Select Your Language

Notifications

webdunia
webdunia
webdunia
webdunia

ಜನವರಿಯಲ್ಲಿ ಬಹು ನಿರೀಕ್ಷಿತ ಐ ಬಿಡುಗಡೆ ?

ಜನವರಿಯಲ್ಲಿ ಬಹು ನಿರೀಕ್ಷಿತ ಐ ಬಿಡುಗಡೆ ?
, ಬುಧವಾರ, 17 ಡಿಸೆಂಬರ್ 2014 (10:35 IST)
ಶಂಕರ್ ಅವರ ನಿರ್ದೇಶನದ  ವಿಕ್ರಮ್ ಅಭಿನಯದ ಭಾರಿ ನಿರೀಕ್ಷೆಗಳನ್ನು ಹೊಂದಿರುವ ಐ ತಮಿಳು ಚಿತ್ರ ಸಂಕ್ರಾತಿ ಸಮಯದಲ್ಲಿ ಬಿಡುಗಡೆ ಆಗಲಿದೆ ಎನ್ನುವ ಸುದ್ದಿ ಇತ್ತು. ಆ ಸುದ್ದಿಯಿಂದ ವಿಕ್ರಮ ಅಭಿಮಾನಿಗಳು ಖುಷಿ ಪಟ್ಟು ಎಂದು ಸಂಕ್ರಾಂತಿ ಬರುತ್ತದೆಯೋ ಎಂದು ಕಾಯುತ್ತಿದ್ದರು. ಆದರೆ ಆದರೆ ಅದು ಸಾಧ್ಯವಿಲ್ಲ ಎನ್ನುವ ಸುದ್ದಿ ಹರಡಿ ಅಭಿಮಾನಿಗಳಿಗೆ ಬೇಸರ ಆಗಿದ್ದು ಸತ್ಯ. ಆದರೆ ಈಗ ಮತ್ತೆ ಖುಷಿ ಪಡುವ ಕಾಲ ಸನ್ನಿಹಿತವಾಗಿದೆ. ಐ ಚಿತ್ರದ ಬಿದುಗಡೆಯ ದಿನಾಂಕವನ್ನು ಈಗ ಪ್ರಕಟಿಸಿದ್ದಾರೆ. 
ಜನವರಿ 9 ರಂದು ಈ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ ಎಂದು ಈಗ ಒಪ್ಪಂದವಾಗಿರುವ ಬಗ್ಗೆ ಕಾಲಿವುಡ್ ನಿಂದ ಸುದ್ದಿ ಹೊರ ಬಂದಿದೆ. ಈಗ ಮೃಗಮುಖದ ಮನುಷ್ಯ ದೇಹದ ಪೋಸ್ಟರ್ಗಳು ಜನರನ್ನು ತುಂಬಾ ಆಕರ್ಷಿಸುತ್ತಿದ್ದು, ಈ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ಚಿತ್ರದ ಆಡಿಯೋ ಬಿಡುಗಡೆಯು ಹೆಚ್ಚು ಸೆಲೆದಿತ್ತು. ಹಾಲಿವುಡ್ ನಟ ಈ ಕಾರ್ಯಕ್ರಮಕ್ಕೆ ಬಂದು ಅದರ ವೈಭೋಗ ಹೆಚ್ಚಿಸಿದ್ದು ಇಲ್ಲಿ ನೆನಪಿಸಿ ಕೊಳ್ಳ ಬಹುದಾಗಿದೆ. ಐ ಚಿತ್ರದಲ್ಲಿ ವಿಕ್ರಮ್ ಜೊತೆ ಅಮಿ ಜಾಕ್ಸನ್ ನಟಿಸಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರ 150 ಕೋಟಿ ರೂಗಳಿಂದ ತಯಾರಾಗಿದೆ. 

Share this Story:

Follow Webdunia kannada