್ಯಾರೇಜ್ ಗೆ ಎಂದಿದ್ದಾರೆ. ಇನ್ನು ಶಾಹೀದ್ ಮದುವೆ ಬಗ್ಗೆ ಮಾತನಾಡಿರುವ ಸಲ್ಲು ಶಾಹೀದ್ ನನ್ನನ್ನು ಇದುವರೆಗೂ ಮದುವೆಗೆ ಕರೆದಿಲ್ಲ. ಕರೆದರೆ ಖಂಡಿತಾ ಹೋಗುತ್ತೇನೆ ಎಂದಿದ್ದಾರೆ.

Share this Story:

Follow Webdunia kannada