Select Your Language

Notifications

webdunia
webdunia
webdunia
webdunia

ನನ್ನ ಮಗಳಿಗೆ ಸದ್ಯಕ್ಕೆ ಮದುವೆ ಮಾಡಲ್ಲ: ಜಯಮಾಲ

ನನ್ನ ಮಗಳಿಗೆ ಸದ್ಯಕ್ಕೆ ಮದುವೆ ಮಾಡಲ್ಲ: ಜಯಮಾಲ
, ಶನಿವಾರ, 31 ಜನವರಿ 2015 (10:02 IST)
ಇತ್ತೀಚೆಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಮಾಲ ಅವರು ಒಂದು ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆ ಸುದ್ದಿ ಅಥವಾ ವದಂತಿ ಏನೆಂದರೆ ಜಯಮಾಲ ಅವರ ಮಗಳಾದ ಸೌಂದರ್ಯ ಜಯಮಾಲ ಅವರ ಮದುವೆಯನ್ನು ಮಾಡಲು ಗಂಡು ಹುಡುಕುತ್ತಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರ ತಾಯಿ, ನನ್ನ ಮಗಳಿಗೆ ಈಗ 24  ವರ್ಷ, ಮದುವೆಯ  ವಯಸ್ಸೇ. ಆದರೆ ಆಕೆಯು ತಾನು ಮದುವೆ ಆಗ್ತೀನಿ ಎಂದರೆ ನನಗೆ ಗಂಡು ಹುಡುಕುವುದು ಕಷ್ಟವಲ್ಲ. ಅದೇ ರೀತಿ ಅವಳು ಇನ್ನು ಎರಡರಿಂದ ಮೂರು ವರ್ಷಗಳು ಮದುವೆ ಆಗುವುದಿಲ್ಲ ಎಂದು ಹೇಳಿದ್ದಾಳೆ.

ಆಕೆಯ ತಾಯಿಯಾಗಿರುವ ನನಗೆ ಅವಳ ಮದುವೆಯ ಬಗ್ಗೆ ಸಾಕಷ್ಟು ಕನಸುಗಳಿವೆ. ಆದರೆ ಆಕೆಯ ಆಸೆಗೆ ವಿರುದ್ಧವಾಗಿ ನಾನು ಯಾವುದೇ ರೀತಿಯ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆಕೆ ಇನ್ನು ಚಿಕ್ಕವಳಾಗಿದ್ದಾಗಿನಿಂದ ನನಗೆ ಅವಳ ಮದುವೆಯ ಬಗ್ಗೆ ಯೋಚಿಸುವಂತೆ ಮಾಡಿತ್ತು.  ಸಾಮಾನ್ಯವಾಗಿ ಪ್ರತಿಯೋರ್ವ ಪೋಷಕರು ಅಷ್ಟೇ, ತಮ್ಮ ಮಕ್ಕಳ ಮದುವೆಯ ಬಗ್ಗೆ ಅನೇಕ ರೀತಿಯ ಕನಸು ಕಂಡಿರುತ್ತಾರೆ, ನಾನು ಇದಕ್ಕೆ ಹೊರತಲ್ಲ.

ಉಪೇಂದ್ರ ಅವರ ಜೊತೆ ಗಾಡ್ ಫಾದರ್, ಶ್ರೀನಗರ ಕಿಟ್ಟಿ ಜೊತೆ ಪಾರು v/s ದೇವದಾಸ್ ಮತ್ತು ವಿಜಯ್ ಜೊತೆ ಸಿಂಹಾದ್ರಿ ಚಿತ್ರಗಳಲ್ಲಿ ನಟಿಸಿದ ಬಳಿಕ ಆಕೆ ಯಾವ ಚಿತ್ರದಲ್ಲಿ ನಟಿಸಲು ಸಮ್ಮತಿ ತೋರಿಲ್ಲ. ಪ್ರಸ್ತುತ ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಹುಡುಕಿಕೊಂಡು ಬಂದಿದೆ. ಎಂದಿದ್ದಾರೆ. ಇತ್ತೀಚಿಗೆ ಅವರು ಸೃಜನ್ ಲೋಕೇಶ್ ಅವರ ಚಿತ್ರ ಸಪ್ನೋಂಕಿ ರಾಣಿಗೆ  ಹಿನ್ನೆಲೆ ಧ್ವನಿ ನೀಡಿದ್ದಾರೆ. ಅವರ ತಾರ ಬದುಕಿನಲ್ಲಿ ಮೊಟ್ಟ ಮೊದಲ ಬಾರಿ ಹೀಗೆ ಧ್ವನಿ ನೀಡಿರುವುದಂತೆ  ಹಾಗಂತ ಹೇಳಿದ್ದಾರೆ ಮೇಡಂ ಜಯಮಾಲ.

Share this Story:

Follow Webdunia kannada