Select Your Language

Notifications

webdunia
webdunia
webdunia
webdunia

ನಾನು ಹಿಂದೂ-ಮುಸ್ಲಿಂ: ಸಲ್ಮಾನ್ ಖಾನ್

ನಾನು ಹಿಂದೂ-ಮುಸ್ಲಿಂ: ಸಲ್ಮಾನ್ ಖಾನ್
, ಗುರುವಾರ, 30 ಏಪ್ರಿಲ್ 2015 (10:32 IST)
ಸಲ್ಮಾನ್ ಖಾನ್ ತನ್ನ ಧರ್ಮ ಹಾಗೂ ಜಾತಿಯ ಬಗ್ಗೆ ಕೋರ್ಟ್ ನಲ್ಲಿ ಹೇಳಿದ ರೀತಿಗೆ ಎಲ್ಲರೂ ಅವರತ್ತ ದೃಷ್ಟಿ  ಹಾಯಿಸುವಂತಾಗಿದೆ. ಅವರು ಇತ್ತೀಚಿಗೆ ಕೋರ್ಟ್ ನಲ್ಲಿ ನೀಡಿದ ಹೇಳಿಕೆಗಳು ಅತ್ಯಂತ ವಿಶೇಷ ಹಾಗೂ ವಿಸ್ಮಯವಾಗಿತ್ತು. ಸಲ್ಮಾನ್ ಬಳಿ ಅವರ ಜಾತಿಯ ಬಗ್ಗೆ ಕೇಳಿದಾಗ ಭಾರತೀಯ ಎಂದು ಉತ್ತರಿಸಿದರು. ಭಾರತೀಯತೆ ಎನ್ನುವುದು ಕುಲವಲ್ಲ, ತಾನು ಹಿಂದೂ-ಮುಸ್ಲಿಂ ಎಂದು ಉತ್ತರಿಸಿದರು. ಅದು ಹೇಗೆ ಸಾಧ್ಯ ಎಂದಾಗ ತನ್ನ ತಾಯಿ ಹಿಂದೂ ಹಾಗೂ ತಂದೆ ಮುಸ್ಲಿಂ ಎಂದು ಈ ಸಮಯದಲ್ಲಿ  ತಿಳಿಸಿದ್ದಾರೆ.  
1998ರಲ್ಲಿ ಸಿನಿಮಾ ಶೂಟಿಂಗ್ ಗೆಂದು ರಾಜಸ್ತಾನಕ್ಕೆ ಹೋದಾಗ ಅಲ್ಲಿ ಕೃಷ್ಣಜಿಂಕೆಯನ್ನು ಬೇಟೆಯಾಡಿದ ಕೇಸ್‌ನ ವಿಚಾರಣೆಗೆಂದು ಜೋಧ್ ಪುರ ಕೋರ್ಟ್ ಗೆ ಹೋಗಿದ್ದರು. ಆ ಸಮಯದಲ್ಲಿ ಆ ಸಮಯದಲ್ಲಿ ಆತನ ಮೇಲಿರುವ ಆಪಾದನೆಗಳನ್ನು ಓದಲೆಂದು ಅವರ ಜಾತಿ, ಧರ್ಮ ಕೇಳಿದಾಗ ಸಲ್ಮಾನ್ ಖಾನ್ ಈ ರೀತಿ ಉತ್ತರಿಸಿದ್ದಾರೆ. 

Share this Story:

Follow Webdunia kannada