ಹ್ಯಾಪಿ ಎಂಡಿಂಗ್ ಚಿತ್ರದ ಅಭೂತಪೂರ್ವ ಯಶಸ್ಸು ಗಳಿದ ಬಳಿಕ ನಟಿ ಇಲಿಯಾನಾಗೆ ಈಗ ಅವಕಾಶಗಳು ಹೇರಳವಾಗಿ ಹುಡುಕಿಕೊಂಡು ಬರುತ್ತಿವೆ. ಇದಕ್ಕೆ ಸಂಬಂಧ ಪಟ್ಟಂತೆ ನಾವು ಈ ಮೊದಲು ತಿಳಿಸಿದ್ದೆವು.
ಇಲಿಯಾನ ಹ್ಯಾಪಿ ಎಂಡಿಂಗ್ ನಲ್ಲಿ ಅತ್ಯಂತ ಮಾದಕವಾಗಿ ನಟನೆ ಮಾಡಿದ ಕಾರಣದಿಂದ ಆಕೆಯು ಈಗ ಅಂತಹದ್ದೇ ಪಾತ್ರಗಳು ಸಹಿತ ಸಿಗುವುದಾಗಿ ಸಹಿತ ತಿಳಿಸಿದ್ದೆವು. ಹ್ಯಾಪಿಯಲ್ಲಿ ಹೀರೋ ಆಗಿದ್ದಾರೆ ಸೈಫ್ ಅಲಿ ಖಾನ್. ಅವರ ಜೊತೆ ಮೈ ಚಳಿ ಬಿಟ್ಟು ನಟಿಸಿದ್ದ ಇಲಿಯಾನ ತನ್ನ ನಟನೆ ನೋಡಿ ಸೈಫ್ ಪತ್ನಿ ಬೆಬೋಗು ಸಹಿತ ಹೊಟ್ಟೆ ಉರಿ ಬೇಕು
ಅಷ್ಟೊಂದು ಚೆನ್ನಾಗಿ ಬೆಡ್ ರೂಂ ಸೀನ್ ಗಳಲ್ಲಿ ನಟಿಸಿದ್ದೇನೆ ಎಂದು ಹೇಳಿದ್ದಳು.ಹಾಗಾದ್ರೆ ಇವರಿಬ್ಬರ ನಡುವೆ ಕಿತ್ತಾಟ ನಡೆದಿರ ಬಹುದು ಎಂದು ನಿಮಗೆ ಅನ್ನಿಸಿದ್ದರೆ ಅದು ಸಂಪೂರ್ಣ ತಪ್ಪು. ಕರೀನ ಕಪೂರ್ ಹಾಗೂ ಇಲಿಯಾನ ಅತ್ಯುತ್ತಮ ಸ್ನೇಹಿತರಂತೆ. ಹಾಗಂತ ಖುದ್ದು ಇಲಿಯಾನ ಹೇಳಿದ್ದಾಳೆ. ಹ್ಯಾಪಿ ಎಂಡಿಂಗ್ ಚಿತ್ರದಲ್ಲಿ ಕರೀನ ಅತಿಥಿ ಪಾತ್ರಧಾರಿಯಾಗಿದ್ದಾಳೆ.
ಶೂಟಿಂಗ್ ಸಮಯದಲ್ಲಿ ಅದರಲ್ಲೂ ಕರೀನ ದೃಶ್ಯಗಳು ಇರಲಿ ಬಿಡಲಿ ಆಕೆಯು ಇವರ ಜೊತೆ ಇದ್ದು ಬಿಡುತ್ತಿದ್ದಳಂತೆ. ಆಟ ಪಾಠ ಎಲ್ಲವು ಒಟ್ಟಿಗೆ ನಡೆಯುತ್ತಿತ್ತಂತೆ. ಪ್ರೊಡಕ್ಷನ್ ಗೆ ಸಂಬಂಧ ಪಟ್ಟಂತೆ ಹೊಣೆ ಹೊತ್ತಿದ್ದ ಕರೀನ ಸೆಟ್ ಗೆ ಬರುತ್ತಾ ಇದ್ದಳಂತೆ ತಪ್ಪದೆ. ತುಂಬಾ ಸರಳವಾಗಿ ಇಲಿಯಾನ ಜೊತೆ ಕರೀನಾ ಇರುತ್ತಿದ್ದಳಂತೆ.
ಆಕೆಯಿಂದ ತಾನು ಸಾಕಷ್ಟು ಕಲಿಯುವುದಿದೆ , ಸಿನಿಮಾ ವೃತ್ತಿಯಲ್ಲಿ ಆಕೆ ಅತ್ಯಂತ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದು ಹೇಳಿದ್ದಾಳೆ ಇಲಿಯಾನ. ಈ ಚಿತ್ರ ಎರಡು ಸಾವಿರ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿದ್ದು. ಮೊದಲ ದಿನವೇ 4 ರಿಂದ 5 ಕೋಟಿಗಳಷ್ಟು ಹಣ ಗಳಿಕೆ ಮಾಡಿದೆ.