Select Your Language

Notifications

webdunia
webdunia
webdunia
webdunia

ಮೊದಲು ನನಗೆ ಆಮೀರ್ ಖಾನ್ ಜೊತೆ ನಟಿಸುವ ಅವಕಾಶ ದೊರೆತಿತ್ತು: ಐಶ್ವರ್ಯಾ ರೈ

ಮೊದಲು ನನಗೆ ಆಮೀರ್ ಖಾನ್ ಜೊತೆ ನಟಿಸುವ ಅವಕಾಶ ದೊರೆತಿತ್ತು: ಐಶ್ವರ್ಯಾ ರೈ
, ಶನಿವಾರ, 3 ಅಕ್ಟೋಬರ್ 2015 (11:10 IST)
ತಮ್ಮ ಜಝ್ಬಾ ಸಿನಿಮಾದ ಪ್ರಮೋಷನ್ ಗಾಗಿ ಐಶ್ವರ್ಯಾ ರೈ ಕಾಮಿಡಿ ನೈಟ್ಸ್ ವಿತ್ ಕಪಿಲ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ತಮ್ಮ ಸಿನಿಮಾ ಜೀವನದ ಆರಂಭದ ದಿನಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಐಶ್, ತಮಗೆ ಮೊದಲ ಸಿನಿಮಾದಲ್ಲಿ ಆಮೀರ್ ಜೊತೆ ನಟಿಸಲು ಅವಕಾಶವೊಂದು ದೊರೆತಿದ್ದನ್ನು ಹೇಳಿಕೊಂಡಿದ್ದಾರೆ.
ರಾಜಾ ಹಿಂದೂಸ್ಥಾನಿ ಸಿನಿಮಾದಲ್ಲಿ ನಟಿಸಲು ಐಶ್ ಆಗಿ ಆಫರ್ ಬಂದಿತ್ತಂತೆ. ಆಗಿನ್ನು ಐಶ್ ಓದುತ್ತಿದ್ದರಂತೆ. ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕಾದ್ದರಿಂದ ಐಶ್ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರಲಿಲ್ಲವಂತೆ. ಬಳಿಕ ನಾನು ವಿಶ್ವ ಸುಂದರಿಯಾಗಿ ಆಯ್ಕೆಯಾದೆ ಅಂತಾ ಐಶ್ವರ್ಯಾ ರೈ ಹೇಳಿಕೊಂಡಿದ್ದಾರೆ. ಆದ್ರೆ ಜಾಹೀರಾತೊಂದರಲ್ಲಿ ನಾನು ಆಮೀರ್ ಜೊತೆ ಅಭಿನಯಿಸಿದ್ದೆ ಎಂದು ಅವರು ಹೇಳಿದ್ದಾರೆ.
 
ಸದ್ಯ ಐಶ್ ಜಝ್ಬಾ ಸಿನಿಮಾದ ರಿಲೀಸ್ ಗಾಗಿ ಕಾಯುತ್ತಿದ್ದಾರೆ. ಸಿನಿಮಾದಲ್ಲಿ ಒಬ್ಬ ತಾಯಿ ಜೊತೆಗೆ ನ್ಯಾಯವಾದಿಯಾಗಿ ಐಶ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅಕ್ಟೋಬರ್ 9 ರಂದು ರಿಲೀಸ್ ಆಗಲಿದೆ.

Share this Story:

Follow Webdunia kannada