Select Your Language

Notifications

webdunia
webdunia
webdunia
webdunia

ಮಕ್ಕಳೊಂದಿಗೆ ಸಿನಿಮಾ ನೋಡುತ್ತಾ ಖುಷಿಯಾಗಿ ಕಾಲ ಕಳೆದ ಅಪ್ಪ ಹೃತಿಕ್

ಮಕ್ಕಳೊಂದಿಗೆ ಸಿನಿಮಾ ನೋಡುತ್ತಾ  ಖುಷಿಯಾಗಿ ಕಾಲ ಕಳೆದ ಅಪ್ಪ ಹೃತಿಕ್
, ಬುಧವಾರ, 29 ಜುಲೈ 2015 (10:23 IST)
ಸದಾ ಬ್ಯುಸಿ ಬ್ಯುಸಿ  ವೃತ್ತಿ ಬದುಕಿನ ನಡುವೆ  ವೈಯಕ್ತಿಕ ಬದುಕಿನಲ್ಲಿಯೂ ಲೋಪ ಬರದಂತೆ ಅನೇಕರು ತಮ್ಮ ಬದುಕನ್ನು ಸಾರ್ಥಕ ಮಾಡಿಕೊಂಡಿರುತ್ತಾರೆ. ಅದರಲ್ಲಿ ನಟ ಹೃತಿಕ್ ರೋಶನ್ ಹೊರತಲ್ಲ. ಪ್ರಸ್ತುತ ಅವರು ಅಶುತೋಷ್ ಗೊವಾರಿಕರ್ ಅವರ  ನಿರ್ದೇಶನದ ಮೊಹೆಂಜೊದಾರೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಬಿಡುವು ಮಾಡಿಕೊಂಡು ತನ್ನ ಮಕ್ಕಳಾದ ಹ್ರಿಯಾನ್, ಹ್ರಿದಾನ್ ಜೊತೆ ಮುಂಬೈ ನಲ್ಲಿರುವ ಪಿವಿಆರ್ ಗೆ ಹೋಗಿ ಸಿನಿಮಾ ವೀಕ್ಷಿಸಿ ಬಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಮಕ್ಕಳೊಂದಿಗೆ ದಕ್ಷಿಣ ಆಫ್ರಿಕಾಗೆ ಹೋಗಿದ್ದು, ಅಲ್ಲಿಂದ ಮಕ್ಕಳ ಜೊತೆ ಮಾಲ್ಡೀವ್ಸ್ ಗೂ ಸಹಿತ ಹೊಗಿಬಂದಿದ್ದರು. ಈಗ ಸಿನಿಮಾ ನೋಡಿ ಮಕ್ಕಳ ಖುಷಿ ಹೆಚ್ಚಿಸಿದ್ದಾರೆ ಅಪ್ಪ ಹೃತಿಕ್. ಸುಸೈನ್ ಮತ್ತು ಹೃತಿಕ್ ವಿಚ್ಛೇದನ ಪಡೆದ ಬಳಿಕ ಮಕ್ಕಳಲ್ಲಿ ಉಂಟಾದ ಒಂಟಿತನ ದೂರ ಮಾಡಲು ಅವರ ಬಳಿ ಸಾಕಷ್ಟು ಸಮಯ ಕಳೆಯಲು ಆದ್ಯತೆ ನೀಡುತ್ತಿದ್ದಾರೆ. ಅವರ ಫಲಶ್ರುತಿ ಈ ವಿದೇಶದ ಸುತ್ತಾಟ, ಸಿನಿಮಾ ವೀಕ್ಷಣೆ.  
ಹೃತಿಕ್ ನಟನೆಯ ಮೊಹೆಂಜೊ ದಾರೋ ಚಿತ್ರವು 2016 ಕ್ಕೆ ಬಿಡುಗಡೆ ಆಗಲಿದೆ. ಭಾರೀ ಮೊತ್ತದಿಂದ ತಯಾರಾಗುತ್ತಿರುವ ಚಿತ್ರ ಇದಾಗಿದೆ.ಸಿಂಧು ಕಣಿವೆ ನಾಗರೀಕತೆಯಲ್ಲಿ ನಡೆಯುವ ಪ್ರೇಮ ಕಥೆಯನ್ನು ಒಳಗೊಂಡ ಚಿತ್ರವಾಗಿದೆ. ಸಂಪೂರ್ಣವಾಗಿ ಆಗಿನ ಕಾಲದ ವೈಭವವನ್ನು ಗೊವಾರಿಕರ್ ಪರದೆ ಮೇಲೆ ತೋರಿಸುತ್ತಿದ್ದಾರೆ. ಈಗ ಹೃತಿಕ್ ಹಾಗೂ ಸೋನಂ ಕಪೂರ್ ಜೊತೆ  ಟರ್ಕಿ ದೇಶದ ಅಂತಲ್ಯಕ್ಕೆ ಹೋಗಿದ್ದಾರೆ. ಅಲ್ಲಿ 90 ರ ದಶಕದ ರೊಮ್ಯಾಂಟಿಕ್ ಚಿತ್ರ ಆಶಿಕಿ ಮತ್ತು ಅದರ ಗೀತೆ ಧೀರೆ ಧೀರೆ ಸೆ  ಹಾಡನ್ನು ಪುನಃ ಚಿತ್ರೀಕರಣ ಮಾಡಲಾಗುತ್ತಿದ್ದು, ಅದರಲ್ಲಿ ಭಾಗವಹಿಸಲು ಈ ತಾರ ಜೋಡಿ ಹೋಗಿದ್ದಾರೆ. ಗುಲ್ಷನ್ ಕುಮಾರ್ ಅವರ  ಚಿರಸ್ಮರಣೆ ಮತ್ತು ಆಶಿಕಿ  ಚಿತ್ರದ 25 ನೇ ಬರ್ತ್ಡೇ ಅಂಗವಾಗಿ ಈ  ಹಾಡು ಚಿತ್ರೀಕರಣ ಮಾಡಲಾಗುತ್ತಿದೆ.  

Share this Story:

Follow Webdunia kannada