Select Your Language

Notifications

webdunia
webdunia
webdunia
webdunia

ಫೋಟೋಗಾಗಿ ಸ್ವಚ್ಛ ಭಾರತ ಕ್ಯಾಂಪೇನ್ ನಲ್ಲಿ ಭಾಗವಹಿಸಿಲ್ಲ: ಸಲ್ಮಾನ್ ಖಾನ್

ಫೋಟೋಗಾಗಿ ಸ್ವಚ್ಛ ಭಾರತ ಕ್ಯಾಂಪೇನ್ ನಲ್ಲಿ ಭಾಗವಹಿಸಿಲ್ಲ: ಸಲ್ಮಾನ್ ಖಾನ್
, ಶನಿವಾರ, 3 ಅಕ್ಟೋಬರ್ 2015 (11:14 IST)
ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನಕ್ಕೆ ನಿನ್ನೆಗೆ ಒಂದು ವರ್ಷ. ಮೋದಿಯವರ ಅಭಿಯಾನದಲ್ಲಿ ನಟ ಸಲ್ಮಾನ್ ಖಾನ್ ಕೂಡ ಕೈಜೋಡಿಸಿದ್ದರು. ಆದ್ರೆ ಸಲ್ಮಾನ್ ಖಾನ್ ತಾವು ಅಭಿಯಾನಕ್ಕಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಮೋದಿಯವರು ಅಭಿಯಾನಕ್ಕಾಗಿ ಆಯ್ಕೆ ಮಾಡಿದ್ದ  100 ಮಂದಿಯನ್ನು ವಿಶೇಷ ವ್ಯಕ್ತಿಗಳಾಗಿ ಆಯ್ಕೆ ಮಾಡಲಾಗಿತ್ತು. ಅದರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ಆದ್ರೆ ಸಲ್ಮಾನ್ ಖಾನ್ ಅವರನ್ನು ಇತ್ತೀಚೆಗೆ ಸ್ವಚ್ಛ ಭಾರತ ಅಭಿಯಾನ್ಕಕೆ ನೀವೇನು ಕೊಡುಗೆ ಸಲ್ಲಿಸಿದದೀರಿ ಎಂದು ಕೇಳಲಾಗಿತ್ತು. ಅದಕ್ಕೆ ನಾನು ಸ್ವಚ್ಛತೆಯ ಸಿನಿಮಾ ಮಾಡಿದ್ದೇನೆ. ಸ್ವಚ್ಛತಾ ಅಭಿಯಾನ ಒಂದು ಫೋಟೋ ಸೆಷನ್ ಅಲ್ಲ. ಈಗಷ್ಟೇ ಅಭಿಯಾನ ಆರಂಭವಾಗಿ ಒಂದು ವರ್ಷವಾಗಿದೆ. ಮುಂದೇನಾಗುತ್ತೋ ನೋಡೋಣ ಎಂದಿದ್ದಾರೆ.
 
ಸಲ್ಲು ಉತ್ತರ ಅವರು ಸ್ವಚ್ಛತಾ ಅಭಿಯಾನಕ್ಕೆ ಪ್ರಾಮಾಣಿಕ ಕೊಡುಗೆ ಸಲ್ಲಿಸಿದ್ದಾರೆ ಅನ್ನೋದನ್ನು ಸ್ಪಷ್ಟ ಪಡಿಸುತ್ತಿದೆ. ಸಲ್ಲು ಸದ್ಯ ಪ್ರೇಮ್ ರತನ್ ಧನ್ ಪಾಯೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ದೀಪಾವಳಿ ಹಬ್ಬದ ವೇಳೆಗೆ ರಿಲೀಸ್ ಆಗಲಿದೆ.

Share this Story:

Follow Webdunia kannada