Select Your Language

Notifications

webdunia
webdunia
webdunia
webdunia

ಮೋಸ್ಟ್ ಸೆಕ್ಸಿಯೆಸ್ಟ್ ಮ್ಯಾನ್ ಹೃತಿಕ್ ರೋಶನ್ ಸೆಕ್ಸ್ ಬಗ್ಗೆ ಹೇಳಿದ ಸಂಚಲನದ ನುಡಿಗಳು...!

ಮೋಸ್ಟ್ ಸೆಕ್ಸಿಯೆಸ್ಟ್ ಮ್ಯಾನ್ ಹೃತಿಕ್ ರೋಶನ್ ಸೆಕ್ಸ್ ಬಗ್ಗೆ ಹೇಳಿದ ಸಂಚಲನದ ನುಡಿಗಳು...!
, ಶನಿವಾರ, 13 ಡಿಸೆಂಬರ್ 2014 (09:54 IST)
ಗ್ರೀಕ್ ದೇವತಂತೆ ಇರುವ ಹೃತಿಕ್ ರೋಶನ್ ಹೆಣ್ಣು ಮಕ್ಕಳ ಕನಸಿನ ರಾಜ ಕುಮಾರ. ಆ ರಾಜಕುಮಾರ ಇತ್ತೀಚಿಗೆ ಸೆಕ್ಸ್ ಬಗ್ಗೆ ನೀಡಿಯ ವಿವರಣೆ ಅತ್ಯಂತ ಬಲಯುತವಾಗಿದೆ.  ಬ್ರಿಟನ್   ವಾರಪತ್ರಿಕೆ ಈಸ್ಟ್ರನ್ ಐ  ಪ್ರತಿವರ್ಷ ಪ್ರತಿವರ್ಷ ಪ್ರಕಟಿಸುವಂತೆ ಈ ವರ್ಷವೂ ಸಹ  ಸೆಕ್ಸಿ ಗಂಡಸರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 
ಈ ವರ್ಷ ಪ್ರಕಟ ಮಾಡಿದ 50  ಮಂದಿ ಸೆಕ್ಸಿ   ಪುರುಷರ ಪಟ್ಟಿಯಲ್ಲಿ ಈ ಬಾರಿಯೂ ಸಹ ಹೃತಿಕ್ ರೋಶನ್ ಸ್ಥಾನ ಪಡೆದಿದ್ದಾರೆ. ಇದರಲ್ಲಿ  ಪ್ರಥಮಸ್ಥಾನದಲ್ಲಿ ಹೃತಿಕ್ ರೋಶನ್ ಇದ್ದರೆ ಹತ್ತನೇ ಸ್ಥಾನದಲ್ಲಿ ಸಲ್ಮಾನ್ ಖಾನ್ ಇದ್ದಾರೆ.ಏಷ್ಯ ದೇಶಗಳ ಶೃಂಗಾರ ಪುರುಷ ಎನ್ನುವ ಅಗ್ಗಳಿಕೆ ಪಡೆದು ಮೋಸ್ಟ್ ಸೆಕ್ಸಿಯೆಷ್ಟ್ ಮ್ಯಾನ್ ಎನ್ನು ಅಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.  
 
ಈ ಬಗ್ಗೆ  ಹೃತಿಕ್ ಸ್ಪಂದಿಸುತ್ತಾ, ಸೆಕ್ಸ್ ಅನ್ನುವುದು ದೇಹಕ್ಕೆ ಸಂಬಂಧ ಪಟ್ಟಿದುದಲ್ಲ. ಅದು ಮನಸ್ಸಿಗೆ ಸಂಬಂಧ ಪಟ್ಟ ಸಂಗತಿ ಎಂದು ಹೇಳುತ್ತಾ ಸದಾ ನಗಿಸುತ್ತಾ, ನಗುತ್ತ, ಎಲ್ಲರನ್ನು ನಗಿಸುವ ಶಕ್ತಿ ಹೊಂದಿರುವ ನಮ್ಮ ಬಗ್ಗೆ ಬೇರೆಯವರ ಹೃದಯದಲ್ಲಿ ಒಂದು ಸ್ಥಾನ ಏರ್ಪಡುತ್ತದೆ. ಅದೇ ನಿಜವಾದ ಸೆಕ್ಸಿನೆಸ್ ಎಂದು ಹೇಳಿ ಎಲ್ಲರು ಹೃತಿಕ್ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದಾರೆ. 
 
ಮುಂದಿನ ಜನವರಿಯಲ್ಲಿ ಹೃತಿಕ್ 41  ರ ಹರೆಯಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಹೃತಿಕ್ ಯಶಸ್ಸಿನ  ದಾರಿ ಮತ್ತಷ್ಟು ಉಜ್ವಲವಾಗಿದ್ದು, ಅವರು ನಂಬರ್ ಒನ್  ಸೂಪರ್ ಸ್ಟಾರ್ ಆಗ್ತಾರೆ ಹಾಗೂ ಮುಂದಿನ ವರ್ಷವೇ ಅವರ ಎರಡನೇ ಮದುವೆ ಆಗುತ್ತದೆ ಎಂದು ಭವಿಷ್ಯ ನುಡಿದ್ದಾರೆ ಓರ್ವ ಭವಿಷ್ಯ ಪಂಡಿತರು.  ಹಾಗಾದ್ರೆ ಮುಂದಿನ ವರ್ಷ ಹೃತಿಕ್ ಕಾಲ!
 

Share this Story:

Follow Webdunia kannada