Select Your Language

Notifications

webdunia
webdunia
webdunia
webdunia

ಸಿಂಬು "ನಾನವನಲ್ಲ" ಅನ್ನುತ್ತಾನೆ, ಹರ್ಷಿಕಾ "ನಾನವಳಲ್ಲ" ಎನ್ನುತ್ತಾಳೆ

ಸಿಂಬು
ಮಲೇಷ್ಯಾ , ಸೋಮವಾರ, 22 ಸೆಪ್ಟಂಬರ್ 2014 (16:11 IST)
ಮಲೇಷ್ಯಾದ ಹೋಟೆಲ್‌ನಲ್ಲಿ ತಮಿಳು ಚಿತ್ರನಟ ಸಿಂಬು ನಟಿಯೊಬ್ಬರಿಗೆ ಮುತ್ತು ನೀಡಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ತೆರೆಯ ಮೇಲೆ ಕಿಸ್ಸಿಂಗ್ ಸೀನ್‌ಗಳಿಂದ ಸುದ್ದಿ ಮಾಡಿದ್ದ ಸಿಂಬು ರಿಯಲ್ ಕಿಸ್ ನೀಡುತ್ತಿರುವುದನ್ನು ಮಲೇಷ್ಯಾದ ಹೊಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಂಬು ಕುಡಿದ ಮತ್ತಿನಲ್ಲಿ ನಟಿಯೊಬ್ಬಳಿಗೆ ಕಿಸ್ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಈಗ ಅಂತರ್ಜಾಲ ತಾಣದಲ್ಲಿ ಹರಿದಾಡುತ್ತಿರುವ ಈ ದೃಶ್ಯದಲ್ಲಿ ಹರ್ಷಿಕಾ ಪೂಣಚ್ಚ ಹೆಸರನ್ನು 
ತಳಕುಹಾಕಲಾಗಿತ್ತು.

 ಮಲೇಷ್ಯಾದಲ್ಲಿ ನಡೆದ ಸಮಾರಂಭದಲ್ಲಿ ಹರ್ಷಿಕಾಳನ್ನು ಸಿಂಬುವಿಗೆ ಪರಿಚಯಿಸಲಾಗಿತ್ತು. ಹರ್ಷಿಕಾ ಸಿಂಬುವಿನ ನಟನೆ ಮತ್ತು ಡ್ಯಾನ್ಸಿಂಗ್‌ ನೋಡಿ ಫುಲ್ ಖುಷ್ ಆಗಿದ್ದಳು. ಸಿಂಬು ಜೊತೆ ಛಾಯಾಚಿತ್ರಕ್ಕೆ ಕೂಡ ಹರ್ಷಿಕಾ ಫೋಸ್ ನೀಡಿದ್ದರು. ಕೇವಲ ಅಷ್ಟಕ್ಕೆ ಮಾತ್ರ ತಮ್ಮಿಬ್ಬರ ನಡುವೆ ಸಂಬಂಧ ಸೀಮಿತವಾಗಿದೆ ಎಂದು ಹರ್ಷಿಕಾ 
ಈಗ ಹೇಳಿದ್ದಾರೆ. ಆದರೆ ಸಿಂಬು ಕಿಸ್ ನೀಡಿದ ನಟಿ ಯಾರು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ.

ಆದರೆ  ಚಿತ್ರದಲ್ಲಿರುವ ಕಿಸ್ ಕೊಡುತ್ತಿರುವ ಅವನು ನಾನಲ್ಲ, ನಾನವನಲ್ಲ ಎಂದು ಸಿಂಬು ಹೇಳುತ್ತಾರೆ.  ಸಿಂಬುಗೆ ಕಿಸ್ ನೀಡಿದ ಅವಳು ನಾನಲ್ಲ ಎಂದು ಹರ್ಷಿಕಾ ಹೇಳುತ್ತಿದ್ದಾಳೆ. ಯಾರನ್ನು ನಂಬುವುದು, ಯಾರನ್ನು ಬಿಡುವುದು ಗೊತ್ತಾಗುತ್ತಿಲ್ಲ. 

Share this Story:

Follow Webdunia kannada