Select Your Language

Notifications

webdunia
webdunia
webdunia
webdunia

ಸಿನಿಮಾಗಾಗಿ ಅಡುಗೆ ಕಲಿತ ಅರ್ಜುನ್ ಕಪೂರ್

ಸಿನಿಮಾಗಾಗಿ ಅಡುಗೆ ಕಲಿತ ಅರ್ಜುನ್ ಕಪೂರ್
, ಶನಿವಾರ, 28 ನವೆಂಬರ್ 2015 (10:41 IST)
ಅರ್ಜುನ್ ಕಪೂರ್ ಹಾಗೂ ಕರೀನಾ ಕಪೂರ್ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಕೀ ಆಂಡ್ ಕಾ. ಸಿನಿಮಾದಲ್ಲಿ ಅರ್ಜುನ್ ಕಪೂರ್ ಅವರದ್ದು ವಿಭಿನ್ನವಾದ ಪಾತ್ರವಂತೆ. ಲಿಂಗ ಸಮಾನತೆ ಕುರಿತಾದ ಈ ಸಿನಿಮಾದಲ್ಲಿ ಅರ್ಜುನ್ ಅಮ್ಮವರ ಗಂಡನಾಗಿ ಕಾಣಿಸಿಕೊಂಡಿದ್ದಾರೆ. 
 
 
ಸಿನಿಮಾದಲ್ಲಿ ಕರೀನಾ ಕಪೂರ್ ಕೆಲಸಕ್ಕೆ ಹೋಗುವ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್ ಮನೆಯಲ್ಲಿಯೇ ಇರೋ ಅಮ್ಮೋರ ಗಂಡನಾಗಿ ಕಾಣಿಸಿಕೊಂಡಿದ್ದಾರೆ. ಮನೆಯಲ್ಲೇ ಇರೋ ಪತಿಯಾಗಿರೋದರಿಂದ ಅಡುಗೆ ಕೆಲಸ ಅರ್ಜುನ್ ಅವರದ್ದಂತೆ. ಹಾಗಾಗಿ ಅರ್ಜುನ್ ಕಪೂರ್ ಅವರು ಸಿನಿಮಾಗಾಗಿಯೇ ಅಡುಗೆ ಮಾಡೋದನ್ನು ಕಲಿತಿದ್ದಾರಂತೆ. ಇದೊಂದು ಭಿನ್ನವಾದ ಪಾತ್ರವಾದ್ದರಿಂದ ಅರ್ಜುನ್ ಪಾತ್ರಕ್ಕಾಗಿ ಸಾಕಷ್ಟು ಕಸರತ್ತುಗಳನ್ನು ಮಾಡಿದ್ದಾರಂತೆ.
 
ಕೀ ಆಂಡ್ ಕಾ ಸಿನಿಮಾ ಇಂದಿನ ಸಮಾಜಕ್ಕೆ ಹೋಲಿಕೆಯಾಗುವಂತೆ ಸಿನಿಮಾವಂತೆ. ಪ್ರೇಕ್ಷಕರಿಗೂ ಈ ಸಿನಿಮಾ ತುಂಬಾ ಇಷ್ಟವಾಗುತ್ತೆ ಅಂತಾ ಅರ್ಜುನ್ ಕಪೂರ್ ಹೇಳಿದ್ದಾರೆ. ಇನ್ನು ಕರೀನಾ  ಕಪೂರ್ ಅವರನ್ನು ಮೊದಲಿನಿಂದಲೂ ಪರಿಚಯ ಇರೋದರಿಂದ ಅವರ ಜೊತೆ ಅಭಿನಯಿಸೋದು ನನಗೇನೂ ಅಷ್ಟು ಕಷ್ಟವಾಗಲಿಲ್ಲ ಅಂತಾ ಅವರು ಹೇಳಿದ್ದಾರೆ.ಸಿನಿಮಾವನ್ನು ಆರ್.ಬಾಲ್ಕಿ ನಿರ್ದೇಶಿಸುತ್ತಿದ್ದಾರೆ.

Share this Story:

Follow Webdunia kannada